• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಟಿಟಿಯಲ್ಲಿ ಪೊರ್ನೊಗ್ರಫಿಯೂ ಪ್ರಸಾರವಾಗುತ್ತಿದೆ, ಹೀಗಾಗಿ ನಿಯಂತ್ರಣ ಅಗತ್ಯ: ಸುಪ್ರೀಂಕೋರ್ಟ್

|

ನವದೆಹಲಿ, ಮಾರ್ಚ್ 4: ಓವರ್ ದಿ ಟಾಪ್ (ಒಟಿಟಿ) ವೇದಿಕೆಯಲ್ಲಿ ಪ್ರಸಾರವಾಗುವ ವೆಬ್ ಕಾರ್ಯಕ್ರಮಗಳು, ಸಿನಿಮಾಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದಿರುವ ಸುಪ್ರೀಂಕೋರ್ಟ್, ಇತ್ತೀಚೆಗೆ ರೂಪಿಸಿದ ನಿಯಂತ್ರಣ ನಿಯಮಗಳನ್ನು ಶುಕ್ರವಾರದ ವೇಳೆ ತನಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅಮೇಜಾನ್ ಪ್ರೈಂ ವಿಡಿಯೋಸ್‌ನಲ್ಲಿ ಪ್ರಸಾರವಾದ 'ತಾಂಡವ್' ವೆಬ್ ಸರಣಿ ಸುತ್ತಲೂ ಶುರುವಾದ ವಿವಾದದ ಸಂಬಂಧ ದಾಖಲಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ.

ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದಿಂದ ನೀತಿ ಸಂಹಿತೆ, ಕರಡು ನಿಯಮ ಸಿದ್ಧ

ಕೆಲವು ಪ್ರಕರಣಗಳಲ್ಲಿ, ಅಂತಹ ವೇದಿಕೆಗಳಲ್ಲಿ ಪೋರ್ನೊಗ್ರಫಿಯನ್ನೂ ಪ್ರಸಾರ ಮಾಡಲಾಗುತ್ತಿದೆ. ಹೀಗಾಗಿ ವೆಬ್ ಕಂಟೆಂಟ್‌ಗಳ ಮೇಲೆ ಕೆಲವು ನಿಯಂತ್ರಣಗಳನ್ನು ಹೇರುವ ಅಗತ್ಯವಿದೆ. ಇಲ್ಲಿ ಸಮತೋಲನವನ್ನು ನಿಭಾಯಿಸಬೇಕಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ನಿಯಮಗಳನ್ನು ಶುಕ್ರವಾರ ಪರಿಶೀಲಿಸಲಾಗುವುದು ಮತ್ತು ಇದೇ ವೇಳೆ ಅಮೇಜಾನ್ ಪ್ರೈಂ ವಿಡಿಯೋಸ್‌ನ ಅಪರ್ಣಾ ಪುರೋಹಿತ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.

'ತಾಂಡವ್' ವಿವಾದಕ್ಕೆ ಸಂಬಂಧಿಸಿದಂತೆ ಅಮೇಜಾನ್ ಪ್ರೈಂ ವಿಡಿಯೋ ಮಂಗಳವಾರ ಕ್ಷಮಾಪಣೆ ಕೋರಿತ್ತು. ತನ್ನ ವೀಕ್ಷಕರ ವೈವಿಧ್ಯಮಯ ನಂಬಿಕೆಗಳನ್ನು ಗೌರವಿಸುವುದಾಗಿ ತಿಳಿಸಿತ್ತು.

ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರದ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮಗಳು ಹಾಗೂ ಒಟಿಟಿ ವೇದಿಕೆಗಳು ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವಂತೆ ಕೇಂದ್ರ ಸರ್ಕಾರ ಕಳೆದ ವಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಇದರಂತೆ ಸರ್ಕಾರವು ಗುರುತಿಸಿದ ಯಾವುದೇ ವಿಷಯವನ್ನು 36 ಗಂಟೆಗಳ ಒಳಗೆ ಕಿತ್ತುಹಾಕಬೇಕು. ಜತೆಗೆ ದೇಶದಲ್ಲಿ ದೂರುಗಳನ್ನು ಪರಿಗಣಿಸಿ ಪರಿಹರಿಸುವ ವ್ಯವಸ್ಥೆಗಾಗಿ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ಅಮೇಜಾನ್, ನೆಟ್‌ಫ್ಲಿಕ್ಸ್‌ನಂತಹ ಒಟಿಟಿಗಳು ಹಾಗೂ ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣಗಳಿಗೆ ಹೊಸ ನಿಯಮಾವಳಿ ನಿಬಂಧನೆಗಳನ್ನು ವಿಧಿಸುತ್ತಿದೆ.

English summary
The Supreme Court said some regulations need for OTT platforms as some cases have shown even pornography is being telecast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X