'ವಸುಧೈವ ಕುಟುಂಬಕಂ' ತತ್ವದಡಿ ಮುನ್ನಡೆಯೋಣ: ಕೋವಿಂದ್

Posted By:
Subscribe to Oneindia Kannada

ನವದೆಹಲಿ, ಜುಲೈ 25: ನಮ್ಮಲ್ಲಿನ ಯಾವುದೇ ಬೇಧ- ಭಾವ, ಜಾತಿ, ಸಿದ್ಧಾಂತಗಳ ಭಿನ್ನಾಭಿಪ್ರಾಯಗಳನ್ನು ಮರೆತು ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯೊಂದಿಗೆ ಭಾರತೀಯ ಪ್ರಜೆಗಳು ಅಭಿವೃದ್ಧಿ ಪಥದತ್ತ ಮುನ್ನಡೆಯಬೇಕು ಎಂದು ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್ ಕರೆ ನೀಡಿದ್ದಾರೆ.

ಮಂಗಳವಾರ, ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸಮಗ್ರ ಭಾರತೀಯ ಜನತೆಗೆ ಮೊದಲಿಗೆ ಪ್ರಣಾಮಗಳನ್ನು ಅರ್ಪಿಸಿದರು.

ಆನಂತರ, ತಮ್ಮ ಮಾತನ್ನು ಮುಂದುವರಿಸಿದ ಅವರು, ಈ ಸೆಂಟ್ರಲ್ ಹಾಲ್ ನಲ್ಲಿ ನನ್ನ ಹಳೆಯ ನೆನಪುಗಳು ಗರಿಗೆದರುತ್ತವೆ. ನಾನು ಸಂಸತ್ ಸದಸ್ಯನಾಗಿದ್ದಾಗ ಈಗ ಇಲ್ಲಿ ನೆರೆದಿರುವ ಹಲವಾರು ಗಣ್ಯರ ಜತೆಗೆ ಕೆಲವು ವಿಚಾರ ವಿನಿಮಯ ಮಾಡಿದ್ದೇನೆ, ಚರ್ಚಿಸಿದ್ದೇನೆ. ಕೆಲವು ವಿಚಾರಗಳ ಬಗ್ಗೆ ನಮ್ಮ ನಡುವೆ ಸಹಮತಿ ಇದ್ದರೆ, ಮತ್ತೆ ಕೆಲವು ವಿಚಾರಗಳ ಬಗ್ಗೆ ಅಸಮ್ಮತಿ ಇರುತ್ತಿತ್ತು. ಆದರೂ, ನಾವು ಒಬ್ಬರ ವಿಚಾರಗಳನ್ನು ಮತ್ತೊಬ್ಬರು ಗೌರವಿಸುತ್ತಿದ್ದೆವು. ಇದೇ ಈ ಪ್ರಜಾಪ್ರಭುತ್ವದ ಹೆಗ್ಗಳಿಕೆ ಎಂದರು.

ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ

ಅವರ ಭಾಷಣದ ಹೈಲೈಟ್ಸ್ ಇಲ್ಲಿವೆ..

- ಉತ್ತರ ಪ್ರದೇಶದ ಕುಗ್ರಾಮದಲ್ಲಿ ಜನಿಸಿದ ನಾನು ಇಷ್ಟು ದೊಡ್ಡ, ಸುದೀರ್ಘ ಯಾತ್ರೆಯನ್ನು ಕೈಗೊಂಡಿದ್ದೇನೆ. ಈ ಹಾದಿಯಲ್ಲಿ ನನ್ನನ್ನು ಬೆಳೆಸಿದ, ಪ್ರೊತ್ಸಾಹಿಸಿದ ಎಲ್ಲರಿಗೂ ನಾನು ಕೃತಜ್ಞ.

- ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಾನು ಈ ಹಿಂದಿನ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್, ಎಪಿಜೆ ಅಬ್ದುಲ್ ಕಲಾಂ ಹಾಗೂ ಈ ಹಿಂದಿನ ರಾಷ್ಟ್ರಪತಿಯಾದ ಪ್ರಣಬ್ ಮುಖರ್ಜಿ ಅವರ ನಡೆದ ಹಾದಿಯಲ್ಲೇ ಸಾಗುತ್ತೇನೆ.

