• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ಶೇ.80ರಷ್ಟು ಮಂದಿ ಕೊರೊನಾ ಲಸಿಕೆ ಮೊದಲ ಡೋಸ್ ಪಡೆದಿದ್ದಾರೆ: ಕೇಂದ್ರ

|
Google Oneindia Kannada News

ನವದೆಹಲಿ, ನವೆಂಬರ್ 13: ದೇಶಾದ್ಯಂತ ಮನೆ ಮನೆಗೂ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ.

ಶೇ.50ಕ್ಕಿಂತ ಕಡಿಮೆ ಮಂದಿ ಲಸಿಕೆ ಪಡೆದಿರುವ ಜಿಲ್ಲೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕೇಂದ್ರ ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಿದೆ.

ಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿ

ಎಲ್ಲಾ ವಯಸ್ಸಿನವರೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಪಡೆದಿದ್ದಾರೆಯೇ ಎಂದು ಪತ್ತೆ ಹಚ್ಚಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎರಡನೇ ಡೋಸ್ ಪಡೆದವರೂ ಕೂಡ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆಯುವಂತೆ ಪ್ರೇರೇಪಿಸುತ್ತಾರೆ ಎಂದು ಡಾ. ಅಗ್ನಾನಿ ಹೇಳಿದ್ದಾರೆ.

ಕೋವಿಡ್ 19 ಲಸಿಕೆ ಪಡೆಯಲು ಅರ್ಹರಾಗಿರುವ ಭಾರತದ ವಯಸ್ಕರ ಪೈಕಿ ಶೇ.80ರಷ್ಟು ಮಂದಿ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ ಶೇ.38ರಷ್ಟು ಜನರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಹರ್ ಘಟ್ ದಸ್ತಕ್ ಅಭಿಯಾನದ ಅಂಗವಾಗಿ ನಡೆದ ವೆಬ್‌ಸೆಮಿನಾರ್‌ನಲ್ಲಿ ಈ ಕುರಿತು ಅಗ್ನಾನಿ ಮಾತನಾಡಿದರು. ಅಭಿಯಾನದ ಮೂಲಕ ನವೆಂಬರ್ 30ರೊಳಗೆ ದೇಶದಲ್ಲಿ ಕೋವಿಡ್ 19 ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ಶೇ.90ರಷ್ಟು ಮುಟ್ಟುವಂತೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದರು.

ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಹಾಗೂ ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳಬೇಕಾದ ಅವಧಿ ಮೀರಿರುವ ಜನರಿಗೆ ಮನೆ ಮನೆಗೆ ಹುಡುಕಿಕೊಂಡು ಹೋಗಿ ಲಸಿಕೆ ಹಾಕುವ ಅಭಿಯಾನಕ್ಕೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ.

ಈವರೆಗೆ ಶೇ.80ರಷ್ಟು ಮಂದಿ ಜನರು ಲಸಿಕೆಯ ಮೊದಲ ಡೋಸ್ ಹಾಗೂ ಶೇ.38 ರಷ್ಟು ಜನರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿರುವುದಾಗಿ ತಿಳಿಸಿದರು. 2021ರ ಜನವರಿ 16ರಿಂದ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಹರ್ ಘರ್ ದಸ್ತಕ್ ಅಭಿಯಾನ ಆರಂಭಗೊಂಡಿದೆ. ದೆಹಲಿ ಸರ್ಕಾರ ಹೊರಡಿಸಿರುವ ಪ್ರಕಟಣೆ ಪ್ರಕಾರ, 27ರವರೆಗೆ ಅಭಿಯಾನ ನಡೆಯಲಿದೆ.
2021ರ ಅಂತ್ಯದ ವೇಳೆಗೆ ಕೊರೊನಾ ವಿರುದ್ಧ ಎಲ್ಲಾ 94 ಕೋಟಿ ವಯಸ್ಕರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರೆ, ಈ ಗುರಿಯನ್ನು ಮುಟ್ಟುವ ಸಾಧ್ಯತೆಯಿಲ್ಲ. ಆ ಹೊತ್ತಿಗೆ ಸರ್ಕಾರವು ಎಲ್ಲರಿಗೂ ಕೊರೊನಾ ಲಸಿಕೆ "ಲಭ್ಯವಾಗುವಂತೆ" ಮಾಡುತ್ತದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ 74 ಕೋಟಿಗೂ ಹೆಚ್ಚು ವಯಸ್ಕರು ಮೊದಲ ಡೋಸ್ ಪಡೆದಿದ್ದಾರೆ. 35 ಕೋಟಿ ಜನರು ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು ವ್ಯಾಕ್ಸಿನೇಷನ್ 109 ಕೋಟಿಗೂ ಅಧಿಕವಾಗಿದೆ. ದೇಶದಲ್ಲಿ ಇದುವರೆಗೂ ಶೇ. 79ರಷ್ಟು ಜನರಿಗೆ ಒಂದು ಡೋಸ್ ಲಸಿಕೆ ನೀಡಲಾಗಿದೆ. ಶೇ. 37ರಷ್ಟು ವಯಸ್ಕರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ.

