NDTV survey: ಭಾರತ್ ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ಜನಪ್ರಿಯತೆ ಮತ್ತಷ್ಟು ಹೆಚ್ಚಳ

ನವದೆಹಲಿ, ಮೇ. 23: ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ಜನಪ್ರಿಯತೆ ಶೇಕಡಾ 15 ರಷ್ಟು ಏರಿಕೆಯಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೆ ಉಳಿದಿದೆ ಎಂದು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಸಹಭಾಗಿತ್ವದಲ್ಲಿ ಎನ್‌ಡಿಟಿವಿ ನಡೆಸಿದ ವಿಶೇಷ ಸಮೀಕ್ಷೆಯು ಕಂಡುಹಿಡಿದಿದೆ.

ಮೋದಿ ಸರ್ಕಾರವು ಒಂಬತ್ತು ವರ್ಷಗಳನ್ನು ಪೂರೈಸುತ್ತಿದ್ದು, ಪ್ರಧಾನಿಯವರ ವಾಕ್ಚಾತುರ್ಯ, ಅಭಿವೃದ್ಧಿ ಕಾರ್ಯಗಳು ಮತ್ತು ವರ್ಚಸ್ಸು ಶೇಕಡಾ 40 ರಷ್ಟು ಜನರನ್ನು ಮೆಚ್ಚಿಸಿದೆ. ಈ ವಿಶೇಷ ಸಮೀಕ್ಷೆಯನ್ನು 19 ರಾಜ್ಯಗಳಲ್ಲಿ 7,000 ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿ ನಡೆಸಲಾಗಿದೆ ಎಂದು ಎನ್‌ಡಿಟಿವಿ ಹೇಳಿದೆ.

NDTV survey: Rahul Gandhis Popularity Up After Bharat Jodo Yatra

ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಶೇಕಡಾ 25 ರಷ್ಟು ಜನರು ಪ್ರಧಾನಿ ಅವರ ವಾಕ್ಚಾತುರ್ಯಕ್ಕಾಗಿ ಅವರನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ. ಶೇಕಡಾ 20 ಪ್ರತಿಶತದಷ್ಟು ಜನರು ಅವರ ಅಭಿವೃದ್ಧಿ ಕಾರ್ಯಗಳಿಗಾಗಿ ಅವರು ಇಷ್ಟಪಡುತ್ತಾರೆ ಎಂದು ಹೇಳಿದ್ದು, ಶೇಕಡಾ 13 ಪ್ರತಿಶತದಷ್ಟು ಜನರು ಕಠಿಣ ಪರಿಶ್ರಮ ಮತ್ತು ವರ್ಚಸ್ಸಿಗಾಗಿ ಅವರ ಬಗ್ಗೆ ಒಲವಿದೆ ಎಂದಿದ್ದಾರೆ.

ಇಂದು ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಶೇ 43ರಷ್ಟು ಜನರು ಪ್ರಧಾನಿ ಮೋದಿ ಮೂರನೇ ಅವಧಿಗೆ ಅಧಿಕಾರ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇಪ್ಪತ್ತೇಳು ಪ್ರತಿಶತ ಜನರು ರಾಹುಲ್ ಗಾಂಧಿ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ಶೇಕಡಾ 26 ರಷ್ಟು ಜನರು ತಾವು ಯಾವಾಗಲೂ ರಾಹುಲ್ ಗಾಂಧಿಯನ್ನು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.

NDTV survey: Rahul Gandhis Popularity Up After Bharat Jodo Yatra

ರಾಹುಲ್ ಗಾಂಧಿ ಅವರನ್ನು ಇಷ್ಟಪಡುವವರಲ್ಲಿ ಶೇಕಡಾ 15 ರಷ್ಟು ಜನರು ಕಾಂಗ್ರೆಸ್‌ನ ಐಕ್ಯತಾ ಯಾತ್ರೆ ಭಾರತ್ ಜೋಡೋ ಯಾತ್ರೆಯ ನಂತರ ಅವರನ್ನು ಇಷ್ಟಪಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಶೇಕಡಾ 27 ಪ್ರತಿಶತ ಜನರು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡದೆ ತಟಸ್ಥರಾಗಿದ್ದಾರೆ.

ಮೂವತ್ನಾಲ್ಕು ಪ್ರತಿಶತ ಜನರು ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಹುದ್ದೆಗೆ ಏಕೈಕ ಸವಾಲು ಎಂದು ಪರಿಗಣಿಸಿದ್ದಾರೆ. ವಿರೋಧ ಪಕ್ಷಗಳ ಪೈಕಿ ಉನ್ನತ ಹುದ್ದೆಗಾಗಿ ಇತರ ಸ್ಪರ್ಧಿಗಳಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಗಿಂತ ರಾಹುಲ್ ಗಾಂಧಿ ಹೆಚ್ಚು ಜನರ ಆಯ್ಕೆಯಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಶೇ 11 ರಷ್ಟು ಮತಗಳನ್ನು ಪಡೆದಿದ್ದಾರೆ.

ಪ್ರಧಾನಿ ಹುದ್ದೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇವಲ 4 ಪ್ರತಿಶತ ಮತಗಳನ್ನು ಪಡೆದರೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶೇ 5ರಷ್ಟು ಜನರ ಆಯ್ಕೆಯಾಗಿದ್ದಾರೆ. ಲೋಕನೀತಿ - ಸಿಎಸ್‌ಡಿಎಸ್ ಸಮೀಕ್ಷೆಯನ್ನು ಮೇ 10 ಮತ್ತು ಮೇ 19 ರ ನಡುವೆ ಭಾರತದ 19 ರಾಜ್ಯಗಳು ಮತ್ತು 71 ಕ್ಷೇತ್ರಗಳಲ್ಲಿ ಹರಡಿರುವ 7,202 ಜನರ ನಡುವೆ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+