ಹೊಸ ನೋಟುಗಳು ಪ್ರಿಂಟ್ ಆಗಿದ್ದು ಎಲ್ಲಿ ಗೊತ್ತಾ?

Posted By:
Subscribe to Oneindia Kannada

ಮೈಸೂರು: ಕಪ್ಪು ಹಣ ತಡೆ ಮತ್ತು ವಿಸ್ತ್ರತವಾಗಿ ಹರಡಿಕೊಂಡಿದ್ದ ನಕಲಿ ನೋಟು ಜಾಲವನ್ನು ಕಟ್ಟಿಹಾಕಲು ಹಳೆಯ 500ರೂ. ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಇದ್ದಕ್ಕಿದ್ದಂತೆ ಆದೇಶ ಹೊರಡಿಸಿದ ಪ್ರಧಾನಿ ಮೋದಿ ಇಡೀ ದೇಶಕ್ಕೆ ಶಾಕ್ ನೀಡಿದ್ದರು.

ಹಳೆಯ ನೋಟುಗಳ ಸ್ಥಾನದಲ್ಲಿ ಹೊಸದಾಗಿ 2 ಸಾವಿರ ರೂ. ಮತ್ತು 500ರೂ ಮುಖ ಬಲೆಯ ನೋಟುಗಳನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದರು. [ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]

ಈ ರೀತಿ ಏಕಾಏಕಿ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮುಂಚೆಯೇ ಯಾರೊಬ್ಬರಿಗೂ ಸುಳಿವೇ ಸಿಗದಂತೆ ಹೊಸ ನೋಟುಗಳನ್ನು ಮುದ್ರಿಸಲಾಗಿತ್ತು. ಆದರೆ ಈ ವಿಷಯ ಬಹಿರಂಗವಾಗದಂತೆ ಗೋಪ್ಯವಾಗಿ ಇಡಲಾಗಿತ್ತು.[ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]

ಈ ನೋಟುಗಳನ್ನು ಯಾರೊಬ್ಬರಿಗೂ ತಿಳಿಯದಂತೆ ಅತ್ಯಂತ ಗೋಪ್ಯವಾಗಿ ಮುದ್ರಿಸಿದ ರಹಸ್ಯ ಸ್ಥಳವಾದರೂ ಎಲ್ಲಿ. ಅಂತಹ ಗೋಪ್ಯ ಪ್ರದೇಶ ನಮ್ಮ ದೇಶದಲ್ಲಿ ಯಾವುದಿದೆ ಎಂಬ ಅನುಮಾನ ಈಗ ಎಲ್ಲರಿಗೂ ಕಾಡುತ್ತದೆ.

ನೋಟು ಮುದ್ರಿಸುವಂತಹ ಟಂಕಸಾಲೆಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಸಾಲದೆಂಬತೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಸಹ ಹೆಚ್ಚಾಗಿವೆ. ಆದರೆ ಪ್ರಧಾನಿ ಮೋದಿ ಮಾತ್ರ ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡುವಂತೆ ಆರಿಸಿಕೊಂಡ ರಾಜ್ಯವಾದರೂ ಯಾವುದು ಗೊತ್ತಾ?

ನೋಟು ಮುದ್ರಣವಾಗಿದ್ದು ಕರ್ನಾಟಕದಲ್ಲೇ!

ನೋಟು ಮುದ್ರಣವಾಗಿದ್ದು ಕರ್ನಾಟಕದಲ್ಲೇ!

ಯಾರಿಗೂ ಅನುಮಾನ ಬಾರದಂತೆ ಕಾಂಗ್ರೆಸ್ ಪಕ್ಷ ಆಡಳಿತವಿರುವ ಪ್ರಬಲ ರಾಜ್ಯ ಕರ್ನಾಟಕದಲ್ಲೇ ನೋಟು ಮುದ್ರಿಸಲಾಗಿದೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಮೈಸೂರಿನ ಟಂಕಸಾಲೆಯಲ್ಲಿ ಹೊಸ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಗೆ 6ತಿಂಗಳ ಹಿಂದೆಯೇ ಆದೇಶ ನೀಡಿತ್ತು.

ಆದೇಶ ಸಿಗುತ್ತಿದ್ದಂತೆಯೇ ಹೊಸ ನೋಟುಗಳ ಮುದ್ರಣಕ್ಕೆ ಸಕಲ ಸಿದ್ದತೆಗಳನ್ನು ಮೈಸೂರಿನ ಮುದ್ರಣಾಲಯದಲ್ಲಿ ನಡೆಸಲಾಗಿದೆ. ಕಳೆದ 6 ತಿಂಗಳಿಂದ ಮಾಹಿತಿ ಸೋರಿಕೆಯಾಗದಂತೆ ಬಹಳ ಗೌಪ್ಯವಾಗಿ 2ಸಾವಿರ ಮತ್ತು 500ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿದೆ.

ಮೈಸೂರನ್ನೇ ಆಯ್ಕೆಮಾಡಿಕೊಂಡಿದ್ದೇಕೆ?

