Delhi AQI: ದೆಹಲಿ ವಾಯು ಮಾಲಿನ್ಯವಾಗದಂತೆ ಸಿಎಂ ಕೈಗೊಂಡ ಕ್ರಮಗಳು ಇವು

ನವದೆಹಲಿ, ಸೆಪ್ಟಂಬರ್ 29: ವಾಯು ಮಾಲಿನ್ಯ ಎಂದರೆ ರಾಷ್ಟ್ರ ರಾಜಧಾನಿ ದೆಹಲಿ ನಗರವನ್ನು ತೋರಿಸುವಷ್ಟರ ಮಟ್ಟಿಗೆ ಅಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿರುತ್ತದೆ. ಇದರ ನಿಯಂತ್ರಣಕ್ಕೆ ಅನೇಕ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಸಹ ಹಬ್ಬದ ಸನ್ನಿವೇಶ, ಚಳಿಗಾಲದಲ್ಲಿ ಮತ್ತಷ್ಟು ಗಾಳಿ ಮಾಲಿನ್ಯಗೊಳ್ಳುತ್ತಲೆ ಇರುತ್ತದೆ. ಇದೀಗ ಮುಂಬರಲಿರುವ ಚಳಿಗಾಲ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಾಳಿಯ ಗುಣಮಟ್ಟ ಹಾಳಾಗದಂತೆ ತಡೆಗೆ ಹದಿನೈದು ಅಂಶಗಳನ್ನು ಪಟ್ಟಿ ಮಾಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ಸಿಎಂ ಕೇಜ್ರಿವಾಲ್, ನಾವು ಮಾಲಿನ್ಯ ಹೆಚ್ಚಿರುವ ಹದಿಮೂರು ಪ್ರದೇಶಗಳನ್ನು ಗುರುತಿಸಿದ್ದೇವೆ. ಈ ಪ್ರತಿ ಪ್ರದೇಶಗಳಿಗೆ (ಹಾಟ್‌ಸ್ಪಾಟ್‌) ಕ್ರಿಯಾ ಯೋಜನೆ ರೂಪಿಸಿ ವಾರ್ ರೂಮ್ ಸಹ ಸ್ಥಾಪಿಸಿದ್ದೇವೆ.

New Delhi CM Arvind Kejriwal Was Hundreds Of Team Form To Control Air Pollution in Upcoming Winter

ವಾಯು ಮಾಲಿನ್ಯ ನಿಯಂತ್ರಕ್ಕಾಗಿ 13 ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಳೆದ ವರ್ಷ 4400 ಎಕರೆ ಪ್ರದೇಶದಲ್ಲಿ ಕಡ್ಡಿ/ಕಸ ಸುಡುವುದನ್ನು ನಿಯಂತ್ರಿಸಲು ಜೈವಿಕ ವಿಘಟನೆ ಯಂತ್ರ ಬಳಸಿದ್ದೇವೆ. ಈ ವರ್ಷ 5 ಸಾವಿರ ಎಕರೆಯಲ್ಲಿ ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು ಎಎನ್‌ಐ ವರದಿ ಮಾಡಿದೆ.

ಆಂಟಿಸ್ಮೋಗ್ ಗನ್ ಅಳವಡಿಕೆ ಕಡ್ಡಾಯ

ಧೂಳಿನ ಮಾಲಿನ್ಯವನ್ನು ಕಡಿಮೆ ಮಾಡಲು, ನಿರ್ಮಾಣ ಹಂತದ ಕಟ್ಟಡಗಳ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲು 591 ತಂಡದ ಸದಸ್ಯರು ಕಾರ್ಯ ನಿರ್ವಹಿಸಲಿದ್ದಾರೆ. 500 ಚ.ಮೀಟರ್‌ಗಿಂತ ಅಧಿಕ ಸೈಟ್‌ಗಳು ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. 5000 ಚದರ ಮೀಟರ್‌ಗಿಂತ ಹೆಚ್ಚಿನ ಸೈಟ್‌ಗಳಲ್ಲಿ ಆಂಟಿಸ್ಮೋಗ್ ಗನ್ ಅಳವಡಿಕೆ ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದರು.

