ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ

Posted By:
Subscribe to Oneindia Kannada

ನವದೆಹಲಿ, ಜುಲೈ 25: ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್ ಅವರ ಪ್ರಮಾಣ ವಚನಕ್ಕೆ ವೇದಿಕೆ ಸಿದ್ಧವಾಗಿದೆ. ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿದ್ದು, ದೇಶದ ಬಹುತೇಕ ಗಣ್ಯರು, ಸಂಸದರು, ಹಾಜರಿದ್ದಾರೆ.

ದೇಶದ ಹಿರಿಯ ರಾಜಕೀಯ ಧುರೀಣರಾದ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂತಾದ ಗಣ್ಯರಿಂದ ಸೆಂಟ್ರಲ್ ಹಾಲ್ ತುಂಬಿದೆ.

ಮಧ್ಯಾಹ್ನ 12.12- ಪ್ರಮಾಣ ವಚನ ಸಮಾರಂಭ ಆರಂಭ

ಮಧ್ಯಾಹ್ನ 12.10- ವೇದಿಕೆಯಲ್ಲಿ ಐದು ಆಸನ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಖೆಹರ್, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಿಯೋಜಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ವೇದಿಕೆಯಲ್ಲಿ.

ಮಧ್ಯಾಹ್ನ 12.04 - ಸೆಂಟ್ರಲ್ ಹಾಲ್ ಗೆ ಆಗಮಿಸಿದ ನಿಯೋಜಿತ ರಾಷ್ಟ್ರಪತಿ ಕೋವಿಂದ್. ಜತೆಯಲ್ಲಿ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ರಾಷ್ಟ್ರಪತಿಯಾಗಿ ಇಂದು ರಾಮನಾಥ್ ಕೋವಿಂದ್ ಪ್ರಮಾಣ ವಚನ

ಬೆಳಗ್ಗೆ 11.40 - ಸಂಸತ್ತಿನ ಆವರಣದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣಬ್ ಹಾಗೂ ರಾಮನಾಥ್ ಅವರನ್ನು ಸ್ವಾಗತಿಸಲಿದ್ದಾರೆ.

ಬೆ. 11.00 - ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ. ಕೆಲ ಕಾಲ ಮಾತುಕತೆ. ಸಾರೋಟ್ ನಲ್ಲಿ ಪ್ರಣಬ್ ಮುಖರ್ಜಿ ಜತೆಗೆ ಸಂಸತ್ ಭವನದತ್ತ ಪ್ರಯಾಣ.

Rajinikanth Super Star of Tamilnadu, Is he the next President of India?| Oneindia Kannada

ಬೆ. 10.30 - ಮಂಗಳವಾರ ಬೆಳಗ್ಗೆ ಅವರು ರಾಜ್ ಘಾಟ್ ಬೆಳಗ್ಗೆ ಸುಮಾರು 10 ಗಂಟೆಗೆ ತೆರಳಿ ಅಲ್ಲಿ ಮಹಾತ್ಮಾಗಾಂಧಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ತೆರಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elected President Ramnath Kovind's oath taking ceremony on July 25, 2017.
Please Wait while comments are loading...