ಇನ್ಮುಂದೆ ಫಾಸ್ಟ್ ಟ್ಯಾಗ್ ಪಾಸ್, ಒಂದು ಟ್ರಿಪ್‌ಗೆ ಕೇವಲ 15 ರೂಪಾಯಿ: ನಿತಿನ್ ಗಡ್ಕರಿ ಬಿಗ್ ಅಪ್ಡೇಟ್ಸ್
ಟೋಲ್ ಶುಲ್ಕ ಮತ್ತು ಫಾಸ್ಟ್ ಟ್ಯಾಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಅಪ್ಡೇಟ್ಸ್ ನೀಡಿದ್ದಾರೆ. ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಗೊಂದಲದ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೋಲ್ ಶುಲ್ಕ ಹಾಗೂ ಫಾಸ್ಟ್ ಟ್ಯಾಗ್‌ಗೆ ಸಂಬಂಧಿಸಿದಂತೆ ನಿತಿನ್ ಗಡ್ಕರಿ ಅವರು ಮಹತ್ವದ ಟ್ವೀಟ್ ಮಾಡಿದ್ದಾರೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಟೋಲ್ ಶುಲ್ಕ ಹಾಗೂ ಫಾಸ್ಟ್ ಟ್ಯಾಗ್‌ನಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ತರುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರವು ಟೋಲ್ ಶುಲ್ಕದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಈ ಬಗ್ಗೆ ನಿತಿನ್ ಗಡ್ಕರಿ ಅವರೇ ಅಪ್ಡೇಟ್ಸ್ ಕೊಟ್ಟಿದ್ದಾರೆ.

🔹 ತೊಂದರೆ ರಹಿತ ಹಾಗೂ ಸರಳವಾಗಿ ಹೆದ್ದಾರಿಗಳಲ್ಲಿ ದೇಶದ ಜನ ಪ್ರಯಾಣಿಸುವ ಉದ್ದೇಶಕ್ಕಾಗಿ ಇನ್ಮುಂದೆ ₹3,000 ಬೆಲೆಯ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದೇವೆ. ಈ ಹೊಸ ಫಾಸ್ಟ್‌ಟ್ಯಾಗ್ ಪಾಸ್ ಇದೇ ಆಗಸ್ಟ್ 15, 2025 ರಿಂದ ಜಾರಿಗೆ ಬರಲಿದೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಈ ಪಾಸ್ ಆಕ್ಟೀವ್ ಆದ ದಿನದಿಂದ ಒಂದು ವರ್ಷದ ವರೆಗೆ ಅಥವಾ 200 ಟ್ರಿಪ್‌ಗಳವರೆಗೆ ಆಕ್ಟೀವ್ ಆಗಿರಲಿದೆ. ಇದೆರಡರಲ್ಲಿ ಯಾವುದು ಮೊದಲು ಬರಲಿದೆಯೋ ಅದಕ್ಕೆ ಅನ್ವಯವಾಗಲಿದೆ. ಇನ್ನು ಮುಖ್ಯವಾಗಿ ಈ ವಾರ್ಷಿಕ ಪಾಸ್ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ ಅಂತ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
🔹 ವಾರ್ಷಿಕ ಪಾಸ್ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಮತ್ತು ಕಡಿಮೆ ವೆಚ್ಚ ಹಾಗೂ ಸುಖಕರ ಪ್ರಯಾಣದ ಉದ್ದೇಶಕ್ಕಾಗಿ ಪರಿಚಯಿಸಲಾಗಿದೆ. ಈ ಫಾಸ್ಟ್ ಟ್ಯಾಗ್ ಆಕ್ಟಿವೇಟ್ ಮತ್ತು ನವೀಕರಣಕ್ಕಾಗಿ ಹೊಸ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ Rajmarg Yatra App ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಇಷ್ಟರಲ್ಲೇ ಸಿಗಲಿವೆ ಎಂದಿದ್ದಾರೆ.

🔹 ಈ ನೀತಿಯು 60 ಕಿಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಒಂದೇಪಾಸ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಟೋಲ್ ಶುಲ್ಕವನ್ನು ಪಾವತಿ ಮಾಡುವುದನ್ನು ಸರಳೀಕರಣ ಮಾಡುತ್ತದೆ. ಟೋಲ್‌ಗಳಲ್ಲಿ ಜನ ಹೆಚ್ಚು ಸಮಯ ಕಾಯುವ ಅವಶ್ಯಕತೆ ಇರುವುದಿಲ್ಲ. ಕಡಿಮೆ ಸಮಯ ಮತ್ತು ದಟ್ಟಣೆ ಕಡಿಮೆ ಮಾಡುವ ಮೂಲಕ ಮತ್ತು ಟೋಲ್ ಪ್ಲಾಜಾಗಳಲ್ಲಿ ಗೊಂದಲಗಳನ್ನು ಕಡಿಮೆ ಮಾಡುವ ಮೂಲಕ, ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾಗಿ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ವಾರ್ಷಿಕ ಪಾಸ್ ಹೊಂದಿದೆ ಎಂದು ನಿತಿನ್ ಗಡ್ಕರಿ ಅವರು ಟ್ವೀಟ್ ಮೂಲಕ ಹೇಳಿದ್ದಾರೆ.












Click it and Unblock the Notifications