Mount Everest: ದುಬಾರಿಯಾದ ಮೌಂಟ್ ಎವರೆಸ್ಟ್- ಶುಲ್ಕ ಹೆಚ್ಚಳ
ಕಠ್ಮಂಡು ಜನವರಿ 23: ಮೌಂಟ್ ಎವರೆಸ್ಟ್ ಅನೇಕ ಪರ್ವತಾರೋಹಿಗಳನ್ನು ಆಕರ್ಷಿಸುವ ಸ್ಥಳ. ಜೊತೆಗೆ ಈ ಶಿಖರವನ್ನು ಏರುವುದು ಬಹುತೇಕ ಸಾಹಸಿಗಳ ಕನಸು. ಆದರೀಗ ಈ ಮೌಂಟ್ ಎವರೆಸ್ಟ್ ಶಿಖರ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಯಾಕೆಂದರೆ ಮೌಂಟ್ ಎವರೆಸ್ಟ್ ಏರಲು ಶುಲ್ಕ ಹೆಚ್ಚಾಗಿದೆ.
ಹೌದು.. ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್ ಏರಲು ಪರವಾನಗಿ ಶುಲ್ಕವನ್ನು 13 ಲಕ್ಷ ಹೆಚ್ಚಿಸಿದೆ. ವಿದೇಶಿಯರಿಗೆ ಪರ್ವತಾರೋಹಣ ಶುಲ್ಕವನ್ನು 11,000 ಡಾಲರ್ ರಿಂದ 15,000 ಡಾಲರ್ ಹೆಚ್ಚಿಸಲಾಗಿದೆ. ಇದು ಶೇಕಡಾ 36 ರಷ್ಟು ಹೆಚ್ಚಳವಾಗಿದೆ ಎಂದು ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿ ಮಾಧವ್ ತಿಳಿಸಿದ್ದಾರೆ. ಹೊಸ ದರಗಳು ಸೆಪ್ಟೆಂಬರ್ 1, 2025 ರಿಂದ ಜಾರಿಗೆ ಬರಲಿವೆ.

ಮೌಂಟ್ ಎವರೆಸ್ಟ್ ಏರಲು ಎಷ್ಟು ವೆಚ್ಚವಾಗುತ್ತದೆ?
ನೇಪಾಳ ಮತ್ತು ಚೀನಾ ನಡುವೆ ಇರುವ ವಿಶ್ವದ ಅತಿ ಎತ್ತರದ ಶಿಖರವನ್ನು ಏರಲು ಯೋಜಿಸುವವರು ಶರತ್ಕಾಲದಲ್ಲಿ 5,500 ಡಾಲರ್ ಬದಲಿಗೆ 7,500 ಡಾಲರ್ ಪಾವತಿಸಬೇಕಾಗುತ್ತದೆ. ಚಳಿಗಾಲ ಮತ್ತು ಮಳೆಗಾಲದ ಶುಲ್ಕ 2,750 ಡಾಲರ್ ರಿಂದ 3,750 ಡಾಲರ್ ಹೆಚ್ಚಾಗುತ್ತದೆ.
ನೇಪಾಳಿ ಪರ್ವತಾರೋಹಿಗಳಿಗೆ ಶುಲ್ಕವು 75,000 ನೇಪಾಳಿ ರೂಪಾಯಿಗಳಿಂದ 150,000 ರೂಪಾಯಿಗಳಿಗೆ ದ್ವಿಗುಣಗೊಂಡಿದೆ. ನೇಪಾಳ ಕೊನೆಯದಾಗಿ ಜನವರಿ 1, 2015 ರಂದು ಪರ್ವತಾರೋಹಣ ಪರವಾನಗಿ ಶುಲ್ಕವನ್ನು ಪರಿಷ್ಕರಿಸಿದೆ.
ಮೌಂಟ್ ಎವರೆಸ್ಟ್ ಶಿಖರದ ಎತ್ತರ ಎಷ್ಟು?
