ಎನ್ ಡಿಟಿವಿ ಶಿಕ್ಷೆಗೆ ತಾತ್ಕಾಲಿಕ ತಡೆಯೊಡ್ಡಿದ ಕೇಂದ್ರ ಸರಕಾರ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 8: ನಿಷೇಧ, ಆ ನಂತರ ತೆರವು. ಎನ್ ಡಿಟಿವಿ ಹಿಂದಿ ಚಾನಲ್ ಮೇಲೆ ಮೊದಲಿಗೆ ಪ್ರಸಾರ ಸ್ಥಗಿತದ ಶಿಕ್ಷೆ ಘೋಷಿಸಿದ್ದು, ಆ ನಂತರ ಅದನ್ನು ತೆರವು ಮಾಡಿದ್ದು ಟ್ವಿಟರ್ ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ಸೋಮವಾರ ಅಷ್ಟೇ ಮಾಧ್ಯಮದವರ ಜತೆಗೆ ಮಾತನಾಡಿದ್ದ ಸಚಿವ ವೆಂಕಯ್ಯ ನಾಯ್ಡು, ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದರು.

ಆದರೆ, ಸಂಜೆ ಹೊತ್ತಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾಹಿತಿ ಪ್ರಕಾರ, ನಿಷೇಧವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಈ ನಿರ್ಧಾರದ ಹಿಂದಿನ ತರ್ಕ ಏನು ಎಂಬುದೇ ಹಲವರ ಪ್ರಶ್ನೆ.[ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಎನ್ ಡಿಟಿವಿ]

NDTV ban or no ban- The inside story behind the flip-flop

ಸರಕಾರ ಈ ರೀತಿ ನಿಷೇಧ ತೆರವು ಮಾಡತ್ತೆ ಅನ್ನೋದಾದರೆ ಹಾಕಿದ್ದಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ. ಸಾಯಂಕಾಲದ ಹೊತ್ತಿಗೆಲ್ಲ ತಮ್ಮ ನಿರ್ಧಾರ ಬದಲಿಸೋ ಹಾಗಿದ್ದರೆ ಮಾಧ್ಯಮದ ಎದುರು ಅಷ್ಟೊಂದು ಸಮರ್ಥನೆ ಯಾಕೆ ಮಾಡಿಕೊಳ್ಳಬೇಕಿತ್ತು ಎಂಬುದು ಸದ್ಯಕ್ಕೆ ಚರ್ಚೆಯಲ್ಲಿದೆ.[ಎನ್ ಡಿಟಿವಿಗೆ 24 ಗಂಟೆ ಶಿಕ್ಷೆ: ನಿರ್ಧಾರಕ್ಕೆ ವ್ಯಾಪಕ ಖಂಡನೆ]

ನಿಷೇಧದ ಶಿಕ್ಷೆ ಪ್ರಶ್ನಿಸಿ ಎನ್ ಡಿಟಿವಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನವೆಂಬರ್ 9ಕ್ಕೆ ಹೇರಿದ್ದ ಈ ಶಿಕ್ಷೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಈ ನಿರ್ಧಾರ ಭಾರೀ ಪರಿಣಾಮ ಬೀರುತ್ತೆ ಎಂದು ಎನ್ ಡಿಟಿವಿಹೇಳಿತ್ತು. ಈ ಅರ್ಜಿಯು ಸರಕಾರದ ನಿರ್ಧಾರದ ಮೇಲೆ ಪರಿಣಾಮ ಬೀರಿದೆಯಾ? ನಿರ್ಧಾರದಲ್ಲಿ ಬದಲಾವಣೆ ಅಲ್ಲ, ಆ ತೀರ್ಮಾನವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ ಎಂದು ಸರಕಾರದ ಪರವಾಗಿ ಹೇಳಲಾಗಿದೆ.

ನಾಯ್ಡು ಹಾಗೂ ಚಾನಲ್ ನ ಪ್ರನಯ್ ರಾಯ್ ಮಧ್ಯೆ ಸಭೆ ನಡೆದಿತ್ತು. ಆ ಸಂದರ್ಭದಲ್ಲೇನೂ ಚಾನಲ್ ಸ್ಪಷ್ಟೀಕರಣವನ್ನು ಪೂರ್ಣವಾಗಿ ಒಪ್ಪಿಲ್ಲ. ಆ ನಂತರ ಸುಪ್ರೀಂ ಕೋರ್ಟ್ ಗೆ ಚಾನಲ್ ಸಲ್ಲಿಸಿದ ಅರ್ಜಿ ವಿಚಾರಣೆಯ ತೀರ್ಪು ಗಮನಿಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.[NDTV ಮೇಲೆ ಕೇಂದ್ರ ಸರಕಾರದ 'ಸರ್ಜಿಕಲ್ ಸ್ಟ್ರೈಕ್': ಒಂದು ದಿನ ಬ್ಯಾನ್!]

ಮಂಗಳವಾರ ಎನ್ ಡಿಟಿವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಎಲ್ಲರ ಕಣ್ಣು ಆ ಕಡೆಗಿದೆ. ಸರಕಾರ ಕೂಡ ನಿಷೇಧ ಶಿಕ್ಷೆಯ ಸಮರ್ಥನೆ ಮಾಡಿಕೊಳ್ಳುವ ನಿರೀಕ್ಷೆ ಇದೆ. ಪಠಾಣ್ ಕೋಟ್ ನಲ್ಲಿ ನಡೆದಿದ್ದ ಉಗ್ರಗಾಮಿಗಳ ದಾಳಿ ಸುದ್ದಿಯನ್ನು ಬಿತ್ತರಿಸಿದ್ದ ಎನ್ ಡಿಟಿವಿ, ಕೇಬಲ್ ಟಿವಿ ಕಾಯ್ದೆ ಉಲ್ಲಂಘಿಸಿದೆ ಎಂದು ಒಂದು ದಿನದ ಮಟ್ಟಿಗೆ (ನವೆಂಬರ್ 9) ಪ್ರಸಾರ ಸ್ಥಗಿತದ ಶಿಕ್ಷೆ ವಿಧಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The ban and then the lift. Twitter was abuzz with several persons questioning the logic of first banning NDTV India for a day and then go on to lift the same. Interestingly Venkaiah Naidu had on Monday said at a presser that the ban was justified. However by evening source based information from the Information and Broadcasting Ministry began to trickle in suggesting that the ban was put on hold.
Please Wait while comments are loading...