- ನಮ್ಮ ಭಾರತೀಯ ಸಮಾಜದ ವಿಶೇಷತೆಯೆಂದರೆ, ಹಲವಾರು ಸವಾಲುಗಳ ನಡುವೆಯೂ ನ್ಯಾಯ, ಸ್ವತಂತ್ರ, ಸಮಾನತೆ, ಬಂಧುತ್ವ ಮೂಲ ಮಂತ್ರದ ಪಾಲನೆ ಆಗಿದೆ.

- ಈ ಭಾರತವು ಈ ಬಾರಿ 70ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದೆ. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದಿದ್ದ ಸ್ವಾತಂತ್ರ ಸಂಗ್ರಾಮದಲ್ಲಿ ಲಕ್ಷಾನುಲಕ್ಷ ಭಾರತೀಯರು ಪಾಲ್ಗೊಂಡಿದ್ದರು. ಅವರೆಲ್ಲರೂ ಭಾರತದ ನಿರ್ಮಾತೃಗಳು. ಗಾಂಧಿ ನೇತೃತ್ವದಲ್ಲಿ ಭಾರತ ಸ್ವತಂತ್ರ ಗಳಿಸಿದರೆ, ಪಟೇಲ್ ಇಡೀ ದೇಶವನ್ನೇ ಒಗ್ಗೂಡಿಸಿದರು. ಅಂಬೇಡ್ಕರ್ ಸಂವಿಧಾನ. ರಾಜನೈತಿಕ ಸ್ವತಂತ್ರ, ಆರ್ಥಿಕ ಹಾಗೂ ಸಾಮಾಜಿಕ ಸ್ವತಂತ್ರ್ಯ ಬಯಸಿದ್ದರು.

- ವಿವಿಧತೆಯೇ ನಮ್ಮ ಆಧಾರ, ಅದೇ ನಮ್ಮ ವಿಶೇಷ. ನಮ್ಮಲ್ಲಿ ನಾನಾ ಸಂಸ್ಕೃತಿ, ಜೀವನ ಶೈಲಿ ಇವೆ. ಆದರೂ, ನಾವು ಒಂದೇ.

- ಮುಂದಿನ ಭಾರತ, ವಿಭಿನ್ನ ಭಾರತವಾಗಬೇಕೆಂಬ ಅಭಿಲಾಷೆ ನಮ್ಮದು. ನಮ್ಮ ಪರಂಪರೆ, ಪ್ರಾಚೀನ ಸಂಸ್ಕೃತಿ, ಜ್ಞಾನ, ಸಮಕಾಲೀನ ವಿಜ್ಞಾನ ಮುಂದುವರಿಸಿಕೊಂಡು ಹೋಗಬೇಕಿದೆ.

- ಸರ್ಕಾರ ಕೇವಲ ಸಹಾಯಕ. ಪ್ರೇರಕ. ರಾಷ್ಟ್ರೀಯತೆ ನಿರ್ಮಾಣಕ್ಕೆ ಕಾರಣವೇ ರಾಷ್ಟ್ರದ ಬಗ್ಗೆ ಜನರು ಹೊಂದುವ ಗೌರವ.

- ಪ್ರತಿಯೊಬ್ಬ ನಾಗರಿಕರು, ರೈತರು, ಪೊಲೀಸ್ ಅಧಿಕಾರಿಗಳು, ಕೂಲಿಯಾಳುಗಳು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು, ವಿಜ್ಞಾನಿಗಳು, ನರ್ಸ್ ಗಳು, ವೈದ್ಯರು, ಸ್ಟಾರ್ಟ್ ಅಪ್ ಮಾಲೀಕರು, ನಮ್ಮ ಅರಣ್ಯ ಹಾಗೂ ನಿಸರ್ಗ ರಕ್ಷಣೆ ಮಾಡುತ್ತಿರುವವರು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು.. ಹೀಗೆ ಸಮಾಜದ ನಾನಾ ವ್ಯಕ್ತಿಗಳು ಈ ದೇಶದ ನಿರ್ಮಾತೃಗಳು.

