ಪ್ರಾಣ ಕಳೆಯುವ ಕಾಯಿಲೆ ಪಟ್ಟಿಯಲ್ಲಿ ಮಧುಮೇಹಕ್ಕೆ ಏಳನೇ ಸ್ಥಾನ!

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada
ನವದೆಹಲಿ, ಫೆಬ್ರವರಿ 14: 2015ನೇ ಇಸವಿಯಲ್ಲಿ ಮಧುಮೇಹದಿಂದ ಮೃತಪಟ್ಟವರ ಸಂಖ್ಯೆ 3.46 ಲಕ್ಷ. 2005ರಲ್ಲಿ 2.24 ಲಕ್ಷ ಮಂದಿ ಮಧುಮೇಹಕ್ಕೆ ಬಲಿಯಾಗಿದ್ದರು. ದೇಶದಲ್ಲಿ ಸಾವಿಗೆ ಕಾರಣವಾಗುವ ಕಾಯಿಲೆಯ ಪಟ್ಟಿಯಲ್ಲಿ ಮಧುಮೇಹಕ್ಕೆ 7ನೇ ಸ್ಥಾನ. ಈ ಸಂಖ್ಯೆಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.[ಎಲ್ಲರ ಕಾಡುತ್ತಿರುವ ಸಕ್ಕರೆ ರೋಗ ಒದ್ದೋಡಿಸುವುದು ಹೇಗೆ?]

ಹೇಗೆ ಮಧುಮೇಹದಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಆಗಿದೆಯೋ ಅದೇ ರೀತಿ 2005ರಲ್ಲಿ ಸಾವಿಗೆ ಕಾರಣವಾಗುವ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿ ಇದ್ದದ್ದು ಏಳನೇ ಸ್ಥಾನಕ್ಕೆ ಏರಿದೆ. 2015ರಲ್ಲಿ ದೇಶದಲ್ಲಿದ್ದ ಮಧುಮೇಹಿಗಳ ಸಂಖ್ಯೆ ಏಳು ಕೋಟಿ. ಆದ್ದರಿಂದ ಕೇಂದ್ರ ಸರಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಆರೋಗ್ಯ ಖಾತೆ ರಾಜ್ಯ ಸಚಿವ ಫಗ್ಗನ್ ಸಿಂಗ್ ರಾಜ್ಯಸಭೆಯಲ್ಲಿ ಉತ್ತರಿಸುತ್ತಾ ಈ ಮಾಹಿತಿ ನೀಡಿದ್ದಾರೆ.[ಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣ]

Diabetes

ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಲಕ್ವದ ತಡೆ ಹಾಗೂ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸಲು ನಿರ್ಧರಿಸಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದೆ. ಆದ್ದರಿಂದ ಜೀವನ ಶೈಲಿ ಬದಲಾವಣೆ, ಆರಂಭದಲ್ಲಿ ರೋಗ ಪತ್ತೆ ಹಚ್ಚಲು ಹಾಗೂ ಚಿಕಿತ್ಸೆ ನೀಡಲು ಅಗತ್ಯ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As many as 3.46 lakh people died of diabetes in 2015, up from 2.24 lakh in 2005, with the deadly disease climbing to the seventh position on the list of causes of deaths in the country, government of India said recently.
Please Wait while comments are loading...