ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೂ ಮುನ್ನ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಘೋಷಣೆ

|
Google Oneindia Kannada News

ಡೆಹ್ರಾಡೂನ್, ಡಿಸೆಂಬರ್ 28: ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಉತ್ತರಾಖಂಡ್ ರಾಜ್ಯದ ಸರ್ಕಾರಿ ನೌಕರರಿಗೆ ಇತ್ತೀಚೆಗೆ ಶುಭ ಸುದ್ದಿ ಸಿಕ್ಕಿದೆ. ನಿರೀಕ್ಷೆಯಂತೆ ಸರ್ಕಾರಿ ನೌಕರರ ಓಲೈಕೆಗೆ ಪುಷ್ಕರ್ ಸಿಂಗ್ ದಾಮಿ ಸರ್ಕಾರ ಮುಂದಾಗಿದೆ.

ಉತ್ತರಾಖಂಡ್ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಪುಷ್ಕರ್ ಸರ್ಕಾರ ಘೋಷಿಸಿದೆ ಎಂದು ಎಎನ್ಐ ವರದಿ ಮಾಡಿದೆ. ತುಟ್ಟಿಭತ್ಯೆ ಹೆಚ್ಚಳದಿಂದ ಸುಮಾರು 2.5 ಲಕ್ಷ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಲಾಭವಾಗಲಿದೆ.

ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ, ಲೆಕ್ಕಾಚಾರ ಹೇಗೆ?ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ, ಲೆಕ್ಕಾಚಾರ ಹೇಗೆ?

ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಸುದ್ದಿ ಓದಿರಬಹುದು. ಈಗ 2022ರ ಆರಂಭದಲ್ಲಿ ಮತ್ತೊಮ್ಮೆ ತುಟ್ಟಿಭತ್ಯೆ ಹೆಚ್ಚಳ ಹಾಗೂ ತುಟ್ಟಿ ಭತ್ಯೆ ಪರಿಹಾರ ಘೋಷಿಸಲು ಮೋದಿ ಸರ್ಕಾರ ಮುಂದಾಗಿರುವ ಸುದ್ದಿ ಬಂದಿದೆ. ಸರ್ಕಾರಿ ನೌಕರರಿಗೆ ಶೇ 3ರಷ್ಟು ಡಿಎ ಹೆಚ್ಚಳಕ್ಕೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದ್ದು, ಸದ್ಯದ ಮಾಹಿತಿಯಂತೆ ಡಿಎ ಶೇ 17ರಿಂದ ಶೇ 31ಕ್ಕೇರಿಕೆಯಾಗಿದೆ.

New Year Uttarakhand Cabinet approves 3% hike in DA for state employees

ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು.

ಇದೇ ಕ್ರಮ ಅನುಸರಿಸಿ ಅನೇಕ ರಾಜ್ಯಗಳಲ್ಲಿ ಡಿಎ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಈಗ ಚುನಾವಣೆ ಮುಂದಿಟ್ಟುಕೊಂಡು ಯೋಗಿ ಆದಿತ್ಯನಾಥ್ ಸರ್ಕಾರ ಮೊದಲಿಗೆ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಿದೆ. ನಂತರ ಉತ್ತರಾಖಂಡ್ ಕೂಡಾ ಇದೇ ಕ್ರಮ ಅನುಸರಿಸಿದೆ. ಇಂಧನ ಮೇಲಿನ ಸೆಸ್, ವ್ಯಾಟ್ ತಗ್ಗಿಸುವ ಕ್ರಮ ಕೂಡಾ ಚಾಲನೆಯಲ್ಲಿದೆ.

''ಉತ್ತರಾಖಂಡ್ ರಾಜ್ಯದ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಶುಭ ಸುದ್ದಿ ಇಲ್ಲಿದೆ. ಶೇ 3ರಷ್ಟು ತುಟ್ಟಿಭತ್ಯೆ ಹೆಚ್ಚಳಲ್ಲಿ ಪುಷ್ಕರ್ ಸಿಂಗ್ ಸರ್ಕಾರ ಮುಂದಾಗಿದೆ. ಈ ಮೂಲಕ ಡಿಎ ಶೇ 31ಕ್ಕೇರಿದೆ,'' ಎಂದು ಸರ್ಕಾರಿ ವಕ್ತಾರ ಸುಬೋಧ್ ಯುನಿಯಲ್ ಹೇಳಿದ್ದಾರೆ."

ಕಳೆದ ವಾರದಲ್ಲಿ ಉತ್ತರ ಪ್ರದೇಶ ಸರ್ಕಾರ ಕೂಡಾ ಶೇ 29 ರಿಂದ ಶೇ 31ಕ್ಕೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ನೀಡಿತ್ತು. ಜುಲೈ 2021ರಿಂದ ಅನ್ವಯವಾಗುವಂತೆ ಡಿಎ ಹೆಚ್ಚಳ ಜಾರಿಯಾಗಲಿದೆ, ಬಾಕಿ ಮೊತ್ತ ಭವಿಷ್ಯನಿಧಿ ಖಾತೆಗಳಿಗೆ ಜಮೆಯಾಗಲಿದೆ.
ಇದೇ ಕ್ರಮವನ್ನು ಉತ್ತರಾಖಂಡ್ ಸರ್ಕಾರವು ಅನುಸರಿಸಿದೆ. ಇದಲ್ಲದೆ, 10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ 2022-23ನೇ ಶೈಕ್ಷಣಿಕ ವರ್ಷದಿಂದ ಮೊಬೈಲ್ ಟ್ಯಾಬ್ಲೆಟ್ ವಿತರಣೆಗೆ ದಾಮಿ ಸರ್ಕಾರ ವ್ಯವಸ್ಥೆ ಮಾಡಿದೆ. ಸರ್ಕಾರಕ್ಕೆ 190ಕೋಟಿ ರು ಹೆಚ್ಚುವರಿ ಹೊರೆಯೊಂದಿಗೆ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮೊತ್ತ ಕೂಡಾ ಜಮೆಯಾಗಲಿದೆ.

2022ರ ಫೆಬ್ರವರಿಯಲ್ಲಿ ಉತ್ತರಾಖಂಡ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಡಿಸೆಂಬರ್ 4ರಿಂದ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಮೋದಿ ಒಟ್ಟು 7 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಾಲ್ಕು ತಿಂಗಳಿನಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿರುವ ಬಿಜೆಪಿ ಆಡಳಿತದ ಬಗ್ಗೆ ರಾಜ್ಯದಲ್ಲಿ ಜನ ವಿರೋಧಿ ಅಲೆ ಇದೆ ಎಂಬುದು ಪ್ರತಿಪಕ್ಷಗಳ ಲೆಕ್ಕಾಚಾರವಾಗಿದೆ. ಇದೇ ವಿಚಾರ ಚುನಾವಣೆಯ ಪ್ರಚಾರದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.

ರಾಜ್ಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿವೆ. ಸೆಪ್ಟೆಂಬರ್‌ನಲ್ಲಿ ಜನ್ ಕೀ ಬಾತ್ ನಡೆಸಿದ ಸಮೀಕ್ಷೆಯಲ್ಲಿ ಶೇ 45ರಷ್ಟು ಜನರು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

English summary
Following the footsteps of the Central government and the Yogi-led Uttar Pradesh government, Uttarakhand has also decided to increase the Dearness Allowance (DA) of its state employees. The decision comes ahead of assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X