ಮಲ್ಯ ಬಂಗಲೆಗೆ ಹೊಸ ವಾರಸ್ದಾರ, ಹೆಸ್ರು ಬದಲಿಸ್ತೀನಿ ಅಂತಾರ!

Posted By:
Subscribe to Oneindia Kannada

ಪಣಜಿ, ಏಪ್ರಿಲ್ 18: ಹೊಸ ಮಾಲೀಕ, ಹೊಸ ಹೆಸರು. ವಿಜಯ್ ಮಲ್ಯ ಮಾಲೀಕತ್ವದಲ್ಲಿದ್ದ ಕಿಂಗ್ ಫಿಷರ್ ವಿಲ್ಲಾವನ್ನು ಖರೀದಿಸಿದ ಸಚಿನ್ ಜೋಶಿ, ಹೆಸರು ಬದಲಾಯಿಸಲಿದ್ದಾರೆ. ಉತ್ತರ ಗೋವಾದ ಕಂಡೋಲಿಮ್ ಬೀಚ್ ವಿಲೇಜ್ ನ ಅದ್ಧೂರಿ ಅಸ್ತಿಯನ್ನು ವರದ ಹಿಂದಷ್ಟೇ ಖರೀದಿಸಿರುವ ಅವರು, ಕಿಂಗ್ ಫಿಷರ್ ಹೆಸರು ಬದಲಾಯಿಸುವ ಸಾಧತೆ ಇದೆ.

ಮೂರು ಬಾರಿ ಹರಾಜು ಹಾಕಿದಾಗಲೂ ಅಂದುಕೊಂಡಂಥ ಬೆಲೆಗೆ ವಿಲ್ಲಾ ಹರಾಜಾಗಿರಲಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟವು ಮಲ್ಯ ಪಡೆದ ಸಾಲಕ್ಕೆ ಪ್ರತಿಯಾಗಿ ಮತ್ತೊಮ್ಮೆ ಹರಾಜು ನಿಗದಿ ಮಾಡಿತ್ತು. ಸಮುದ್ರಕ್ಕೆ ಮುಖ ಮಾಡಿದಂತಿರುವ ಮೂರು ಎಕರೆ ವಿಸ್ತೀರ್ಣದ ಆಸ್ತಿಯನ್ನು 73.01 ಕೋಟಿ ರುಪಾಯಿಗೆ ಮತ್ತೊಬ್ಬ ಬಿಯರ್ ಮಾರಾಟ ಉದ್ಯಮಿ ಸಚಿನ್ ಖರೀದಿಸಿದ್ದಾರೆ.[ಜಾಮೀನು ಪಡೆಯುತ್ತಲೇ ಭಾರತೀಯ ಮಾಧ್ಯಮಗಳ ಮೇಲೆ ಮಲ್ಯ ಕಿಡಿ]

New owner Sachiin Joshi to rename Kingfisher Villa

"ಹೆಸರನ್ನು ಖಂಡಿತಾ ಬದಲಾಯಿಸ್ತೀನಿ. ಅದಿನ್ನೂ ಅಂತಿಮವಾಗಿಲ್ಲ. ಒಮ್ಮೆ ನಿರ್ಧಾರವಾಯಿತು ಅಂದರೆ ಎಲ್ಲರಿಗೂ ತಿಳಿಸ್ತೀನಿ" ಎಂದು ಜೋಶಿ ಹೇಳಿದ್ದಾರೆ. ಸಚಿನ್ ಜೋಶಿ ಅವರು ವೈಕಿಂಗ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಪ್ರಮೋಟರ್. ಆ ಕಂಪೆನಿಯು ಮಿನರಲ್ ವಾಟರ್, ಗೋವಾದ ಬಿಯರ್, ಮಾಧ್ಯಮ, ಹಾಸ್ಪಿಟಾಲಿಟಿ ಹಾಗೂ ಹೆಲ್ತ್ ಕೇರ್ ವ್ಯವಹಾರಗಳಲ್ಲಿ ತೊಡಗಿಕೊಂಡಿದೆ.

New owner Sachiin Joshi to rename Kingfisher Villa

ವಿಜಯ್ ಮಲ್ಯಗೆ ಬ್ಯಾಂಕ್ ಗಳು 9 ಸಾವಿರ ಕೋಟಿಗೂ ಹೆಚ್ಚು ಸಾಲ ನೀಡಿವೆ. ಅದರ ವಸೂಲಾತಿ ಭಾಗವಾಗಿ ಮಲ್ಯ ಅದ್ಧೂರಿ ಪಾರ್ಟಿ ನಡೆಸುತ್ತಿದ್ದ ವಿಲ್ಲಾವನ್ನು ಮಾರಾಟ ಮಾಡಲಾಗಿದೆ. ಈ ವಿಲ್ಲಾವನ್ನು ವ್ಯಾಪಾರದ ಸ್ಲುವಾಗಿ ಬಳಸುತ್ತೀರಾ ಎಂಬ ಪ್ರಶ್ನೆಗೆ, ಅದಿನ್ನೂ ನಿರ್ಧಾರ ಮಾಡಿಲ್ಲ ಎಂದು ಜೋಶಿ ಹೇಳಿದ್ದಾರೆ.[ಅರೆಸ್ಟ್ ಆದ 3 ಗಂಟೆಯೊಳಗೆ ಮಲ್ಯಗೆ ಜಾಮೀನು!!!]

New owner Sachiin Joshi to rename Kingfisher Villa

ಹತ್ತು ವರ್ಷದ ಹಿಂದೆ ಇಲ್ಲಿ ಪಾರ್ಟಿಯೊಂದರಲ್ಲಿ ಜೋಶಿ ಭಾಗವಹಿಸಿದ್ದರಂತೆ. ಅಗಲೇ ಅವರಿಗೆ ಇಷ್ಟವಾಗಿದೆ. "ಅವಕಾಶ ಸಿಕ್ಕರೆ ಈ ಬಂಗಲೆ ಖರೀದಿಸಬೇಕು. ಅಥವಾ ಕಿಂಗ್ ಫಿಷರ್ ವಿಲ್ಲಾದಂಥದ್ದನ್ನು ನಿರ್ಮಿಸಬೇಕು ಎಂದು ಸ್ನೇಹಿತರಿಗೆ ಹೇಳಿದ್ದೆ" ಎಂದು ಬಂಗಲೆ ಖರೀದಿಸಿದ ನಂತರ ಮಾಧ್ಯಮದ ಮುಂದೆ ಸಚಿನ್ ಹೇಳಿದ್ದಾರೆ.

New owner Sachiin Joshi to rename Kingfisher Villa

ಈ ವಿಲ್ಲಾದ ಅಂದಾಜು ಮೌಲ್ಯ ನೂರು ಕೋಟಿ ಎನ್ನಲಾಗಿದ್ದು, ಈ ವಿಲ್ಲಾದಲ್ಲಿ ಕೃತಕವಾದ ಕೊಳ, ಖಾಸಗಿ ಈಜುಕೊಳ, ಡ್ಯಾನ್ಸ್ ಫ್ಲೋರ್ ಹಾಗೂ ಹಸಿರು ಉದ್ಯಾನ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The iconic Kingfisher Villa once owned by troubled liquor baron Vijay Mallya is likely to be rechristened by Sachiin Joshi, who bought the luxury property in north Goa’s upscale Candolim beach village a week ago.
Please Wait while comments are loading...