ಎಲ್ಲಾ ವಯಸ್ಕರಿಗೆ ಸುಮಾರು 188 ಕೋಟಿ ಲಸಿಕೆ ಡೋಸ್‌ಗಳು ಅಂತಿಮವಾಗಿ ಅಗತ್ಯವಿದೆ. "ಲಸಿಕೆಯ ಲಭ್ಯತೆ ಸಮಸ್ಯೆಯಲ್ಲ. ನಾವು ರಫ್ತು ಕೂಡ ಆರಂಭಿಸಿದ್ದೇವೆ. ಈಗಾಗಲೇ ಸಾಕಷ್ಟು ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಲು ಜನರು ಮುಂದೆ ಬರಬೇಕು.

ಅಲ್ಲದೆ, ಹಿಂದುಳಿದಿರುವ ದೊಡ್ಡ ರಾಜ್ಯಗಳು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕಾಗಿದೆ. ಪ್ರಯತ್ನಗಳನ್ನು ಚುರುಕುಗೊಳಿಸಲು ಮನೆ-ಮನೆಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಈಗಾಗಲೇ 'ಹರ್ ಘರ್ ದಸ್ತಕ್' ಕಾರ್ಯಕ್ರಮವನ್ನು ಆರಂಭಿಸಿದೆ.

ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ 20 ಕೋಟಿ ಡೋಸ್ ಗೂ ಹೆಚ್ಚು ಲಸಿಕೆಗಳು ಬಳಕೆಯಾಗದೆ ಉಳಿದಿವೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸುಮಾರು 16 ಕೋಟಿ ಲಸಿಕೆಗಳು ರಾಜ್ಯಗಳಲ್ಲಿ ದಾಸ್ತಾನು ಇವೆ.

ಇನ್ನು 4ರಿಂದ 5 ಕೋಟಿ ಲಸಿಕೆಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನು ಇವೆ. ಒಟ್ಟಾರೆಯಾಗಿ, 109 ಕೋಟಿ ಡೋಸ್ ಲಸಿಕೆಗಳನ್ನು ನೀಡಿದ ನಂತರ, ಒಟ್ಟು 130 ಕೋಟಿ ಡೋಸ್ ಲಸಿಕೆಗಳನ್ನು ಈಗಾಗಲೇ ಲಭ್ಯವಾಗುವಂತೆ ಮಾಡಲಾಗಿದೆ.

ಝೈಡಸ್ ಕ್ಯಾಡಿಲಾ ಮತ್ತು ಬಯೋಲಾಜಿಕಲ್ ಇ-ಲಸಿಕೆ ದಾಸ್ತಾನುಗಳ ಜೊತೆಗೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸುಮಾರು 54 ಕೋಟಿ ಡೋಸ್‌ಗಳು (ಕೋವಿಶೀಲ್ಡ್‌ನ 44 ಕೋಟಿ ಮತ್ತು ಕೋವಾಕ್ಸಿನ್‌ನ 10 ಕೋಟಿ) ಲಭ್ಯವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಲೆಕ್ಕಾಚಾರ ಹಾಕಿದೆ.

English summary
Nearly 80 per cent of India's eligible adult population has been administered the first dose of COVID-19 vaccine while 38 per cent has been fully vaccinated, the Union Health Ministry said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X