ಪಂಚರಾಜ್ಯಗಳ ಫಲಿತಾಂಶ: ಅಭಿಮಾನದ ಅತಿರೇಕ

Written By:
Subscribe to Oneindia Kannada

ನವದೆಹಲಿ, ಮೇ, 20: ಪಂಚ ರಾಜ್ಯಗಳ ಚುನಾವಣೆ ಮುಕ್ತಾಯವಾಗಿ ಫಲಿತಾಂಶವೂ ಹೊರಬಿದ್ದಿದೆ. ಸ್ಥಳೀಯ ಪಕ್ಷಗಳು ಹಕ್ಕು ಸ್ಥಾಪನೆ ಮಾಡಿದರೆ, ಬಿಜೆಪಿ ತೃಪ್ತಿಕರ ಸಾಧನೆ ಮಾಡಿಕೊಂಡಿದೆ. ಅತಿ ದೊಡ್ಡ ನಷ್ಟ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ.

ತಮಿಳುನಾಡಲ್ಲಿ ಜಯಲಲಿತಾ ಅಭಿಮಾನದ ಅತಿರೇಕ ಮುಗಿಲು ಮುಟ್ಟಿತ್ತು. ರಾಜಕೀಯ ಮುಖಂಡರ ಆದಿಯಾಗಿ ಕೈಗಾರಿಕೋದ್ಯಮಿಗಳು ಅಮ್ಮನ ಕಾಲಿಗೆ ಬಿದ್ದಿದ್ದೆ ಬಿದ್ದಿದ್ದು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬೆಂಬಲಿಗರ ಹರ್ಷಕ್ಕೆ ಕೊನೆ ಇರಲಿಲ್ಲ. ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್(72ವರ್ಷ) ಅಧಿಕಾರ ಸ್ವೀಕಾರ ಮಾಡುವುದು ಪಕ್ಕಾ ಆಗಿದೆ.[ಗೆದ್ದವರು ಮತ್ತು ಬಿದ್ದವರ ಪಟ್ಟಿ]

ಬಾಲಿವುಡ್ ತಾರೆಯರಾದ ಮಲ್ಲಿಕಾ ಶೆರಾವತ್, ಸೋನಂ ಕಪೂರ್ ಮಿಂಚಿದ ಬಗೆಯನ್ನು ಕಣ್ಣು ತುಂಬಿಕೊಳ್ಳಲೇಬೇಕು. ದೆಹಲಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ರಾಜ್ ನಾಥ್ ಸಿಂಗ್... ಇನ್ನಷ್ಟು ಸುದ್ದಿ ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ಸಂಭ್ರಮವೋ ಸಂಭ್ರಮ

ಸಂಭ್ರಮವೋ ಸಂಭ್ರಮ

ಚೆನ್ನೈನಲ್ಲಿ ಎಐಡಿಎಂಕೆ ವಿಜಯವನ್ನು ನೃತ್ಯ ಮಾಡಿ ಬರಮಾಡಿಕೊಂಡ ಜಯಲಲಿತಾ ಬೆಂಬಲಿಗರು.

ಬನ್ನಿ ಸ್ಟೆಪ್ ಹಾಕಿ

ಬನ್ನಿ ಸ್ಟೆಪ್ ಹಾಕಿ

ಟಿಎಂಸಿ ವಿಜಯದ ಕೋಲ್ಕತಾದಲ್ಲಿಕಂಡು ಬಂದ ದ್ರಶ್ಯ, ಮಮತಾ ಬ್ಯಾನರ್ಜಿ ಅವರ ವಿಜಯವನ್ನು ಮಹಿಳೆಯರು ಸಂಭ್ರಮಿಸಿದ ಪರಿ.

ನಾವೇನು ಕಡಿಮೆ ಇಲ್ಲ

ನಾವೇನು ಕಡಿಮೆ ಇಲ್ಲ

ಜಯಲಲಿತಾ ವಿಜಯವನ್ನು ಈತ ಆಚರಿಸಿದ ಬಗೆ ನೋಡಿ. ಜಯಲಲಿತಾ ಅವರ ನಿವಾಸದ ಎದುರು ಕಂಡು ಬಂದ ದೃಶ್ಯ.

ಟಿಎಂಸಿ ಆರ್ಭಟ

ಟಿಎಂಸಿ ಆರ್ಭಟ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಾಚರಣೆ ಮಾಡಿದರು.

ಬುದ್ಧ ಪೂರ್ಣಿಮಾ

ಬುದ್ಧ ಪೂರ್ಣಿಮಾ

ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಬುದ್ಧಗಯಾದಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದ ಬೌದ್ಧರು.

ಸಾಧಕರಿಗೆ ಗೌರವ

ಸಾಧಕರಿಗೆ ಗೌರವ

ಹಿರಿಯ ಪತ್ರಕರ್ತ ಶ್ಯಾಮ್ ಕೋಸ್ಲಾ ಅವರಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜೀವನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

 ಮಲ್ಲಿಕಾ ಮೆರಗು

ಮಲ್ಲಿಕಾ ಮೆರಗು

ಕಾನಾಸ್ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್ ಎಲ್ಲರ ಗಮನ ಸೆಳೆದರು.

ಸೋನಂ ಸೊಗಸು

ಸೋನಂ ಸೊಗಸು

ಕಾನಾಸ್ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಸೋನಂ ಕಪೂರ್

ವಿಕೋಪದ ಪ್ರತಿಭಟನೆ

ವಿಕೋಪದ ಪ್ರತಿಭಟನೆ

ಪ್ಯಾರಿಸ್ ನಲ್ಲಿ ಕಾರ್ಮಿಕ ನೀತಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ಹೋದಾಗ ಕಂಡು ಬಂದ ದೃಶ್ಯ.

ಮಳೆ ಮಳೆ ಮಳೆ

ಮಳೆ ಮಳೆ ಮಳೆ

ಕೋಲ್ಕತಾಗೆ ಕಾಲಿಟ್ಟ ವರಣ ಮಾಡಿದ ಅವಘಡಗಳು ಒಂದೇ ಎರಡೇ. ಗಾಳಿ ಮಳೆಗೆ ಛತ್ರಿಯನ್ನು ಬ್ಯಾಲೆನ್ಸ್ ಮಾಡಲು ಮುಂದಾದವರು ಸೆರೆ ಸಿಕ್ಕಿದ್ದು ಹೀಗೆ.

ಮೋದಿಗೆ ಅಭಿನಂದನೆ

ಮೋದಿಗೆ ಅಭಿನಂದನೆ

ದೆಹಲಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ರಾಜ್ ನಾಥ್ ಸಿಂಗ್...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News In Pics: Chennai: AIADMK supporters celebrate the party's victory in Tamil Nadu's assembly elections, in front of Chief Minister J Jayalalithaa's Poes Garden residence in Chennai. Prime Minister Narendra Modi is garlanded by BJP president Amit Shah and Union minister & senior leader Rajnath Singh before a meeting at the party office in New Delhi.
Please Wait while comments are loading...