- ಗ್ರಾಮ ಪಂಚಾಯಿತಿಯಿಂದ ದೇಶದ ಸಂಸದರನ್ನು ಆಯ್ಕೆ ಮಾಡುತ್ತಾರೆ. ಜನಪ್ರತಿನಿಧಿ ರಾಷ್ಟ್ರಸೇವೆಗೆ ಮುಂದಾಗುತ್ತಾರೆ. ಈ ಪ್ರಜೆಗಳು ಪ್ರತಿನಿಧಿಗಳು ಎಲ್ಲರೂ ರಾಷ್ಟ್ರ ಸೇವಕರೇ.

- ಎಲ್ಲರೂ ಒಂದಾಗೋಣ. ಭವಿಷ್ಯದಲ್ಲಿ ಭಾರತವು ಪ್ರಜ್ವಲ ರಾಷ್ಟ್ರವನ್ನಾಗಿಸಲು ದುಡಿಯೋಣ.

ಅವರ ಭಾಷಣದ ಹೈಲೈಟ್ಸ್ ಇಲ್ಲಿವೆ..

ಹಿಂದಿನವರ ಹಾದಿಯಲ್ಲೇ ಸಾಗುತ್ತೇನೆ

ಹಿಂದಿನವರ ಹಾದಿಯಲ್ಲೇ ಸಾಗುತ್ತೇನೆ

- ಉತ್ತರ ಪ್ರದೇಶದ ಕುಗ್ರಾಮದಲ್ಲಿ ಜನಿಸಿದ ನಾನು ಇಷ್ಟು ದೊಡ್ಡ, ಸುದೀರ್ಘ ಯಾತ್ರೆಯನ್ನು ಕೈಗೊಂಡಿದ್ದೇನೆ. ಈ ಹಾದಿಯಲ್ಲಿ ನನ್ನನ್ನು ಬೆಳೆಸಿದ, ಪ್ರೊತ್ಸಾಹಿಸಿದ ಎಲ್ಲರಿಗೂ ನಾನು ಕೃತಜ್ಞ.

- ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಾನು ಈ ಹಿಂದಿನ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್, ಎಪಿಜೆ ಅಬ್ದುಲ್ ಕಲಾಂ ಹಾಗೂ ಈ ಹಿಂದಿನ ರಾಷ್ಟ್ರಪತಿಯಾದ ಪ್ರಣಬ್ ಮುಖರ್ಜಿ ಅವರ ನಡೆದ ಹಾದಿಯಲ್ಲೇ ಸಾಗುತ್ತೇನೆ.

ಸ್ವಾತಂತ್ರ್ಯದ ಹೊಸ ಅರ್ಥ

ಸ್ವಾತಂತ್ರ್ಯದ ಹೊಸ ಅರ್ಥ

- ಈ ಭಾರತವು ಈ ಬಾರಿ 70ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದೆ. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದಿದ್ದ ಸ್ವಾತಂತ್ರ ಸಂಗ್ರಾಮದಲ್ಲಿ ಲಕ್ಷಾನುಲಕ್ಷ ಭಾರತೀಯರು ಪಾಲ್ಗೊಂಡಿದ್ದರು. ಅವರೆಲ್ಲರೂ ಭಾರತದ ನಿರ್ಮಾತೃಗಳು. ಗಾಂಧಿ ನೇತೃತ್ವದಲ್ಲಿ ಭಾರತ ಸ್ವತಂತ್ರ ಗಳಿಸಿದರೆ, ಪಟೇಲ್ ಇಡೀ ದೇಶವನ್ನೇ ಒಗ್ಗೂಡಿಸಿದರು. ಅಂಬೇಡ್ಕರ್ ಸಂವಿಧಾನ ರಚಿಸಿದರು. ಅವರು, ದೇಶವು ರಾಜನೈತಿಕ ಸ್ವತಂತ್ರ ಗಳಿಸುವುದಕ್ಕಿಂತ ಆರ್ಥಿಕ ಹಾಗೂ ಸಾಮಾಜಿಕ ಸ್ವತಂತ್ರ್ಯ ಗಳಿಸುವುದು ಮುಖ್ಯ ಎಂದು ತಿಳಿದಿದ್ದರು.

- ವಿವಿಧತೆಯೇ ನಮ್ಮ ಆಧಾರ, ಅದೇ ನಮ್ಮ ವಿಶೇಷ. ನಮ್ಮಲ್ಲಿ ನಾನಾ ಸಂಸ್ಕೃತಿ, ಜೀವನ ಶೈಲಿ ಇವೆ. ಆದರೂ, ನಾವು ಒಂದೇ.