ವಾಹನ ಮಾಲಿನ್ಯ ಸೃಷ್ಟಿ ಕಡವಾಣಕ್ಕೆ 385 ತಂಡಗಳು ಹಳೆಯ ವಾಹನಗಳ ಮೇಲೆ ನಿಗಾ ಇಡುತ್ತಿವೆ 530 ನೀರು ಚಿಮುಕಿಸುವ ವಾಹನಗಳು ಕಾರ್ಯ ನಿರ್ವಹಿಸಲಿವೆ. 258 ಆಂಟಿಸ್ಮಾಗ್ ಗನ್‌ಗಳು ಚಳಿಗಾಲದಲ್ಲಿ ರಸ್ತೆಗಳಲ್ಲಿ ಬಳಕೆ ಆಗಲಿವೆ.

New Delhi CM Arvind Kejriwal Was Hundreds Of Team Form To Control Air Pollution in Upcoming Winter

ಕಸ ಸುಡುವುದರ ಮೇಲೆ ನಿಗಾ:70,000 ದೂರು ಸಲ್ಲಿಕೆ

ಸಾಲದೆಂಬಂತೆ 611 ತಂಡಗಳು ಬಯಲು ಪ್ರದೇಶದಲ್ಲಿ ಕಸ ಸುಡುವುದರ ಮೇಲೆ ಕಣ್ಣಿಡಲಿವೆ. ದಿನದ 24 ಗಂಟೆಯೂ ಕಸ ಸುಡುವುದರ ಮೇಲೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅದಕ್ಕಾಗಿ ಹಸಿರು ವಾರ್ ರೂಂ ರಚಿಸಲಾಗಿದೆ. ಗ್ರೀನ್ ದೆಹಲಿ ಆ್ಯಪ್‌ನಲ್ಲಿ ಬಂದಿರುವ ದೂರುಗಳ ಆಧಾರದಲ್ಲಿ ಎಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಈ ವರೆಗೆ ಸುಮಾರು 70,000 ದೂರುಗಳು ಸ್ವೀಕರಿಸಿದ್ದೇವೆ. ಅದರಲ್ಲಿ 90 ಪ್ರತಿಶತ ದೂರುಗಳನ್ನು ವಿಲೇವಾರಿ ಮಾಡಿದ್ದೇವೆ ಎಂದು ಅವರು ವಿವರಿಸಿದರು.

ಇನ್ನೂ ದೀಪಾವಳಿ ಸೇರಿದಂತೆ ಕೆಲವು ಹಬ್ಬಗಳು ಸಮೀಪಿಸುತ್ತಿವೆ. ಈ ಸಂಬಂಧ ಪಟಾಕಿ ಹೊಡೆಯದಂತೆ ಈಗಾಗಲೇ ನಿಷೇಧ ಹೇರಲಗಿದೆ. ಪರಿಸರದಲ್ಲಿ ಹಸಿರು ಹೊದಿಕೆ (ಓಜೋನ್)ಗೆ ತೊಂದರೆ ಆಗದಂತೆ ಒಂದು ಕೋಟಿ ಸಸಿಗಳನ್ನು ಹೊಸದಾಗಿ ನೆಡಲಾಗಿದೆ. ಅದರಲ್ಲಿ 52 ಲಕ್ಷವನ್ನು ದೆಹಲಿ ಸರ್ಕಾರ ನೆಡಲಿದ್ದು, ಕಸ ವಿಲೇವರಿಗೆ ಇ-ತ್ಯಾಜ್ಯ ಪಾರ್ಕ್ ಸ್ಥಾಪಿಸಲಾಗಿದೆ.

ದೆಹಲಿಗೆ ಬೇರೆ ಬೇರೆ ರಾಜ್ಯಗಳಿಂದ ಬರುವ ಜನರು ಮಾಲಿನ್ಯವನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಾರೆ. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕೈಗಾರಿಕೆಗಳನ್ನು PNG ಗೆ ಸ್ಥಳಾಂತರಿಸಬೇಕು. ಮಾಲಿನ್ಯ ನಿಯಂತ್ರಣಕ್ಕೆ ಸಣ್ಣ ಉದ್ಯಮ ಹಾಗೂ ಇನ್ನಿತರ ವಲಯದವರು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+