ಕಾಕ್ ಟೇಲ್ ಕುಡಿದ ಆತನ ಅರ್ಧ ಹೊಟ್ಟೆ ಕತ್ತರಿಸಿದ ವೈದ್ಯರು

ಲಿಕ್ವಿಡ್ ನೈಟ್ರೋಜನ್ ಉಳ್ಳ ಕಾಕ್ ಟೇಲ್ ಸೇವಿಸಿ ದೆಹಲಿಯ ಯುವಕನೊಬ್ಬ ಅಸ್ವಸ್ಥ. ಗುರ್ ಗಾವ್ ನ ನೈಟ್ ಕ್ಲಬ್ ಒಂದರಲ್ಲಿ ನಡೆದ ಘಟನೆ. ಅಸ್ವಸ್ಥ ಯುವಕನಿಗೆ ಆಸ್ಪತ್ರೆಯಲ್ಲಿ ಆಪರೇಷನ್. ಸುಮಾರು 10 ಸೆಂ.ಮೀ. ಉದ್ದದ ಜಠರಕ್ಕೆ ಕತ್ತರಿ.

ನವದೆಹಲಿ, ಜುಲೈ 5: ಗುರ್ ಗಾವ್ ನ ನೈಟ್ ಕ್ಲಬ್ ಒಂದಕ್ಕೆ ಹೋಗಿದ್ದ ದೆಹಲಿಯ 30ರ ಪ್ರಾಯದ ಯುವಕನೊಬ್ಬ ಲಿಕ್ವಿಡ್ ನೈಟ್ರೋಜನ್ ಯುಕ್ತ ಕಾಕ್ ಟೇಲ್ ಕುಡಿದು ಅಸ್ವಸ್ಥನಾಗಿದ್ದು, ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಅರ್ಧದಷ್ಟು ಜಠರವನ್ನು ಆಪರೇಷನ್ ಮಾಡಿ ತೆಗೆದಿದ್ದಾರೆ.

ಖಾಸಗಿ ಕಾರಣಗಳಿಗಾಗಿ ಆ ಯುವಕನ ಹೆಸರು ಮುಂತಾದ ವಿವರಗಳ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ.

'Nearly Half of His Stomach Removed' After Gurgaon Liquid Nitrogen Cocktail

ರಾತ್ರಿ ಆ ನೈಟ್ ಕ್ಲಬ್ ಗೆ ಬಂದಿದ್ದ ಆ ಯುವಕ ಕಾಕ್ ಟೇಲ್ ಗೆ ಆರ್ಡರ್ ಮಾಡಿದ್ದ. ಆತ ಆದೇಶಿಸಿದ್ದಂತೆ ಲಿಕ್ವಿಡ್ ನೈಟ್ರೋಜನ್ ಹಾಕಿ ಕೊಡಲಾಗಿತ್ತು. ಯುವಕನ ಬಳಿಗೆ ಅದನ್ನು ತಂದಾಗ ಅದಿನ್ನೂ ಹೊಗೆಯಾಡುತ್ತಿತ್ತು.

ಆ ಇಬ್ಬನಿಯ ಮಾದರಿಯಲ್ಲಿ ಹಾರಿಹೋಗುವ ಮುನ್ನವೇ ಅದನ್ನು ಸವಿಯುವ ಹವ್ಯಾಸ ಹಲವಾರು ಯುವಕರಲ್ಲಿರುವುದರಿಂದ ಅದನ್ನು ಹಾಗೆಯೇ ಯುವಕ ಕುಡಿದಿದ್ದಾನೆ.

ಕುಡಿದ ಕೆಲವೇ ಕ್ಷಣಗಳಲ್ಲಿ ಆತನಿಗೆ ಕೊಂಚ ಹೊಟ್ಟೆನೋವು ಹಾಗೂ ಉಸಿರಾಟದ ಸಮಸ್ಯೆ ಕಂಡಿದೆ. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸದ ಆತ, ಕಾಕ್ ಟೇಲ್ ರುಚಿಯಾಗಿದ್ದರಿಂದ ಮತ್ತೊಂದು ಅಂಥದ್ದೇ ಕಾಕ್ ಟೇಲ್ ಅನ್ನು ಆರ್ಡರ್ ಮಾಡಿ ತರಿಸಿ ಕುಡಿದಿದ್ದಾನೆ.

ಆದರೆ, ನೋಡನೋಡುತ್ತಿದ್ದಂತೆ ಹೊಟ್ಟೆಯಲ್ಲಿ ಉರಿ ಸಂಕಟ ಜಾಸ್ತಿಯಾಗಿ ಆತನ ಉಸಿರಾಟದಲ್ಲಿ ತೀವ್ರವಾದ ಏರುಪೇರಾಗಿದೆ. ಅಲ್ಲದೆ, ಹೊಟ್ಟೆಯು ವಿಪರೀತವಾಗಿ ಬಾತುಕೊಳ್ಳಲಾರಂಭಿಸಿದೆ.

ತಕ್ಷಣವೇ ಆತನನ್ನು ಆ ನೈಟ್ ಕ್ಲಬ್ ಹತ್ತಿರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣವೇ ಆತನ ಹೊಟ್ಟೆಯ ಸಿ.ಟಿ. ಸ್ಕ್ಯಾನ್ ಮಾಡಿದ ವೈದ್ಯ ಡಾ. ಅಮಿತ್ ದೀಪ್ತಾ ಗೋಸ್ವಾಮಿ, ಆತ ಜಠರದ ಸುಮಾರು 10 ಸೆಂ.ಮೀ. ಭಾಗವು ನೈಟ್ರೋಜನ್ ನಿಂದ ತೂತುಗಳಾಗಿದ್ದನ್ನು ಗಮನಿಸಿದರು. ತಕ್ಷಣವೇ ತಡಮಾಡದೇ ಆಪರೇಷನ್ ಮಾಡಿ ಅಷ್ಟು ಉದ್ದದ ಜಠರವನ್ನು ಕತ್ತರಿಸಿದ್ದಾರೆ.

ಸುಮಾರು ಮೂರು ತಾಸುಗಳ ಕಾಲ ನಡೆದ ಆ ಸರ್ಜರಿಯಲ್ಲಿ ಸುಮಾರು ಅರ್ಧದಷ್ಟು ಜಠರವನ್ನು ಕತ್ತರಿಸಿ ತೆಗೆದು ಮುಂದಾಗಬಹುದಾಗಿದ್ದ ಅಪಾಯದಿಂದ ತಪ್ಪಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+