ವಿಮಾನಗಳಲ್ಲಿ ಲಗೇಜ್, ಬ್ಯಾಗ್ ತೆಗೆದುಕೊಂಡು ಹೋಗಲು ಬಂತು ಹೊಸ ನಿಯಮ
ದೇಶದ ವಿಮಾನಯಾನದಲ್ಲಿ ಹೊಸ ಹಾಗೂ ಮಹತ್ವದ ಬದಲಾವಣೆಯೊಂದು ಆಗಿದೆ. ವಿಮಾನ ಪ್ರಯಾಣಿಕರ ಸುಗಮ ವಿಮಾನಯಾನ ಹಾಗೂ ಭದ್ರತೆಯ ದೃಷ್ಟಿಯಿಂದ ಲಗೇಜ್‌ಗೆ ಸಂಬಂಧಿಸಿದಂತೆ ಮಹತ್ವದ ಬದಾವಣೆಯೊಂದನ್ನು ಮಾಡಲಾಗಿದೆ. ಯಾವುದೇ ವಿಮಾನದಲ್ಲಿ ಪ್ರಯಾಣಿಸುವುದಾದರೂ ಇಂತಿಷ್ಟೇ ಲಗೇಜ್ ತೆಗೆದುಕೊಂಡು ಹೋಗಬೇಕು ಎನ್ನುವ ನಿಯಮವಿರುತ್ತದೆ. ಸಾಮಾನ್ಯವಾಗಿ ಒಂದು ಬ್ಯಾಗ್ ಅನ್ನು ವಿಮಾನದ ಒಳಗೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಇರಲಿದೆ. ಇದೀಗ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (Bcas -Bureau of Civil Aviation Security) ವಿಮಾನಗಳಲ್ಲಿ ಪ್ರಯಾಣ ಮಾಡುವವರಿಗೆ ಹೊಸ ನಿಯಮವನ್ನು ಜಾರಿ ಮಾಡಲು ಮುಂದಾಗಿದೆ. ಅದರಲ್ಲೂ ಇದು ಮುಖ್ಯವಾಗಿ ಹ್ಯಾಂಡ್ ಬ್ಯಾಗ್‌ಗಳನ್ನು ತಗೆದುಕೊಂಡು ಹೋಗುವುದಕ್ಕೆ ಸಂಬಂಧಿಸಿದ್ದಾಗಿದೆ.
ದೇಶದ ವಿಮಾನಗಳಲ್ಲಿ ಸಂಚರಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿಯಮಗಳಿವೆ. ಮುಖ್ಯವಾಗಿ ಗುರುತಿನ ಚೀಟಿ ಹಾಗೂ ಲಗೇಜ್ ಇವುಗಳಲ್ಲಿ ಪ್ರಮುಖವಾಗಿದೆ. ಅಲ್ಲದೆ ಲಗೇಜ್ ಇಂತಿಷ್ಟು ಕೆ.ಜಿ ತೆಗೆದುಕೊಂಡು ಹೋಗಬಹುದು ಎನ್ನುವ ನಿಯಮವಿದ್ದರೂ, ಲಗೇಜ್‌ನಲ್ಲಿ ಹಾನಿಕಾರಕ ಪದಾರ್ಥಗಳು ಇರಬಾರದು. ಟೇಪ್ ಅಥವಾ ಬೆಂಕಿಪೊಟ್ಟಣ, ಚಾಕುವಿನಂತ ಚೂಪಾದ ಸಾಧನಗಳು ಸೇರಿದಂತೆ ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ನಿಯಮಗಳಿವೆ. ಈ ನಿಯಮಗಳನ್ನು ರೂಪಿಸಿರುವ ಮುಖ್ಯ ಕಾರಣ. ವಿಮಾನದಲ್ಲಿ ಪ್ರಯಾಣಿಸುವವರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ. ಇದೀಗ ವಿಮಾನ ಪ್ರಾಧಿಕಾರವು ವಿಮಾನ ಪ್ರಯಾಣಿಕರ ಲಗೇಜ್‌ಗೆ ಸಂಬಂಧಿಸಿದಂತೆ ಹೊಸ ಅಪ್‌ಡೇಟವ್‌ವೊಂದನ್ನು ಹಂಚಿಕೊಂಡಿದೆ. ಅದರ ವಿವರ ಈ ರೀತಿ ಇದೆ.

