AQI Update: ದೆಹಲಿಯಲ್ಲಿ ಅತೀ ಕಳಪೆ ಗಾಳಿ ದಾಖಲು, ಮುಂಬೈ ನಗರದಲ್ಲಿ ಹೇಗಿದೆ?, ವಿವರ
ನವದೆಹಲಿ, ಅಕ್ಟೋಬರ್ 23: ದೀಪಾವಳಿ ಹಬ್ಬ ಇನ್ನೂ ಎರಡು ವಾರ ಇದೆ. ಈಗಾಗಲೇ ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಗಾಳಿಯ ಗುಣಮಟ್ಟದ ಮಟ್ಟ ಕ್ರಮೇಣ ಕಳೆಪೆಯತ್ತ ಸಾಗುತ್ತಿದೆ. ದೆಹಲಿಯಲ್ಲಿ 'ಅತ್ಯಂತ ಕಳಪೆ' ಮಟ್ಟದ ವಾಯು ದಾಖಲಾಗಿದೆ. ಇಲ್ಲಿ ಒಟ್ಟಾರೆ ಗಾಳಿ ಗುಣಮಟ್ಟವು ಸೋಮವಾರ ಬೆಳಗ್ಗೆ 6.30ಕ್ಕೆ 303 AQI ದಾಖಲಾಗಿದೆ.
ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ಪ್ರಕಾರ, ಮುಂಬೈನಲ್ಲಿನ ಪ್ರಸ್ತುತ ಗಾಳಿಯ ಗುಣಮಟ್ಟವು 'ಮಧ್ಯಮ' ವಿಭಾಗದಲ್ಲಿ ಅಂದರೆ 127 AQI ದಾಖಲಾಗಿದೆ. ವಾಯುಮಾಲಿನ್ಯ ಹದಗೆಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ದೆಹಲಿಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP)-II ವಿಧಿಸಿದ್ದು, ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅಧ್ಯಕ್ಷತೆಯಲ್ಲಿ ಇಂದು ಸೋಮವಾರ ಸಭೆ ನಡೆಯಲಿದೆ. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತಷ್ಟು ಚರ್ಚೆ ಆಗಲಿದೆ.
ದೆಹಲಿಯ ಇಂಡಿಯನ್ ಗೇಟ್‌ನಲ್ಲಿ ಸೈಕ್ಲಿಸ್ಟ್ ಆಗಿರುವ ಸಂಜಯ್ ಚೌಧರಿ ಅವರು ಮಾಲಿನ್ಯ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ ಎರಡು ವಾರದಿಂದ ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ. ನೋಡಿದರೆ ಕಣ್ಣಿಗೆ ದಟ್ಟ ಹೊಗೆಯಂತೆ ಕಾಣುತ್ತಿದೆ. ಹೊಗೆ ದಟ್ಟವಾಗುತ್ತಿದ್ದಂತೆ ಪರಿಸ್ಥಿತಿ ಹದಗೆಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

ದೆಹಲಿ ಸಚಿವರ ನೇತೃತ್ವದಲ್ಲಿ ಇಂದು ಸಭೆ
ರಾಷ್ಟ್ರ ರಾಜಧಾನಿಯ ಹದಗೆಟ್ಟ ಗಾಳಿಯ ಗುಣಮಟ್ಟ ಹಿನ್ನೆಲೆಯಲ್ಲಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ವಾಯುಮಾಲಿನ್ಯ ನಿಯಂತ್ರಣ ಕ್ರಮಗಳ, ಹೆಚ್ಚಾಗಲು ಕಾರಣ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಿದ್ದಾರೆ. ಬಳಿಕ ಅಗತ್ಯ ಕ್ರಮ ವಹಿಸಲಿದ್ದಾರೆ. ಬಹಳ ದಿನಗಳ ನಂತರ ಭಾನುವಾರ ಅತ್ಯಂತ ಕಳಪೆ ಮಟ್ಟದ ಗಾಳಿ ದಾಖಲಾಗಿದೆ. ಇದು ದೆಹಲಿ ಸರ್ಕಾರದ ನಿದ್ದೆಗೆಡಿಸುತ್ತಿದೆ.
SAFAR ಪ್ರಕಾರ ಮತ್ತೊಂದು ನಗರವಾದ ಮುಂಬೈನಲ್ಲಿ ಇಂದು ಬೆಳಗ್ಗೆ 7:30 ಕ್ಕೆಬೋರಿವಲಿಯಲ್ಲಿ 101 AQI, ಮಲಾಡ್ (125), ನವಿ ಮುಂಬೈ 152, ಮಜಗಾಂವ್ 121 ಮತ್ತು ಕೊಲಾಬಾ 142 AQI ದಾಖಲಾಗಿದೆ.
ದೆಹಲಿಯಲ್ಲಿ ಕಳಪೆ ಮಾಲಿನ್ಯದ ದೃಶ್ಯಗಳು
ಅದೇ ರೀತಿ ದೆಹಲಿಯಲ್ಲಿ ಧೀರ್‌ಪುರದಲ್ಲಿ 352 AQI, ದೆಹಲಿ ವಿಶ್ವವಿದ್ಯಾಲಯ 330, ನೋಯ್ಡಾ 308, ಲೋಧಿ ರಸ್ತೆ 303 AQI, ಏರ್‌ಪೋರ್ಟ್ T3 323, IIT ದೆಹಲಿ 309 'ಅತ್ಯಂತ ಕಳಪೆ' ಮಟ್ಟದಲ್ಲಿ ದಾಖಲಾಗಿದೆ. ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥ್ ಪ್ರದೇಶದಲ್ಲಿನ ದೃಶ್ಯಗಳು ಮಾಲಿನ್ಯ ಮಟ್ಟವನ್ನು ಹೇಗಿವೆ ಎಂಬುದನ್ನು ತಿಳಿಸುತ್ತಿವೆ.
ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಯಲು ಬೃಹನ್‌ಮುಂಬೈ ಮಹಾನಗರ ಕಾರ್ಪೋರೇಷನ್ (BMC) ನಿರಂತರ ಕ್ರಮಗಳನ್ನು ಜಾರಿಗೆ ತರುತ್ತಿದೆ. ಕಳೆದ 15 ದಿನಗಳಲ್ಲಿ ಮುಂಬೈನ ವಿವಿಧ ಸ್ಥಳಗಳಲ್ಲಿ ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಕಾಗುದೆ, 30 ದಿನಗಳಲ್ಲಿ ಹೊಗೆ-ನಿರೋಧಕ ಯಂತ್ರಗಳು ಅಳವಡಿಸಲಾಗಿದೆ. ಸ್ವತಂತ್ರ ಗಾಳಿಯ ಗುಣಮಟ್ಟವನ್ನು ಅಳೆಯುವ ಸಾಧನಗಳನ್ನು ಸ್ಥಾಪಿಸಲು ಮತ್ತು ಅವುಗಳನ್ನು ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications