Get Updates
Get notified of breaking news, exclusive insights, and must-see stories!

NDTV Public Opinion: ಟಿಪ್ಪು ಸುಲ್ತಾನ್ ವಿವಾದ ಮತಗಳ ಮೇಲೆ ಪರಿಣಾಮ ಬೀರಲಿದೆಯೇ?

ನವದೆಹಲಿ, ಮೇ. 01: ರಾಜ್ಯದಲ್ಲಿ ಕಳೆದ ಮೂರು ತಿಂಗಳು ಉರಿಗೌಡ, ನಂಜೇಗೌಡ ಮತ್ತು ಟಿಪ್ಪು ಸುಲ್ತಾನ್ ಹೆಸರುಗಳು ಹೆಚ್ಚು ವಿವಾದಕ್ಕೆ ಕಾರಣವಾಗಿದ್ದವು. ಬಿಜೆಪಿಗರಂತೂ ಉರಿಗೌಡ, ನಂಜೇಗೌಡ ಹೆಸರಲ್ಲಿ ಸಿನಿಮಾ ತೆಗೆಯಲು ಹೊರಟಿದ್ದರು. ಆದರೆ, ಕೊನೆಗೆ ಅದು ಕಾಲ್ಪನಿಕ ಎಂಬಂತಹ ವಿಚಾರಗಳು ಹೊರಬಂದು ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.

17ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನರ ಸಾವಿನ ರಾಜಕೀಯ ಈ ಬಾರಿಯ ಚುನಾವಣೆಯಲ್ಲಿ ಸದ್ದು ಮಾಡಿದ ವಿಚಾರ. ಉರಿಗೌಡ, ನಂಜೇಗೌಡ ಅವರೇ ಟಿಪ್ಪು ಸುಲ್ತಾನರನ್ನು ಕೊಂದವರು ಎಂದು ಬಿಜೆಪಿಗರು ಹೊಸ ಸುಳ್ಳು ಹರಿಯಬಿಟ್ಟಿದ್ದರು. ಇದು ಕಾಂಗ್ರೆಸ್ ಮತ್ತಿ ಬಿಜೆಪಿ ನಡುವೆ ಭಾರಿ ವಾಗ್ದಾಳಿಗೂ ಕಾರಣವಾಯಿತು. ಇಷ್ಟೇಲ್ಲಾ ಘಟನೆಗಳ ನಂತರವೂ ಇದು ನಾಡಿನ ಸಾಮಾನ್ಯ ಜನರಿಗೆ ತಲುಪಿಲ್ಲ ಎಂಬ ವಿಷಯವನ್ನು ಎನ್‌ಡಿಟಿವಿಯ ಸಮೀಕ್ಷೆ ಬಹಿರಂಗಪಡಿಸಿದೆ.

NDTV Public Opinion: What is the Tipu Sultan Controversy Impact on Voters?

ಲೋಕನೀತಿ - ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ಎನ್‌ಡಿಟಿವಿಯ ಹೊಸ ಅಭಿಪ್ರಾಯ ಸಂಗ್ರಹ ಮಾಡಿದ್ದು, ಇದರಲ್ಲಿ ಮೂವರಲ್ಲಿ ಒಬ್ಬ ಮತದಾರರಿಗೆ ಮಾತ್ರ ಈ ವಿಷಯದ ಬಗ್ಗೆ ತಿಳಿದಿದೆ ಎಂಬ ವಿಚಾರ ಹೊರ ಬಂದಿದೆ. ವಿಷಯ ತಿಳಿದಿರುವವರಲ್ಲಿ ಕೇವಲ 29 ಪ್ರತಿಶತದಷ್ಟು ಜನರು ಈ ಸಮಸ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಕಂಡುಹಿಡಿದಿದೆ.

ಸುಮಾರು ಎಂಟು ವರ್ಷಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆಯನ್ನು ಮಾಡುವುದಾಗಿ ಘೋಷಿಸಿದ ನಂತರ ಕರ್ನಾಟಕದಲ್ಲಿ ವಿವಾದ ಭುಗಿಲೆದ್ದಿತು. ಬಿಜೆಪಿ ಟಿಪ್ಪು ಸುಲ್ತಾನ್ ಜನ್ಮ ದಿನದ ವಿರುದ್ಧ ಕಿಡಿಕಾರಿತ್ತು.

NDTV Public Opinion: What is the Tipu Sultan Controversy Impact on Voters?

