ದೆಹಲಿ ಸರಕಾರದಿಂದ ಕಠಿಣ ಕ್ರಮ, ಮಾಕ್ಸ್ ಆಸ್ಪತ್ರೆಯ ಲೈಸನ್ಸ್ ರದ್ದು

ದೆಹಲಿ, ಡಿಸೆಂಬರ್ 8: ಜೀವಂತವಿದ್ದ ಶಿಶು ಮರಣವನ್ನಪ್ಪಿದೆ ಎಂದು ಘೋಷಿಸಿ ಬೇಜಾವಬ್ದಾರಿ ನಡವಳಿಕೆ ತೋರಿದ್ದ ದೆಹಲಿಯ ಮಾಕ್ಸ್ ಆಸ್ಪತ್ರೆಯ ಲೈಸನ್ಸ್ ರದ್ದುಗೊಳಿಸಲಾಗಿದೆ. ದೆಹಲಿ ಸರಕಾರ ಈ ಕಠಿಣ ತೀರ್ಮಾನ ತೆಗೆದುಕೊಂಡಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, "ನವಜಾತ ಶಿಶುವಿನ ಸಾವಿನ ಪ್ರಕರಣದಲ್ಲಿ ಬೇಜವ್ದಾರಿ ನಡವಳಿಕೆ ತೋರಿದ ಶಾಲಿಮರ್ ಬಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ಲೈಸನ್ಸ್ ರದ್ದುಗೊಳಿಸಲಾಗಿದೆ," ಎಂದು ಹೇಳಿದ್ದಾರೆ.

Newborn death case: Delhi govt cancels Max Hospital's license

ವೈದ್ಯಕೀಯ ಬೇಜವಾಬ್ದಾರಿ ನಡವಳಿಕೆ ತೋರಿರುವುದು ತನಿಖೆಯಲ್ಲಿ ಸಾಬೀತಾದಲ್ಲಿ ಆಸ್ಪತ್ರೆಯ ಲೈಸನ್ಸ್ ರದ್ದುಗೊಳಿಸುವುದಾಗಿ ಸತ್ಯೇಂದ್ರ ಜೈನ್ ಡಿಸೆಂಬರ್ 2ರಂದು ಹೇಳಿದ್ದರು. ಅದರಂತೆ ಇದೀಗ ಲೈಸನ್ಸ್ ರದ್ದುಗೊಳಿಸಲಾಗಿದೆ.

ನವೆಂಬರ್ 30ರಂದು ಶಾಲಿಮರ್ ಬಾಗ್ ಆಸ್ಪತ್ರೆಯಲ್ಲಿ ಅವಳಿ ಜವಳಿ ಗಂಡು ಮತ್ತು ಹೆಣ್ಣು ಮಗು ಸತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ಆದರೆ ಇದರಲ್ಲಿ ಗಂಡು ಮಗು ಜೀವಂತ ಇರುವುದು ನಂತರ ಪೋಷಕರಿಗೆ ಗೊತ್ತಾಗಿತ್ತು.

ಈ ಬಗ್ಗೆ ತನಿಖೆಗೆ ದೆಹಲಿ ಸರಕಾರ ಆದೇಶ ನೀಡಿತ್ತು. ಇದೀಗ ತನಿಖಾ ವರದಿ ಆಧರಿಸಿ ಲೈಸನ್ಸ್ ರದ್ದು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+