ದೆಹಲಿ ಜಿ20 ಶೃಂಗಸಭೆ: ಮೂರು ದಿನ ಈ 'ಮೆಟ್ರೋ ನಿಲ್ದಾಣ'ಗಳು ಬಂದ್

ಬೆಂಗಳೂರು, ಸೆಪ್ಟಂಬರ್ 04: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆ (G20 Summit) ಇದೇ ಸೆಪ್ಟಂಬರ್ 9 ಮತ್ತು 10 ರಂದು ನಡೆಯಲಿದೆ. ಸದಸ್ಯರ ರಾಷ್ಟ್ರಗಳ ಸದಸ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಭದ್ರತಾ ದೃಷ್ಟಿಯಿಂದ ದೆಹಲಿಯ ಕೆಲವು ಮೆಟ್ರೋ ಗೇಟುಗಳು ಶೃಂಗಸಭೆಯ ಮುನ್ನಾದಿನ ಸೆ.8 ರಿಂದಲೇ ಮುಚ್ಚಲಾಗುತ್ತದೆ.

ದೆಹಲಿ ಪೊಲೀಸರು ಶೃಂಗಸಭೆ ಸಂಬಂಧ ಸೂಕ್ತ ಭದ್ರತೆ ಕಲ್ಪಿಸುತ್ತಿದ್ದಾರೆ. ಈಗಾಗಲೇ ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ. ದೆಹಲಿ ಮೆಟ್ರೋ ಘಟಕ ಪೊಲೀಸರು ಹೊರಡಿಸಿದ ಪ್ರಕಟಣೆ ಪ್ರಕಾರ, ವಿವಿಐಪಿ ಮೆಟ್ರೋ ನಿಲ್ದಾಣದ ಕಡೆಗಳಲ್ಲಿ ಇರುವ ಗೇಟುಗಳನ್ನು ಮೂರು ದಿನ (ಸೆ.8-10) ಮುಚ್ಚಲಾಗುವುದು ಎಂದು ತಿಳಿಸಿದೆ.

New Delhi G20 Summit On Sept 9 And 10, These Metro Station Gates Will Shut From Sept 8th

ಮಧ್ಯ ದೆಹಲಿ ಭಾಗದಿಂದ ದಕ್ಷಿಣ ದೆಹಲಿಯವರೆಗೆ ಹಲವು ನಿಲ್ದಾಣಗಳಿದ್ದು, ಈ ಪೈಕಿ ವಿವಿಐಪಿ ಕಡೆಗಿನ ಗೇಟುಗಳು ಬಂದ್ ಆಗಲಿವೆ. ಆದರೆ ಇಲ್ಲಿನ ಮೆಟ್ರೋ ಸೇವೆಯಲ್ಲಿ ಯಾವುದೇ ತೊಂದರೆ ಇಲ್ಲ. ದಕ್ಷಿಣ ದೆಹಲಿಯವರೆಗೆ ಬರುವ ಮುನಿರ್ಕಾ, ಆರ್‌ಕೆ ಪುರಂ, ಮೋತಿ ಬಾಗ್, ಭಿಕಾಜಿ ಕಾಮಾ ಪ್ಲೇಸ್, ಐಐಟಿ, ಸದರ್ ಬಜಾರ್ ಮತ್ತು ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ದೆಹಲಿ ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣವನ್ನು ಶೃಂಗಸಭೆಯ ಮೂರು ದಿನಗಳ ಕಾಲ ಪೂರ್ತಿಯಾಗಿ ಮುಚ್ಚಲಾಗುವುದು. ಇದು ಸೂಕ್ಷ್ಮ ಮೆಟ್ರೋ ನಿಲ್ದಾಣಗಳ ವ್ಯಾಪ್ತಿಗೆ ಬರಲಿದೆ. ಭದ್ರತೆ ದೃಷ್ಟಿಯಿಂದ ಮುಚ್ಚಲಾಗುತ್ತದೆ. ಇದರೊಂದಿಗೆ ಖಾನ್ ಮಾರ್ಕೆಟ್, ಧೌಲಾ ಕುವಾನ್, ಜನಪಥ್, ಭಿಕಾಜಿ ಕಾಮಾ ಪ್ಲೇಸ್ ಮತ್ತು ಸುಪ್ರೀಂ ಕೋರ್ಟ್ ಹತ್ತಿರ ಮೆಟ್ರೋ ನಿಲ್ದಾಣಗಳು ಸಹ ಸೂಕ್ಷ್ಮ ಮೆಟ್ರೋ ನಿಲ್ದಾಣಗಳಾಗಿವೆ.

ಸಾರ್ವಜನಿಕ ರಜೆ ಸಹ ಘೋಷಣೆ

ಮೆಟ್ರೋ ನಿಲ್ದಾಣಗಳ ಸ್ಥಗಿತ ಮಾತ್ರವಲ್ಲದೇ G-20 ಶೃಂಗಸಭೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಸೆಪ್ಟೆಂಬರ್ 8 ರಿಂದ 10 ರವರೆಗೆ ಸಾರ್ವಜನಿಕ ರಜೆ ಸಹ ಘೋಷಣೆ ಮಾಡಿದೆ.

ಶೃಂಗಸಭೆಗೆ ಕುರಿತಂತೆ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ಭದ್ರತಾ ಏಜೆನ್ಸಿಗಳು ನಿಗದಿತ ಸ್ಥಳಲ್ಲಿ ನಿಯೋಜನೆಗೊಳ್ಳಲಿವೆ. ಅಗತ್ಯ ಭದ್ರತೆ ಒದಗಿಸಲಿದ್ದು, ಭದ್ರತಾ ತಂಡಗಳು ಕೃತಕ ಬುದ್ಧಿಮತ್ತೆ (AI) ಮಾಡ್ಯೂಲ್ ತಂತ್ರಜ್ಞಾನ ಬಳಸಲಿದ್ದಾರೆ. ಇವರೊಂದಿಗೆ ನವದೆಹಲಿ ಸಂಚಾರಿ ಪೊಲೀಸರು ಸಹ ತಮ್ಮದೇ ಆದ ಸಿದ್ಧತೆಗಳಲ್ಲಿ ತೊಡಗಿವೆ ಎಂದು ಟಿವಿ ನೈನ್ ವರದಿ ಮಾಡಿದೆ.

ವಿವಿಧ ರಾಷ್ಟ್ರಗಳು ಸದಸ್ಯರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಚಿನ್ ಪಿಂಗ್ ಅವರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಿರಾಸೆ ವ್ಯಕ್ತಪಡಿಸಿದ್ದರು. ಅವರ ಬೆನ್ನಲ್ಲೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಜೊತೆ ಭಾಗವಹಿಸಲಿದ್ದಾರೆ. ಈ ಸಂಬಂಧ ಅವರು ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+