ಇದಾದ ಮೇಲೆ ಚುನಾವಣೆಗೆ ಕೆಲವೆ ತಿಂಗಳುಗಳು ಇರುವಾ ಬಿಜೆಪಿಯು ಟಿಪ್ಪು ಸುಲ್ತಾನನನ್ನು ಕೊಂದದ್ದು ಬ್ರಿಟಿಷರು ಮತ್ತು ಮರಾಠರ ಸೈನ್ಯವಲ್ಲ, ಆದರೆ ಇಬ್ಬರು ಒಕ್ಕಲಿಗ ನಾಯಕರು ಎಂಬ ಹೇಳಿಕೆಯನ್ನು ಪ್ರಚಾರ ಮಾಡಿತು. ಇದರ ಮೂಲಕ ರಾಜಕೀಯವಾಗಿ ಪ್ರಬಲವಾದ ಒಕ್ಕಲಿಗ ಸಮುದಾಯವನ್ನು ಬೆಂಬಲಿಸುವ ಪ್ರಯತ್ನವನ್ನು ಮಾರ್ಚ್‌ನಲ್ಲಿ ಬಿಜೆಪಿ ಮಾಡಿತು. ಆದರೆ, ಇತಿಹಾಸಕಾರರು ಈ ಉರಿಗೌಡ, ನಂಜೇಗೌಡ ಕಲ್ಪನೆಯನ್ನು ಅಪಹಾಸ್ಯ ಮಾಡಿದ್ದಾರೆ.

ಎನ್‌ಡಿಟಿವಿ ಸಮೀಕ್ಷೆ ವೇಳೆ ಟಿಪ್ಪು ಸುಲ್ತಾನ್ ರಾಜಕೀಯ ಜಗಳ ರಾಜ್ಯದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿದೆಯೇ ಎಂಬ ಪ್ರಶ್ನೆಗೆ, ಶೇ 74 ರಷ್ಟು ಜನರು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಆದರೆ, ಈ ವಿಷಯವನ್ನು ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳುವವರು ಶೇ 74 ರಷ್ಟು ಜನರು ಬಿಜೆಪಿ ಬೆಂಬಲಿಗರು ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇದನ್ನು ವಿರೋಧಿಸಿದವರು ಶೇಕಡಾ 22 ರಷ್ಟು ಜನ ಕಾಂಗ್ರೆಸ್ ಬೆಂಬಲಿಗರಾಗಿದ್ದರು. ಉಳಿದ 4ರಷ್ಟು ಜನ ಏನು ಉತ್ತರ ನೀಡಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಒಕ್ಕಲಿಗ ಸಮುದಾಯ ಇದುವರೆಗೆ ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಜಾತ್ಯಾತೀತ ಜನತಾದಳದ ಬೆಂಬಲಿಗರಾಗಿದ್ದಾರೆ. ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದಾರೆ ಎಂದು ಬಿಜೆಪಿ ಹೇಳಿರುವ ಉರಿಗೌಡ ಮತ್ತು ನಂಜೇಗೌಡ ಕಾಲ್ಪನಿಕ ಪಾತ್ರಗಳಾಗಿರಬಹುದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಇನ್ನು, ಕರ್ನಾಟಕದ ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಲಭ್ಯವಿದ್ದ ಶೇಕಡಾ 4 ರಷ್ಟು ಮೀಸಲಾತಿಯನ್ನು ಕಡಿತ ಮಾಡಿ ಅದನ್ನು ರಾಜಕೀಯವಾಗಿ ಪ್ರಬಲವಿರುವ ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಮಚುವ ನಿರ್ಧಾರ ತೆಗೆದುಕೊಂಡಿದೆ. ಸದ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಈ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ, ಸರ್ಕಾರದ ಈ ನಡೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಬಹುದು. ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿರುವ ನಿರ್ಧಾರ ಬಿಜೆಪಿಯ ಮತಗಳನ್ನು ಹೆಚ್ಚಿಸಲಿದೆ ಎಂದು ಎನ್‌ಡಿಟಿವಿ ಮತ್ತು ಸಿಎಸ್‌ಡಿಎಸ್ ನಡೆಸಿರುವ ಅಭಿಪ್ರಾಯ ಸಂಗ್ರಹದಲ್ಲಿ ತಿಳಿದುಬಂದಿದೆ.

ಮೇ 10 ರಂದು ನಡೆಯಲಿರುವ ಚುನಾವಣೆಗೆ ಮುನ್ನ ಸಾರ್ವಜನಿಕ ಮನಸ್ಥಿತಿಯನ್ನು ಅಳೆಯುವ ಗುರಿಯನ್ನು ಹೊಂದಿರುವ ಈ ಸಮೀಕ್ಷೆಯು 21 ವಿಧಾನಸಭಾ ಕ್ಷೇತ್ರಗಳ 82 ಮತಗಟ್ಟೆಗಳಲ್ಲಿ ಹರಡಿರುವ 2,143 ಮತದಾರರನ್ನು ಸಂದರ್ಶಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+