ಭಾರತದಲ್ಲಿ ಪ್ರತಿ 16 ನಿಮಿಷಕ್ಕೊಂದು ಅತ್ಯಾಚಾರ: ಆತಂಕ ಮೂಡಿಸಿದ ವರದಿ
ನವದೆಹಲಿ, ಅಕ್ಟೋಬರ್ 02: ಭಾರತದಲ್ಲಿ ಪ್ರತಿ 1 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ ಎಂದು ಎನ್‌ಸಿಆರ್‌ಬಿ ವರದಿ ನೀಡಿದ್ದು ಆತಂಕ ಮೂಡಿಸಿದೆ.
ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ 2019ರ ವರದಿ 'ಕ್ರೈಂ ಇನ್ ಇಂಡಿಯಾ' ಬಿಡುಗಡೆ ಮಾಡಿದೆ.ಇದರಲ್ಲಿ ಕೆಲವು ಆತಂಕಕಾರಿ ವಿಷಯಗಳು ಬಹಿರಂಗಗೊಂಡಿವೆ. ಭಾರತದಲ್ಲಿ ಮಹಿಳೆಯರು ದಿನದಿಂದ ದಿನಕ್ಕೆ ಅಸುರಕ್ಷಿತರಾಗುತ್ತಿದ್ದಾರೆ ಎಂಬುದನ್ನು ವಿವರಿಸಲಾಗಿದೆ.
ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ 20 ವರ್ಷದ ದಲಿತ ಯುವತಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಆಕೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಎನ್‌ಸಿಆರ್‌ಬಿ ವರದಿ ಪ್ರಕಾರ ದೇಶದಲ್ಲಿ ಪ್ರತಿ 16 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ. ವರದಕ್ಷಿಣೆ ಕಿರುಕುಳದಿಂದ ಪ್ರತಿ ಒಂದು ಗಂಟೆಗೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆಯು ಅತ್ತೆ ಅಥವಾ ಗಂಡನ ಕ್ರೂರತನಕ್ಕೆ ಬಲಿಯಾಗುತ್ತಿದ್ದಾಳೆ. ಹಾಗೆಯೇ ಪ್ರತಿ ಎರಡು ಗಂಟೆಗೊಂಡು ಆಸಿಡ್ ದಾಳಿ ನಡೆಯುತ್ತಿದೆ. ಪ್ರತಿ 30 ಗಂಟೆಗೊಂದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದೆ. ಹಾಗೆಯೇ ಪ್ರತಿ ಎರಡು ಗಂಟೆಗೆ ಒಂದು ಹೆಣ್ಣುಮಗು ಮೇಲೆ ಅತ್ಯಾಚಾರ ಯತ್ನ ನಡೆಯುತ್ತಿದೆ.












Click it and Unblock the Notifications