Parliment Ianuguration: ಪ್ರಧಾನಿ ಟೀಕಿಸಿದ ಕಪಿಲ್ ಸಿಬಲ್‌ಗೆ ಪ್ರಹ್ಲಾದ್ ಜೋಶಿ ತಿರುಗೇಟು
ಬೆಂಗಳೂರು, ಮೇ 30: ಭಾನುವಾರ ಮೇ 28ರಂದು ಉದ್ಘಾಟನೆಗೊಂಡ ನೂತನ ಸಂಸತ್ ಭವನ (New Parliment) ಕುರಿತು ಚರ್ಚೆಗಳು ಇಂದಿಗೂ ಮುಗಿಯುವಂತೆ ಕಾಣುತ್ತಿಲ್ಲ. ಹೊಸ ಕಟ್ಟಡ ಕುರಿತು ಟೀಕಿಸಿದ್ದ ಸಂಸದ ಕಪಿಲ್ ಸಿಬಲ್ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿದ ಅವರು, ನೂತನ ಸಂಸತ್ ಭವನ ಉದ್ಘಾಟನೆಯಲ್ಲಿ ಪ್ರಧಾನಿ ಮೋದಿಯವರ ಉದ್ಘಾಟನಾ ಭಾಷಣ ಟೀಕಿಸಿ ಟ್ವೀಟ್ ಮಾಡಿದ್ದ ಕಪಿಲ್ ಸಿಬಲ್ ಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಕಾಲದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಯಿತಲ್ಲ ಎಂದು ಕಾಂಗ್ರೆಸ್ ಹೊಟ್ಟೆಯುರಿ ಪಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಸದ ಕಪಿಲ್ ಸಿಬಲ್ ಅವರು ಭಾರತದ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸಂಸತ್ ಭವನ ಕಾರ್ಯಕ್ರಮದಲ್ಲೂ ಧರ್ಮ ಎತ್ತೆಣಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಮಾಯಕ ರಾಮಭಕ್ತರನ್ನು ಧಾರ್ಮಿಕ ದ್ವೇಷದಿಂದ ಹತ್ಯೆಗೈದ ಸಮಾಜವಾದಿ ಪಕ್ಷದ ಜೊತೆ ಸೇರಿರುವ ನಿಮ್ಮಂತಹವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ. ಶಾ ಬಾನೊ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯರ ಹೋರಾಟವನ್ನು ಹತ್ತಿಕ್ಕಲು ಅಂದಿನ ನಿಮ್ಮ ಕಾಂಗ್ರೆಸ್ ಸಕಾರ ಯಾವ ರೀತಿ ಪ್ರಯತ್ನಿಸಿತ್ತು ನೆನಪಿಸಿಕೊಳ್ಳಿ ಎಂದು ಗುಡುಗಿದರು.
ಭಾರತದ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸಂಸತ್ ಭವನದ ವಿಚಾರದಲ್ಲೂ "ಧರ್ಮ" ಹುಡುಕುವ ಮೊದಲು, ಧರ್ಮ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವೇ ಹೊರತು ಕೇವಲ ಪೂಜಾ ಪದ್ಧತಿ ಅಲ್ಲ. ಈ ಸತ್ಯವನ್ನ ಸಿಬಲ್ ಅವರು ಅರ್ಥಮಾಡಿಕೊಳ್ಳಲಿ. ಎಲ್ಲಾ ಸಮುದಾಯಗಳ ಧಾರ್ಮಿಕ ಪಾರ್ಥನೆಯೊಂದಿಗೆ ನೂತನ ಸಂಸತ್ ಭವನ ಲೋಕಾರ್ಪಣೆಗೊಂಡಿದ್ದು ಕಂಡಿಲ್ಲವೇ? ಎಂದು ಸಿಬಲ್ ಅವರನ್ನು ಇದೇ ವೇಳೆ ಅವರು ಪ್ರಶ್ನಿಸಿದರು.

ಈ ಆತ್ಮನಿರ್ಭರ ಭಾರತದ ಅಡಿಯಲ್ಲಿ ನಿರ್ಮಿಸಲಾದ ಸಂಸತ್ ಭವನ ಕಂಡಾಗ ನಿಮ್ಮಂತವರಿಗೆ ಉರಿ ಎದ್ದಿರುವುದು ಸಹಜ. ಭಾರತದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಅದುವೇ ನಮ್ಮ ಧೈರ್ಯ ಎಂದರು.
ಕಪಿಲ್ ಸಿಬಲ್ ಹೇಳಿದ್ದೇನು?
ಸಂಸತ್ ಭವನ ಉದ್ಘಾಟನೆ ಸಂದರ್ಭದಲ್ಲಿ ನವ ಭಾರತಕ್ಕೆ ಹೊಸ ಸಂಸತ್ ಭವನ ಎಂದು ಪ್ರಧಾನಿ ಮೋದಿ ಹೇಳಿದ್ದರು. ಮೋದಿ ಅವರ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಪಿಲ್ ಸಿಬಲ್ ನಮಗೆ ಬೇಕಿರುವುದು ಹೊಸ ಅಥವಾ ಹಳೆಯ ಭಾರತವಲ್ಲ, ಧಾರ್ಮಿಕ ಪ್ರಕ್ರಿಯೆಗಳ ಹೊರತಾದ ಸಂಸತ್ ಬೇಕು. ಎಲ್ಲರನ್ನೂ ಸಮಾನವಾಗಿ ನೋಡುವ ಕಾನೂನು ಯಾವುದೇ ಯುವತಿ/ಯುವಕ ಪ್ರೀತಿಸಿ ವಿವಾಹವಾದರೆ ಬಜರಂಗದಳದ ಭಯ ರಹಿತವಾಗಿರುವ ಭಾರತ ಬೇಕು. 6. ಮಾಧ್ಯಮಗಳು ತಟಸ್ಥವಾಗಿರಬೇಕು ಎಂದು ಸಿಬಲ್ ಟೀಕಿಸಿ ಟ್ವೀಟ್ ಮಾಡಿದ್ದರು.












Click it and Unblock the Notifications