Rekha Gupta: ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಹಳೆಯ ವಿಡಿಯೋ ವೈರಲ್!
Rekha Gupta: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರು ಫೆಬ್ರವರಿ 20ರಂದು ಗುರುವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದರ ನಡುವೆಯೇ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ದೆಹಲಿಯಲ್ಲಿ ಮಹಿಳಾ ಶಾಸಕಿಗೆ ಮಣೆ ಹಾಕಿದೆ. ರೇಖಾ ಅವರು ಯಾವುದೇ ವಿವಾದಗಳಲ್ಲಿ ಸಿಲುಕಿಲ್ಲ. ಶುದ್ಧ ಹಸ್ತರು ಹಾಗೂ ವಕೀಲೆಯೂ ಆಗಿರುವ ಅವರು ಬುದ್ಧಿವಂತೆ ಎಲ್ಲಾದಕ್ಕಿಂತ ಮುಖ್ಯವಾಗಿ ಅವರು ಯಾವುದೇ ವಿವಾಗಳಲ್ಲಿಯೂ ಇಲ್ಲ. ಅವರು ಕಳೆದ ಮೂರು ದಶಕಗಳಿಂದಲೂ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುಂಚೆಯೇ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.
ದೆಹಲಿ ಮಹಿಳಾ ಮುಖ್ಯಮಂತ್ರಿ ರೇಖಾಗುಪ್ತಾ ಅವರು, ಮೂರು ಬಾರಿ ಕೌನ್ಸಿಲ್ ಆಗಿದ್ದರು. ಆದರೆ, ಕಳೆದ ಎರಡು ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅವರು ಎರಡೂ ಬಾರಿಯೂ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ಇದೀಗ ಮೊದಲ ಬಾರಿ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದು. ಮೊದಲ ಬಾರಿಯೇ ಅವರು ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಅವರಿಗೆ ಇಲ್ಲಿಯ ವರೆಗೆ ಸಚಿವರಾಗಿ ಅಥವಾ ಶಾಸಕಿಯಾಗಿಯೂ ಅನುಭವ ಇಲ್ಲ. ಈ ರೀತಿ ಇರುವಾಗಲೇ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಆ ಹಳೆಯ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ನೋಡೋಣ..

ಯಾರಾದರೂ ಉನ್ನತ ಹುದ್ದೆಗೇರಿದರೆ ಅದರ ಹಿಂದೆಯೇ ಅವರ ಹಳೇಯ ಹೇಳಿಕೆಗಳು ಹಾಗೂ ಅವರ ವಿಡಿಯೋಗಳು ವೈರಲ್ ಆಗುವುದು ಇದೆ. ಇನ್ನು ಸಾಮಾನ್ಯವಾಗಿ ಯಾವುದಾದರೂ ರಾಜಕಾರಣಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋದರೆ ಇಲ್ಲವೇ ಆ ಪಕ್ಷದ ನಾಯಕರ ಬಗ್ಗೆ ಮಾತನಾಡಿದ್ದರೆ ವಿಡಿಯೋಗಳು ವೈರಲ್ ಆಗುವುದು ಇದೆ. ಆದರೆ, ರೇಖಾ ಅವರು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲೇ ಗುರುತಿಸಿಕೊಂಡಿದ್ದಾರೆ. ಈ ರೀತಿ ಇದ್ದರೂ ಅವರು ಬಿಜೆಪಿಯಲ್ಲೇ ಈ ಹಿಂದೆ ಮಾಡಿರುವ ಅಚಾತುರ್ಯದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರೇಖಾ ಗುಪ್ತಾ ಅವರ ಹಳೆಯ ವಿಡಿಯೋದಲ್ಲಿ ಏನಿದೆ ?
ಈಗಾಗಲೇ ಹೇಳಿದಂತೆ ರೇಖಾಗುಪ್ತಾ ಅವರು ಮೂರು ಬಾರಿ ದೆಹಲಿ ಪಾಲಿಕೆಯ ಕೌನ್ಸಿಲರ್ ಆಗಿದ್ದರು. ಮೂರು ಬಾರಿ ಕೌನ್ಸಿಲರ್ ಆಗಿದ್ದ ಅವರು, ದೆಹಲಿಯಲ್ಲಿ ಬಿಜೆಪಿ ಮೇಯರ್ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ಕೌನ್ಸಿಲ್ ಸಭಾಂಗಣದಲ್ಲಿರುವ ಕುರ್ಚಿ, ಮೇಜು ಹಾಗೂ ಮೈಕ್‌ಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಸಹ ಈಗ ಇವರು ದೆಹಲಿಯ ನೂತನ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದೆ.
ಸರ್ಕಾರದ ಸ್ವತ್ತುಗಳನ್ನು ಕಾಪಾಡದವರು ದೆಹಲಿಯ ಮುಖ್ಯಮಂತ್ರಿಯಾಗಿರುವುದು ದುರಂತವೇ ಸರಿ ಎಂದು ಜನ ಹೇಳುತ್ತಿದ್ದಾರೆ.
ದೆಹಲಿ ಜನರೇ ಪುಣ್ಯವಂತರು!
ರೇಖಾ ಗುಪ್ತಾ ಅವರು ಇನ್ನು ಗುರುವಾರವಷ್ಟೇ ದೆಹಲಿಯ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಸ್ವೀಕರಿಸಿದ್ದಾರೆ. ಆದರೆ, ಇದರ ಬೆನ್ನಲ್ಲೇ ಅವರ ಆಡಳಿತದ ಬಗ್ಗೆ ಕೂತೂಹಲದ ಪೋಸ್ಟ್‌ಗಳನ್ನು ಜನ ಮಾಡುತ್ತಿದ್ದಾರೆ. ಹಳೆಯ ವಿಡಿಯೋವನ್ನು ಹಂಚಿಕೊಂಡು ಕೆಲವರು ದೆಹಲಿಯ ಜನರೇ ಪುಣ್ಯವಂತರು ಅಂತಲೂ ಹೇಳುತ್ತಿದ್ದಾರೆ.
ರೇಖಾ ಗುಪ್ತಾ ಅವರ ಹಲವು ವಿಡಿಯೋ ವೈರಲ್: ಇನ್ನು ಏಕಕಾಲಕ್ಕೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಹಲವು ವಿಡಿಯೋಗಳು ವೈರಲ್ ಆಗಿವೆ. ದೆಹಲಿಯ ಆಮ್ ಆದ್ಮಿ ಪಾರ್ಟಿಯ ವಿರುದ್ಧ ಅವರು ಮಾತನಾಡಿರುವ ವಿಡಿಯೋಗಳು ಸಹ ಇದೀಗ ವೈರಲ್ ಆಗುತ್ತಿವೆ.












Click it and Unblock the Notifications