ದೆಹಲಿ ಅಪ್ರಾಪ್ತೆ ಹತ್ಯೆ: ಭೀಕರ ಕೊಲೆಗೆ ಕಾರಣವಾಯಿತೇ ಮೃತಳ ಕೈಯಲ್ಲಿನ 'ಟ್ಯಾಟೂ'?
ನವದೆಹಲಿ, ಮೇ. 30: ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಅಪ್ರಾಪ್ತೆಯ ಅಮಾನುಷ ಕೊಲೆ ಪ್ರಕರಣದ ಬೆಳವಣಿಗೆಗಳಾಗಿದ್ದು, 20 ವರ್ಷದ ಆರೋಪಿ ಸಾಹಿಲ್ ಎಂಬುವವರನ್ನು ಬಂಧಿಸಲಾಗಿದೆ. ಸಂತ್ರಸ್ತೆಯೊಂದಿಗೆ ತನ್ನ ಸಂಬಂಧ ಮುರಿದು ಬಿದ್ದ ನಂತರ ಆತ ಕೋಪಗೊಂಡಿದ್ದ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ಇಬ್ಬರ ನಡುವಿನ ಜಗಳ, ಒಂದು ದಿನದ ಹಿಂದೆ ಭೀಕರ ಹತ್ಯೆಗೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬಾಲಕಿ 2021 ರಿಂದ ಸಾಹಿಲ್ ಜೊತೆ ಸಂಬಂಧ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಆದರೆ, ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದು, ಸಂಬಂಧ ಹಳಸಿದ ನಂತರ ಆಕೆ ಸಾಹಿಲ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು.

ಆಕೆಯ ಇಚ್ಛೆಯ ಹೊರತಾಗಿಯೂ, ಆರೋಪಿ ಸಾಹಿಲ್ ಆಕೆಯನ್ನು ಸಂಪರ್ಕಿಸಲು ಪಟ್ಟುಹಿಡಿದ್ದು, ರಾಜಿ ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದನು ಎಂದು ವರದಿಯಲ್ಲಿ ಸೇರಿಸಲಾಗಿದೆ. ಕೊಲೆಗೆ ಒಂದು ದಿನ ಮುನ್ನ ಶನಿವಾರವೂ ಸಹ, ಅವರು ಜಗಳವಾಡಿದ್ದರು. ಅದು ಅವರ ಸಂಬಂಧವನ್ನು ಇನ್ನಷ್ಟು ಹದಗೆಡಿಸಿತು. ಇದು ಕೊಲೆಯ ಹಿಂದಿನ ಕಾರಣವಾಗಿರಬಹುದು" ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದರ ಜೊತೆಗೆ ಮೃತ ಬಾಲಕಿಯ ಕೈಯಲ್ಲಿ "ಪ್ರವೀಣ್" ಎಂಬ ಹೆಸರನ್ನು ಹೊಂದಿರುವ ಹಚ್ಚೆ ಕಂಡುಬಂದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸಾಹಿಲ್ ಮತ್ತು ಮೃತ ಅಪ್ರಾಪ್ತೆ ನಡುವೆ ಆಗಾಗ್ಗೆ ವಾದ ವಿವಾದಗಳ ಹಿಂದೆ ಈ ಟ್ಯಾಟೊ ಒಂದು ಕಾರಣವಾಗಿರಬಹುದು ಎಂದು ದೆಹಲಿ ಪೊಲೀಸರು ಭಾವಿಸಿದ್ದಾರೆ.

ಸಾಹಿಲ್ ಬಂಧನ ನಡೆದಿದ್ದು ಹೀಗೆ
ಎಸಿ ಮತ್ತು ರೆಫ್ರಿಜರೇಟರ್‌ಗಳ ಮೆಕ್ಯಾನಿಕ್ ಆಗಿರುವ ಸಾಹಿಲ್ ಅವರನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಲಾಗಿದೆ. ಆತನ ಚಿಕ್ಕಮ್ಮನಿಂದ ಆರೋಪಿಯ ತಂದೆಗೆ ಕರೆ ಬಂದ ನಂತರ ಅವರ ಚಿಕ್ಕಮ್ಮನ ಮನೆಯಿಂದ ಪೊಲೀಸರು ಅವರನ್ನು ಪತ್ತೆಹಚ್ಚಿದ್ದಾರೆ. ವಿಶೇಷ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ದೇವೇಂದ್ರ ಪಾಠಕ್, "ಯುವತಿಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ತಕ್ಷಣ, ಭಾನುವಾರ ರಾತ್ರಿ ಸಾಹಿಲ್ ಅವರ ಪೋಷಕರನ್ನು ಬಂಧಿಸಲಾಯಿತು" ಎಂದಿದ್ದಾರೆ.
ಸಾಹಿಲ್ ಅವರಿಗೆ ಕರೆ ಮಾಡುತ್ತಿದ್ದುದನ್ನು ನಾವು ನೋಡಿದ್ದೇವು. ಬಳಿಕ ಪೊಲೀಸ್ ತಂಡವು ಗುರುತಿಸಲಾದ ಸ್ಥಳಕ್ಕೆ ಧಾವಿಸಿ ಬುಲಂದ್‌ಶಹರ್ ಬಳಿ ಸಾಹಿಲ್‌ನನ್ನು ಹಿಡಿದಿದೆ. ಆತನ ಬಂಧನವನ್ನು ಖಚಿತಪಡಿಸಿಕೊಳ್ಳಲು, ಆತನ ತಂದೆಯನ್ನೂ ಪೊಲೀಸ್ ತಂಡದೊಂದಿಗೆ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಭೀಕರ ಘಟನೆಯ 9 ಸೆಕೆಂಡ್‌ಗಳ ಸಿಸಿಟಿವಿ ಕ್ಯಾಮೆರಾ ದೃಶ್ಯದಲ್ಲಿ ಆರೋಪಿಯು ಬಲಿಪಶುವನ್ನು ಒಂದು ಕೈಯಿಂದ ಗೋಡೆಗೆ ಒತ್ತಿ ಹಿಡಿದು ಪದೇ ಪದೇ ಇರಿದಿರುವುದನ್ನು ತೋರಿಸಿದೆ. ಬಾಲಕಿ ನೆಲಕ್ಕೆ ಬಿದ್ದಾಗಲೂ ಅವನು ಚಾಕುವಿನಿಂದ ಇರಿಯುವುದನ್ನು ನಿಲ್ಲಲಿಲ್ಲ, ಅವಳ ಮೇಲೆ 16 ಬಾರಿ ಚಾಕುವಿನಿಂದ ದಾಳಿ ನಡೆಸಿ, ಬಳಿಕ ಆಕೆಯನ್ನು ಒದೆಯುತ್ತಾರೆ. ಇಷ್ಟು ಸಾಲದು ಎಂಬಂತೆ ಪದೇ ಪದೇ ಸಿಮೆಂಟ್ ಚಪ್ಪಡಿಯನ್ನು ಅಪ್ರಾಪ್ತೆ ಮೇಲೆ ಎಸೆದಿದ್ದಾರೆ.
ಪೊಲೀಸರು ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಆರೋಪಿ ಸಾಹಿಲ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.












Click it and Unblock the Notifications