• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ವಿರೋಧಿ ಟರ್ಕಿ ಅಧ್ಯಕ್ಷರ ಪತ್ನಿ ಜತೆ ಭೇಟಿ: ನಟ ಅಮೀರ್ ಖಾನ್ ಮತ್ತೊಂದು ವಿವಾದ

|
Google Oneindia Kannada News

ನವದೆಹಲಿ, ಆಗಸ್ಟ್ 17: ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಟರ್ಕಿಯ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್ ಅವರ ಪತ್ನಿಯೊಂದಿಗೆ ಅಮೀರ್ ಖಾನ್ ಮಾತನಾಡುತ್ತಿರುವ ಫೋಟೊ ವೈರಲ್ ಆಗಿದ್ದು, ಅಮೀರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೋಗನ್ ಅವರನ್ನು ಅಮೀರ್ ಖಾನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಫೋಟೊವನ್ನು ಎಮಿನೆ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಮೀರ್ ಖಾನ್ 'ಲಾಲ್ ಸಿಂಗ್ ಛಡ್ಡಾ' ಚಿತ್ರದ ಚಿತ್ರೀಕರಣಕ್ಕಾಗಿ ಟರ್ಕಿಗೆ ತೆರಳಿದ್ದಾರೆ. ಅಲ್ಲಿ ಅವರು ಎಮೈನ್ ಅವರನ್ನು ಭೇಟಿಯಾಗಿದ್ದರು.

ಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾ

ಅಮೀರ್ ಖಾನ್ ಅವರನ್ನು ವಿಶ್ವ ಪ್ರಸಿದ್ಧ ಭಾರತೀಯ ನಟ ಎಂದು ಕರೆದಿರುವ ಎಮೈನ್, ಅವರ ಸಿನಿಮಾಗಳನ್ನು ನೋಡಲು ತಾವು ಕಾತರದಿಂದ ಕಾದಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಅಮೀರ್ ಖಾನ್, ಪತ್ನಿ ಕಿರಣ್‌ಗೆ ಭಾರತ ಸುರಕ್ಷಿತವಲ್ಲ ಎಂಬ ಭಾವನೆ ಉಂಟಾಗಿದೆ ಎಂದಿದ್ದು ತೀವ್ರ ವಿವಾದ ಸೃಷ್ಟಿಸಿತ್ತು. ಮುಂದೆ ಓದಿ...

ಎಮೈನ್ ಎರ್ಡೋಗನ್ ಟ್ವೀಟ್

ಎಮೈನ್ ಎರ್ಡೋಗನ್ ಟ್ವೀಟ್

'ಜಗತ್ತಿನ ಖ್ಯಾತ ಭಾರತೀಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ಅಮೀರ್ ಖಾನ್ ಅವರನ್ನು ಇಸ್ತಾಂಬುಲ್‌ನಲ್ಲಿ ಭೇಟಿ ಮಾಡುವ ಸದವಕಾಶ ನನ್ನದಾಗಿತ್ತು. ಅವರು ತಮ್ಮ ಇತ್ತೀಚಿನ 'ಲಾಲ್ ಸಿಂಗ್ ಛಡ್ಡಾ' ಚಿತ್ರದ ಚಿತ್ರೀಕರಣವನ್ನು ಟರ್ಕಿಯ ವಿವಿಧ ಭಾಗಗಳಲ್ಲಿ ನಡೆಸಲು ನಿರ್ಧರಿಸಿರುವುದು ಸಂತಸ ತಂದಿದೆ. ಸಿನಿಮಾ ನೋಡಲು ಕಾದಿದ್ದೇನೆ' ಎಂದು ಎಮೈನ್ ಟ್ವೀಟ್ ಮಾಡಿದ್ದರು.

ನೆಟ್ಟಿಗರ ಆಕ್ರೋಶ

ನೆಟ್ಟಿಗರ ಆಕ್ರೋಶ

ಸ್ವಾತಂತ್ರ್ಯೋತ್ಸವ ದಿನದಂದೇ ಎಮೈನ್ ಅವರು ಇಸ್ತಾಂಬುಲ್‌ನ ಅಧ್ಯಕ್ಷರ ನಿವಾಸದಲ್ಲಿನ ಭೇಟಿಯ ಈ ಫೋಟೊ ಹಂಚಿಕೊಂಡಿದ್ದು, ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಟರ್ಕಿಗೆ ತೆರಳುವ ಭಾರತೀಯರಿಗೆ 'ಬಹಳ ಎಚ್ಚರಿಕೆಯಿಂದ ಇರುವಂತೆ' ಸೂಚನೆಟರ್ಕಿಗೆ ತೆರಳುವ ಭಾರತೀಯರಿಗೆ 'ಬಹಳ ಎಚ್ಚರಿಕೆಯಿಂದ ಇರುವಂತೆ' ಸೂಚನೆ