- ನಮ್ಮ ಭಾರತೀಯ ಸಮಾಜದ ವಿಶೇಷತೆಯೆಂದರೆ, ಹಲವಾರು ಸವಾಲುಗಳ ನಡುವೆಯೂ ನ್ಯಾಯ, ಸ್ವತಂತ್ರ, ಸಮಾನತೆ, ಬಂಧುತ್ವ ಮೂಲ ಮಂತ್ರದ ಪಾಲನೆ ಆಗಿದೆ.

ಪ್ರತಿಯೊಬ್ಬರೂ ರಾಷ್ಟ್ರದ ನಿರ್ಮಾತೃಗಳೇ

ಪ್ರತಿಯೊಬ್ಬರೂ ರಾಷ್ಟ್ರದ ನಿರ್ಮಾತೃಗಳೇ

- ಮುಂದಿನ ಭಾರತ, ವಿಭಿನ್ನ ಭಾರತವಾಗಬೇಕೆಂಬ ಅಭಿಲಾಷೆ ನಮ್ಮದು. ನಮ್ಮ ಪರಂಪರೆ, ಪ್ರಾಚೀನ ಸಂಸ್ಕೃತಿ, ಜ್ಞಾನ, ಸಮಕಾಲೀನ ವಿಜ್ಞಾನ ಮುಂದುವರಿಸಿಕೊಂಡು ಹೋಗಬೇಕಿದೆ.

- ಸರ್ಕಾರ ಕೇವಲ ಸಹಾಯಕ. ಪ್ರೇರಕ. ರಾಷ್ಟ್ರೀಯತೆ ನಿರ್ಮಾಣಕ್ಕೆ ಕಾರಣವೇ ರಾಷ್ಟ್ರದ ಬಗ್ಗೆ ಜನರು ಹೊಂದುವ ಗೌರವ.

- ಪ್ರತಿಯೊಬ್ಬ ನಾಗರಿಕರು, ರೈತರು, ಪೊಲೀಸ್ ಅಧಿಕಾರಿಗಳು, ಕೂಲಿಯಾಳುಗಳು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು, ವಿಜ್ಞಾನಿಗಳು, ನರ್ಸ್ ಗಳು, ವೈದ್ಯರು, ಸ್ಟಾರ್ಟ್ ಅಪ್ ಮಾಲೀಕರು, ನಮ್ಮ ಅರಣ್ಯ ಹಾಗೂ ನಿಸರ್ಗ ರಕ್ಷಣೆ ಮಾಡುತ್ತಿರುವವರು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು.. ಹೀಗೆ ಸಮಾಜದ ನಾನಾ ವ್ಯಕ್ತಿಗಳು ಈ ದೇಶದ ನಿರ್ಮಾತೃಗಳು.

Ram Nath Kovind to be sworn in as 14th President of India on July 25 |
ಉಜ್ವಲ ದೇಶ ಕಟ್ಟಲು ಒಂದಾಗೋಣ

ಉಜ್ವಲ ದೇಶ ಕಟ್ಟಲು ಒಂದಾಗೋಣ

- ಗ್ರಾಮ ಪಂಚಾಯಿತಿಯಿಂದ ದೇಶದ ಸಂಸದರನ್ನು ಆಯ್ಕೆ ಮಾಡುತ್ತಾರೆ. ಜನಪ್ರತಿನಿಧಿ ರಾಷ್ಟ್ರಸೇವೆಗೆ ಮುಂದಾಗುತ್ತಾರೆ. ಈ ಪ್ರಜೆಗಳು ಪ್ರತಿನಿಧಿಗಳು ಎಲ್ಲರೂ ರಾಷ್ಟ್ರ ಸೇವಕರೇ.

- ಎಲ್ಲರೂ ಒಂದಾಗೋಣ. ಭವಿಷ್ಯದಲ್ಲಿ ಭಾರತವು ಪ್ರಜ್ವಲ ರಾಷ್ಟ್ರವನ್ನಾಗಿಸಲು ದುಡಿಯೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New President of India urges to move with Vasudaiva Kutumbakam in his first speech soon after his oath as 14th President of India.
Please Wait while comments are loading...