New ₹75 Coin: ಮೇ 28ಕ್ಕೆ ಪಾರ್ಲಿಮೆಂಟ್ ಕಟ್ಟಡ ಉದ್ಘಾಟನೆಯಂದು ಹೊಸ ನಾಣ್ಯ ಬಿಡುಗಡೆ, ಅದರ ವಿಶೇಷತೆ?
ಬೆಂಗಳೂರು, ಮೇ 26: ನೂತನ ಸಂಸತ್ ಭವನ ಉದ್ಘಾಟನೆಗೆ ಎರಡೇ ದಿನ ಬಾಕಿ ಇದ್ದು, ವಿರೋಧ ಪಕ್ಷಗಳು ಒಂದುಗೂಡಿ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಈ ಮಧ್ಯೆ ಹಣಕಾಸು ಸಚಿವಾಲಯವು ಮಹತ್ವದ ಅಧಿಸೂಚನೆಯೊಂದನ್ನು ಶುಕ್ರವಾರ ಹೊರಡಿಸಿದೆ. ಈ ವೇಳೆ ಹೊಸ ನಾಣ್ಯವೊಂದು ಚಲಾವಣೆಗೆ ಬರಲಿದೆ.
ಹೊಸ ಸಂಸತ್ ಭವನವು ಇದೇ ಮೇ 28ರಂದು ಭಾನುವಾರ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೊಸದಾಗಿ 75 ರೂಪಾಯಿ ಮುಖ್ಯಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ.

ಈ ಹೊಸ ನಾಣ್ಯವನ್ನು ಭಾರತ ರಾಷ್ಟ್ರವು 75 ವರ್ಷಗಳ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಯುಕ್ತ ಗೌರವಪೂರ್ವಕವಾಗಿ 75ರೂಪಾಯಿಯ ನಾಣ್ಯ ಲೋಕಾರ್ಪಡೆಗೊಳ್ಳಲಿದೆ ಎಂದು ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ.
ನಾಣ್ಯದ ವಿಶೇಷತೆ ಏನು?
ಈ ನೂತನ 75ರೂಪಾಯಿ ಮುಖಬೆಲೆ ನಾಣ್ಯದಲ್ಲಿ ನಾಲ್ಕು ಸಿಂಗಹಗಳ ಅಶೋಕ ಸ್ತಂಭ, ಅದರ ಕೆಳಗೆ 'ಸತ್ಯಮೇವ ಜಯತೆ' ಎಂದು ಹಿಂದಿಯಲ್ಲಿ ಬರೆಯಲಾಗಿದೆ. ನಾಣ್ಯದ ಎಡ ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 'ಭಾರತ್' ರೂಪಾಯಿ ಎಂದು ಕೆತ್ತಲಾಗಿದೆ. ಬಲಭಾಗದಲ್ಲಿ 'ಇಂಡಿಯಾ' ಎಂದು ಇಂಗ್ಲಿಷ್‌ನಲ್ಲಿ ಅಚ್ಚು ಮಾಡಲಾಗಿದೆ.
ಈ ನಾಣ್ಯವು ಭಾರತೀಯ ರೂಪಾಯಿ ಚಿಹ್ನೆ "₹" ಮತ್ತು ಲಯನ್ ಕ್ಯಾಪಿಟಲ್‌ನ ಕೆಳಗೆ ಇಂಗ್ಲಿಷ್ ಅಂಕಿಗಳಲ್ಲಿ '75' ಎಂಬ ಮುದ್ರೆ ಸಹ ಹೊಂದಿದೆ. ಈ ನಾಣ್ಯದ ಮತ್ತೊಂದು ಬದಿ ಹಿಮ್ಮುಖದಲ್ಲಿ ಮೇಲೆ ದೇವನಾಗರಿ ಲಿಪಿಯಲ್ಲಿ 'ಸಂಸದ್ ಸಂಕುಲ್' ಎಂಬ ಪದಗಳನ್ನು ಹೊಂದಿದೆ. ಕೆಳ ಭಾಗದಲ್ಲಿ ಪದಗಳ ಕೆಳಗೆ '2023' ವರ್ಷವನ್ನು ಮುದ್ರಿಸಲಾಗಿದೆ.

ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಹೊಸ ನಾಣ್ಯದ ಸಂಯೋಜನೆ ಶೇಕಡಾ 50 ಪ್ರತಿಶತ ಬೆಳ್ಳಿ ಮತ್ತು ಶೇಕಡಾ 40 ಪ್ರತಿಶತ ತಾಮ್ರ ಮತ್ತು ಐದು ಪ್ರತಿಶತ ನಿಕಲ್ ಮತ್ತು ಸತುವುಗಳಿಂದ ತಯಾರಿಸಲ್ಪಟ್ಟಿದೆ ಎಂದು ಮಾಹಿತಿ ನೀಡಲಾಗಿದೆ.
ಭಾರತದಾದ್ಯಂತ ಹಲವಾರು ವಿರೋಧ ಪಕ್ಷಗಳು ನೂತನ ಪಾರ್ಲಿಮೆಂಟ್ ಕಟ್ಟಡ ಉದ್ಘಾಟನೆಯನ್ನು ವಿರೋಧಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚಕಾರವೆತ್ತಿವೆ. ಅಲ್ಲದೇ ಒಕ್ಕೋರಲಿನಿಂದ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.
ಇಂದು ಪಿಐಎಲ್ ವಿಚಾರಣೆ
ಹೊಸ ಸಂಸತ್ತಿನ ಕಟ್ಟಡವನ್ನು ಮೇ 28 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಅಲ್ಲ ಎಂದು ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ವಿಚಾರಣೆ ನಡೆಸಲಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೊಸ ನಾಣ್ಯ ಬಿಡುಗಡೆಯಾಗಿ ಕ್ರಮೇಣ ಜನರ ಕೈಗೆ ಸಿಗಲಿದೆ.












Click it and Unblock the Notifications