ಕಿಡಿಕಾರಿದ ವಿಎಚ್‌ಪಿ

ಕಿಡಿಕಾರಿದ ವಿಎಚ್‌ಪಿ

'ಭಾರತ ವಿರೋಧಿ ನೀತಿಯ ಕಾರಣದಿಂದ ಖ್ಯಾತಿ ಹೊಂದಿರುವ ವ್ಯಕ್ತಿಗಳು ಮತ್ತು ಮಾದರಿ ಜನರ ಕಡೆಗೆ ಕೆಲವು ನಟರು ಹಾಗೂ ವ್ಯಕ್ತಿಗಳಿಗೆ ಒಲವು ಹೆಚ್ಚಿದೆ. ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿ ಮಾಡಿರುವುದಕ್ಕೆ ನಟರೊಬ್ಬರು ಹೆಮ್ಮೆ ಪಡುತ್ತಿರುವುದು ಅನೇಕ ಸಂಗತಿಗಳನ್ನು ಸೂಚಿಸುತ್ತದೆ' ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಕಿಡಿಕಾರಿದ್ದಾರೆ.

ಪಾಕ್ ಪರ ಹೇಳಿಕೆ ನೀಡಿದ್ದ ಎರ್ಡೋಗನ್

ಪಾಕ್ ಪರ ಹೇಳಿಕೆ ನೀಡಿದ್ದ ಎರ್ಡೋಗನ್

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಮಹಾಯುದ್ಧದ ಬಳಿಕ ಉಂಟಾಗಿದ್ದ ಸ್ಥಿತಿ ಉದ್ಭವಿಸಿದೆ. ಒಟ್ಟೊಮನ್ ಚಕ್ರಾಧಿಪತ್ಯದ ವಿರುದ್ಧ ಟರ್ಕಿ ಹೋರಾಟಗಾರರು ನಡೆಸಿದ ಯುದ್ಧದ ವೇಲೆ ಟರ್ಕಿಯ ಜನರು ಅನುಭವಿಸಿದ ನೋವಿಗೂ ಕಾಶ್ಮೀರದ ಜನತೆ ಅನುಭವಿಸುತ್ತಿರುವ ನೋವಿಗೂ ವ್ಯತ್ಯಾಸವಿಲ್ಲ. ಹೀಗಾಗಿ ಕಾಶ್ಮೀರದ ವಿಚಾರಕ್ಕೆ ಪಾಕಿಸ್ತಾನಕ್ಕೆ ಹತ್ತಿರವಾಗಿರುವಂತೆ ಟರ್ಕಿಗೂ ಹತ್ತಿರವಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೆಸೆಪ್ ತಯ್ಯಿಪ್ ಎರ್ಡೋಗನ್ ಹೇಳಿಕೆ ನೀಡಿದ್ದು ಭಾರತವನ್ನು ಕೆರಳಿಸಿತ್ತು.

ದೇಶಕ್ಕಿಂತ ಮುಖ್ಯರಲ್ಲ

ದೇಶಕ್ಕಿಂತ ಮುಖ್ಯರಲ್ಲ

ಭಾರತದಲ್ಲಿ ವಾಸಿಸುವುದು, ಪಾಕಿಸ್ತಾನಕ್ಕೆ ನಿಷ್ಠೆ ತೋರುವುದು. ಟರ್ಕಿಯು ಪಾಕಿಸ್ತಾನದ ಸ್ನೇಹಿತ ಮತ್ತು ಭಾರತವನ್ನು ನಿರಂತರವಾಗಿ ಅವಮಾನಿಸುತ್ತಿದೆ. ಈ ವಿಚಾರದಲ್ಲಿ ಎನ್‌ಐಎ ವಿಚಾರಣೆಗೆ ಒಳಪಡಿಸಬೇಕು. ನಮ್ಮ ದೇಶಕ್ಕಿಂತ ಯಾವ ಬಾಲಿವುಡ್ ಸ್ಟಾರ್ ಕೂಡ ಮುಖ್ಯರಲ್ಲ ಎಂದು ಅನೇಕರು ಅಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

English summary
Social media users slams Bollywood actor Aamir Khan for meeting Turkish first lady Emine Erdogan as the country supporting Pakistan on Kashmir issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X