ಹೊಸ ನಿಯಮದ ಪ್ರಕಾರ, ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಇದೀಗ ಕೇವಲ ಒಂದು ಬ್ಯಾಗ್ ಮಾತ್ರ ಕ್ಯಾಬಿನ್ ಒಳಗಡೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಇದೆ. ಅಂದರೆ ವಿಮಾನದ ಒಳಗಡೆ ಕುಳಿತುಕೊಳ್ಳುವ ಸೀಟಿನ ಮೇಲ್ಭಾಗದಲ್ಲಿ ಇರುವ ಜಾಗದಲ್ಲಿ ಇರಿಸಿಕೊಳ್ಳಲು ಅವಕಾಶ ಇರಲಿದೆ. ದೇಶದ ಒಳಗಡೆ ಹಾಗೂ ವಿದೇಶಗಳಿಗೆ ಹೋಗುವುದಾದರೂ ಇದೇ ನಿಯಮ ಅನ್ವಯಿಸುತ್ತದೆ. ಇನ್ನು ಈ ರೀತಿ ತೆಗೆದುಕೊಂಡು ಹೋಗುವ ಬ್ಯಾಗ್‌ಗೆ ತೂಕವನ್ನು ನಿಗದಿ ಮಾಡಲಾಗುತ್ತದೆ. ಬ್ಯಾಗ್‌ನಲ್ಲಿನ ತೂಕವು 7 ಕೆ.ಜಿಗಿಂತಲೂ ಹೆಚ್ಚಾಗಿ ಇರುವಂತಿಲ್ಲ. ಒಂದೊಮ್ಮೆ ಹೆಚ್ಚು ತೂಕವಿದ್ದರೆ ಅದಕ್ಕೆ ಹೆಚ್ಚು ಹಣ ಕೊಡಬೇಕು. ಅಲ್ಲದೆ ಕ್ಯಾಬಿನ್ ಬ್ಯಾಗ್‌ನ ಗಾತ್ರವು 55 ಸೆಂ. ಮೀ ಎತ್ತರ, 40 ಸೆಂ. ಮೀ ಉದ್ದ ಹಾಗೂ 20 ಸೆಂ. ಮೀ ಅಗಲ ಮಾತ್ರ ಇರಬೇಕು ಎನ್ನುವ ನಿಯಮ ಇದೆ.
ವಿಮಾನದ ಒಳಗೆ ಲಗೇಜ್‌ಗಳನ್ನು ತೆಗೆದುಕೊಳ್ಳುವ ಮುನ್ನವೇ ಲಗೇಜ್‌ಗಳ ತೂಕವನ್ನು ಪರಿಶೀಲನೆ ಮಾಡಿಯೇ ಬಿಡಲಾಗುತ್ತದೆ. ಹೀಗಾಗಿ ವಿಮಾನ ಪ್ರಯಾಣ ಮಾಡುವವರು ಕೊನೆ ಕ್ಷಣದಲ್ಲಿ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಕಸರತ್ತು ನಡೆಸುವುದಕ್ಕಿಂತ ಮನೆಯಿಂದಲೇ ಕಡಿಮೆ ತೂಕದ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವುದು ಉತ್ತಮವಾಗಿದೆ.
ಇದೀಗ ಬ್ಯಾಗ್‌ಗಳಲ್ಲಿನ ಗೊಂದಲವನ್ನು ತಪ್ಪಿಸುವ ಉದ್ದೇಶದಿಂದ ಹೊಸ ನಿಯಮವನ್ನು ಜಾರಿ ಮಾಡಲಾಗುತ್ತಿದೆ. 2024ನೇ ಸಾಲಿನ ಮೇ 2ಕ್ಕಿಂತ ಮುಂಚಿತವಾಗಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿರುವವರಿಗೆ ಹೊಸ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಎಕಾನಮಿ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದಾರೆ. ಲಗೇಜ್ ಮಿತಿ 8 ಕೆ.ಜಿ ವರೆಗೆ ಇರಲಿದೆ. ಪ್ರೀಮಿಯಂ ಎಕಾನಮಿ ಟಿಕೆಟ್ ಬುಕ್ ಮಾಡಿರುವವರಿಗೆ 10 ಕೆ.ಜಿ ಇರಲಿದೆ. ಇನ್ನುಳಿದಂತೆ ಫಸ್ಟ್ ಅಥವಾ ಬಿಸ್ನೆಸ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡುವವರಿಗೆ 12 ಕೆ.ಜಿಯ ವರೆಗೆ ಲಗೇಜ್ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಇರಲಿದೆ ಎಂದು ಹೇಳಲಾಗಿದೆ.












Click it and Unblock the Notifications