ಮೈಸೂರನ್ನೇ ಆಯ್ಕೆಮಾಡಿಕೊಂಡಿದ್ದೇಕೆ?

ಮೈಸೂರಿನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಣ ಕೇಂದ್ರ ಹಲವು ವಿಶೇಷಗಳಿಂದ ಕೂಡಿದೆ. ಈ ಮುದ್ರಣಾಲಯಕ್ಕೆ ಪ್ರತ್ಯೇಕವಾದ ರೈಲ್ವೇ ಮಾರ್ಗಗಳಿವೆ. ಸಾಲದೆಂಬಂತೆ ಇಲ್ಲಿಗೆ ಹೈಟೆಕ್ನಾಲಜಿಯುಳ್ಳ ಪೇಪರ್ ಸರಬರಾಜು ಆಗುತ್ತದೆ.

ಈ ಮುದ್ರಣಾಲಯಕ್ಕೆ ವಿಶೇಷವಾಗಿ ವಾಟರ್ ಲೈನ್ ಸಂಪರ್ಕವೂ ಸಹ ಕಲ್ಪಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಹೊಸ ನೋಟುಗಳನ್ನು ಮುದ್ರಿಸಲು ಈ ಸ್ಥಳವನ್ನೇ ಆಯ್ಕೆಮಾಡಿಕೊಳ್ಳಲಾಗಿದೆ.

ಸ್ಥಳೀಯರಿಗೂ ಗೊತ್ತಾಗಿಲ್ಲ

ಸ್ಥಳೀಯರಿಗೂ ಗೊತ್ತಾಗಿಲ್ಲ

ದಕ್ಷಿಣ ಮೈಸೂರು ಭಾಗಕ್ಕೆ 10ಕೀ.ಮೀ ದೂರದಲ್ಲಿರುವ ಮಂದಕಹಳ್ಳಿಯಲ್ಲಿ ಒಂದು ಸಣ್ಣ ವಿಮಾನ ನಿಲ್ದಾಣವಿದೆ. ಆದರೆ ಹಲವು ದಿನಗಳ ಮುಂಚೆಯೇ ಇಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ನಿಲ್ದಾಣದಲ್ಲಿ ಒಂದೇ ಒಂದು ರನ್ ವೇ ಇದೆ.

ಇದ್ದಕ್ಕಿದಂತೆ ನಿಷ್ಕ್ರಿಯಗೊಂಡಿದ್ದ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ವಿಮಾನಗಳು ದಿನ ನಿತ್ಯ ಬಿಡುವಿಲ್ಲದಂತೆ ಹಾರಾಟ ಮಾಡಿವೆ.

ಈ ರೀತಿಯಲ್ಲಿ ವಿಮಾನ ಹಾರಾಟ ಏಕೆ ನಡೆಯುತ್ತಿದೆ ಎಂಬ ಅನುಮಾನವೂ ಸಹ ಜನರಿಗೆ ಮೂಡಿದೆ. ಆದರೆ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಕೊಂಡೊಯ್ಯಲಾಗುತ್ತಿದೆ ಎಂಬ ಅನುಮಾನ ಮಾತ್ರ ಬಂದಿಲ್ಲ.

ವಿಮಾನಗಳಲ್ಲಿ ದೆಹಲಿಗೆ ರವಾನೆ

ವಿಮಾನಗಳಲ್ಲಿ ದೆಹಲಿಗೆ ರವಾನೆ

ಮೈಸೂರಿನಿಂದ ವಿಶೇಷ ವಿಮಾನಗಳಲ್ಲಿ 2 ಸಾವಿರ ರೂ. ಹಾಗೂ 500 ರೂ. ನೋಟುಗಳನ್ನು ದೆಹಲಿಗೆ ರವಾನಿಸಲಾಗಿದೆ. ಅಲ್ಲಿಂದ ರಿಸರ್ವ್ ಬ್ಯಾಂಕ್ ಮುಖಾಂತರ ವಿವಿಧ ಬ್ಯಾಂಕ್ ಗಳಿಗೆ ರವಾನಿಸಲಾಗಿದೆ.

ಪ್ರಸ್ತುತ ನಿಷೇಧವಾಗಿರುವ 1000ರೂ. ಮುಖಬೆಲೆಯ ನೋಟುಗಳನ್ನೂ ಸಹ ಆರಂಭದಲ್ಲಿ ಜಾರಿಗೆ ತರುವುದಕ್ಕಿಂತ ಮುಂಚೆ ಯಾರಿಗೂ ಸುಳಿವು ಸಿಗದಂತೆ ಇದೇ ಮುದ್ರಣಾಲಯದಲ್ಲಿ ಮುದ್ರಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The new set of currency bearing a face value of Rs. 2,000 and Rs. 500 were reportedly designed and printed at the Bharatiya Reserve Bank Note Mudran Private Ltd. (BRBNMPL), the Reserve Bank of India’s currency printing press, in Mysuru.
Please Wait while comments are loading...