• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ದಿಗ್ಗಜ ಕ್ರಿಕೆಟ್ ಪಾಠ, ಸೆರೆನಾ ಅದ್ಭುತ ಆಟ

|

ನವದೆಹಲಿ, ಸೆಪ್ಟೆಂಬರ್, 09: ದೇಶ ಬುಧವಾರ ಅನೇಕ ಘಟನಾವಳಿಗಳಿಗೆ ಸಾಕ್ಷಿಯಾಯಿತು. ಬಿಹಾರದ ಚುನಾವಣೆ ವೇಳಾಪಟ್ಟಿ ಘೋಷಣೆ ಬಹು ಮುಖ್ಯವಾದ ಸಂಗತಿ. ಕೇಂದ್ರ ಚುನಾವಣಾಆಯುಕ್ತ ನಸೀಂ ಜೈದಿ 243 ಸದಸ್ಯರ ಬಿಹಾರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಿದರು. ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣೆ ಪ್ರತಿಷ್ಠಯ ಸಂಗತಿಯಾಗಿದ್ದು ಇದಾಗಲೇ ಅನೇಕ ಸುತ್ತಿನ ಪ್ರಚಾರಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಸಹ ಘೋಷಣೆ ಮಾಡಿದ್ದಾರೆ.[ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ]

ಮುಂಬೈ ಆಟಗಾರರಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಪಾಠ ಹೇಳಿಕೊಟ್ಟರು. ಬಾಲಿವುಡ್ ನಟರು ಪ್ರಾಣಿಗಳ ಬಗ್ಗೆ ದಯೆ ತೋರುತ್ತಿದ್ದಾರೆ. ಆನೆಗಳನ್ನು ಸವಾರಿಗೆ ಬಳಸಿಕೊಳ್ಳುತ್ತಿರುವುದನ್ನುನ ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಭಿತ್ತಿ ಪತ್ರ ಹಿಡಿದು ಸರಪಳಿಯಲ್ಲಿ ತಮ್ಮನ್ನು ಬಂಧಿಸಿಕೊಂಡು ವಿರೋಧ ವ್ಯಕ್ತಪಡಿಸಿದರು. ಚೆನ್ನೈನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ. ಜಯಲಲಿತಾ ಅನೇಕ ದಿನಗಳ ನಂತರ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡರು. ಇಡೀ ದೇಶದ ಘಟನಾವಳಿಗಳ ಮೇಲೆ ಒಂದು ಸುತ್ತು ಹಾಕಿ ಬರೋಣ(ಪಿಟಿಐ ಚಿತ್ರಗಳು)

ಬೌಂಡರಿ ಬಾರಿಸೋದು ಹೇಗೆ?

ಬೌಂಡರಿ ಬಾರಿಸೋದು ಹೇಗೆ?

ಮುಂಬೈ ಆಟಗಾರರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್. ಮುಂಬೈ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಮಾಸ್ಟರ್ ಮಾತನ್ನು ಗಮನವಿಟ್ಟು ಆಲಿಸುತ್ತಿದ್ದಾರೆ.

ಬಿಹಾರ ಚುನಾವಣಾ ವೇಳಾಪಟ್ಟಿ

ಬಿಹಾರ ಚುನಾವಣಾ ವೇಳಾಪಟ್ಟಿ

ಕೇಂದ್ರ ಚುನಾವಣಾ ಆಯುಕ್ತ ನಸೀಂ ಜೈದಿ 243 ಸದಸ್ಯರ ಬಿಹಾರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಿದರು. ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣೆ ಪ್ರತಿಷ್ಠಯ ಸಂಗತಿಯಾಗಿದೆ.

ಪ್ರಮಾಣ ಪತ್ರ ಪಡೆದ ಖುಷಿ

ಪ್ರಮಾಣ ಪತ್ರ ಪಡೆದ ಖುಷಿ

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ನವಹೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಧಕರಿಗೆ ಪ್ರಮಾಣ ಪತ್ರ ಪ್ರದಾನ ಮಾಡಿದರು.

ಆನೆ ಸವಾರಿ ಬೇಡ

ಆನೆ ಸವಾರಿ ಬೇಡ

ಆನೆಗಳನ್ನು ಸವಾರಿಗೆ ಬಳಸಿಕೊಳ್ಳುತ್ತಿರುವುದನ್ನು ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ವಿರೋಧಿಸಿದ್ದು ಹೀಗೆ.

ಜಯಲಲಿತಾ ಮಾತು

ಜಯಲಲಿತಾ ಮಾತು

ಚೆನ್ನೈನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ. ಜಯಲಲಿತಾ ಅನೇಕ ದಿನಗಳ ನಂತರ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೇಟ್ಲಿ ಉಪಸ್ಥಿತಿ

ಜೇಟ್ಲಿ ಉಪಸ್ಥಿತಿ

ನವದೆಹಲಿಯಲ್ಲಿ ಇಂಗ್ಲೆಂಡ್ ಮೂಲದ ಮ್ಯಾಗಝೀನ್ ವೊಂದು ಹಮ್ಮಿಕೊಂಡಿರುವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.

ವಿಮಾನ ಅಪಘಾತ

ವಿಮಾನ ಅಪಘಾತ

ಲಾಸ್ ವೆಗಾಸ್ ನಲ್ಲಿ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದ ವಿಮಾನ ದುರಂತದ ಕ್ಷಣಗಳು ಮತ್ತೊಂದು ವಿಮಾನದ ಕಿಟಕಿಯಿಂದ ಕಂಡಿದ್ದು ಹೀಗೆ.

ಸೆರೆನಾ ಪರಾಕ್ರಮ

ಸೆರೆನಾ ಪರಾಕ್ರಮ

ಯುಎಸ್ ಓಪನ್ ನ ಕ್ವಾಟರ್ ಫೈನಲ್ ನಲ್ಲಿ ಅಕ್ಕ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿ ಸೆಮಿಫೈನಲ್ ಗೆ ಏರಿದ ಸೆರೆನಾ ವಿಲಿಯಮ್ಸ್ ಆಟದ ಭಂಗಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News In Pics: Master Blaster Sachin Tendulkar giving playing tips to a Mumbai player as the Mumbai coach Candrakant Pandit looks on at BKC ground, in Mumbai on Wednesday. Chief Election Commissioner Nasim Zaidi with Election Commissioners AK Joti (L) and OP Rawat (R) at a press conference to announce the schedule for the Bihar Assembly elections. The Whole day news in Pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more