ಸ್ಥಳೀಯವಾಗಿ ಸಾಗರ್‌ಮಾಥ ಅಥವಾ ಕೊಮೊಲುಂಗ್ಮಾ ಎಂದು ಕರೆಯಲ್ಪಡುವ ಮೌಂಟ್ ಎವರೆಸ್ಟ್, ಸಮುದ್ರ ಮಟ್ಟಕ್ಕಿಂತ ಭೂಮಿಯ ಅತಿ ಎತ್ತರದ ಪರ್ವತವಾಗಿದೆ. ಇದರ ಎತ್ತರ 8,848.86 ಮೀ, ಇದನ್ನು ಇತ್ತೀಚೆಗೆ 2020 ರಲ್ಲಿ ಚೀನಾ ಮತ್ತು ನೇಪಾಳದ ಅಧಿಕಾರಿಗಳು ನಿಗದಿಪಡಿಸಿದ್ದರು.
ಪ್ರಪಂಚದಾದ್ಯಂತದ ಪರ್ವತಾರೋಹಿಗಳನ್ನು ಆಕರ್ಷಿಸುವ ಮೌಂಟ್ ಎವರೆಸ್ಟ್
ಅನೇಕ ಪರ್ವತಾರೋಹಿಗಳನ್ನು ಆಕರ್ಷಿಸುವ ಮೌಂಟ್ ಎವರೆಸ್ಟ್ ಎರಡು ಪ್ರಮುಖ ಕ್ಲೈಂಬಿಂಗ್ ಮಾರ್ಗಗಳನ್ನು ಹೊಂದಿದೆ. ಒಂದು ನೇಪಾಳದ ಆಗ್ನೇಯದಿಂದ ('ಸ್ಟ್ಯಾಂಡರ್ಡ್ ರೂಟ್' ಎಂದು ಕರೆಯಲಾಗುತ್ತದೆ) ಶಿಖರವನ್ನು ತಲುಪುತ್ತದೆ ಮತ್ತು ಇನ್ನೊಂದು ಟಿಬೆಟ್‌ನ ಉತ್ತರದಿಂದ ತಲುಪುತ್ತದೆ. ಸ್ಟ್ಯಾಂಡರ್ಡ್ ರೂಟ್ ಹತ್ತಲು ಯಾವುದೇ ಪ್ರಮುಖ ತಾಂತ್ರಿಕ ಸವಾಲುಗಳಿಲ್ಲ, ಆದಾಗ್ಯೂ ಎವರೆಸ್ಟ್ ಎತ್ತರದಲ್ಲಿ ನಾನಾ ಆರೋಗ್ಯ ಸಮಸ್ಯೆ, ಹವಾಮಾನ ಮತ್ತು ಗಾಳಿ, ಹಾಗೆಯೇ ಹಿಮಪಾತದಂತಹ ಅಪಾಯಗಳನ್ನು ಎದುರಿಸಬೇಕಾಗುತ್ತದೆ.
ಈ ಮೌಂಟ್ ಎವರೆಸ್ಟ್ ವಿಶ್ವದ ಅತಿ ಎತ್ತರದ ಶಿಖರವಾಗಿದೆ. ನೇಪಾಳ ಮತ್ತು ಟಿಬೆಟ್ ನಡುವಿನ ಗಡಿಯಲ್ಲಿ ಹಿಮಾಲಯದಲ್ಲಿದೆ. ಈ ಪರ್ವತವು ಶತಮಾನಗಳಿಂದ ಸಾಹಸಿ ಮತ್ತು ಪರ್ವತಾರೋಹಿಗಳ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಮೇಲ್ಭಾಗದಿಂದ ರಮಣೀಯ ದೃಶ್ಯಗಳನ್ನು ಆನಂದಿಸಲು ಜನರು ಬಯಸುತ್ತಾರೆ. ಈ ಪರ್ವತವನ್ನು ಹತ್ತುವುದು ಬಹಳ ಕಷ್ಟಕರ ಹಾಗು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.












Click it and Unblock the Notifications