ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ದೇಶದ ಕ್ರೈಂ ರಾಜಧಾನಿಯಲ್ಲ, ಅದು ದಕ್ಷಿಣದ ಕರಾವಳಿ ನಗರ!

|
Google Oneindia Kannada News

ನವದೆಹಲಿ, ಸೆ 1: ದೇಶದಲ್ಲಿ ಅತಿಹೆಚ್ಚು ಅಪರಾಧ ಪ್ರಕರಣಗಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವ ನಗರ ಯಾವುದು ಎಂದಾಗ, ದೆಹಲಿ ಅಥವಾ ಮುಂಬೈ ಮಹಾನಗರ ಇರಬಹುದು ಎನ್ನುವುದು ಹೆಚ್ಚಾಗಿ ಬರುವ ಉತ್ತರ.

ಆದರೆ, ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (NCRB) ಮಂಗಳವಾರ (ಆ 30) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ದೇಶದ ಮೆಟ್ರೋಪಾಲಿಟನ್ ನಗರಗಳ ಪೈಕಿ ಒಂದು ನಗರ ಮಾತ್ರ ದೇಶದ ಮೊದಲ ಆರು ಅತಿಹೆಚ್ಚು ಕ್ರೈಂ ನಡೆಯುವ ನಗರಗಳ ಪಟ್ಟಿಯಲ್ಲಿದೆ. (ಒಂದೇ ರಾತ್ರಿ 8 ದೇಗುಲದಲ್ಲಿ ಕಳವು)

ಎನ್ಸಿಆರ್ಬಿ, ಹೆಚ್ಚು ಅಪರಾಧ ಪ್ರಕರಣಗಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ 2015ರ ವರ್ಷದಲ್ಲಿ ದಾಖಲಾದ ದೂರಿನ ಅನ್ವಯ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಪರಾಧ ಪ್ರಕರಣಗಳು, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಇನ್ನಿತರ ಕಿರುಕುಳಗಳನ್ನು ಆಧರಿಸಿ, ಅಂಕಿ ಅಂಶಗಳನ್ನು ಕ್ರೋಢೀಕರಿಸಿ ಈ ಪಟ್ಟಿಗೆ ಎನ್ಸಿಆರ್ಬಿ ಅಂತಿಮ ರೂಪ ನೀಡಿ ಪ್ರಕಟಿಸಿದೆ. (ಪತ್ನಿಯನ್ನು ಪಣಕ್ಕಿಟ್ಟು ಸೋತ ಆಧುನಿಕ ಧರ್ಮರಾಯ)

ಅತಿಹೆಚ್ಚು ದೌರ್ಜನ್ಯ ನಡೆಯುವ ದೇಶದ ಆರು ನಗರಗಳ ಪೈಕಿ, ಮಹಾನಗರಕ್ಕಿಂತ ಹೆಚ್ಚಾಗಿ 'ಬಿ' ಪಟ್ಟಿಯಲ್ಲಿ ಬರುವ ನಗರಗಳು ಸ್ಥಾನ ಪಡೆದುಕೊಂಡು ಕುಖ್ಯಾತಿ ಪಡೆದುಕೊಂಡಿವೆ. ಆರು ನಗರಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಮೊದಲ ಸ್ಥಾನ

ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಮೊದಲ ಸ್ಥಾನ

ರಾಜಸ್ಥಾನದ ಜೋಧಪುರ ನಗರ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ. 2015ರಲ್ಲಿ 152 ರೇಪ್, 440 ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಕೇಸ್ ದಾಖಲಾಗಿದೆ. ಈಗ ಇಲ್ಲಿ ಬಿಜೆಪಿ ಸರಕಾರವಿದೆ.

ರಾಷ್ಟ್ರ ರಾಜಧಾನಿ

ರಾಷ್ಟ್ರ ರಾಜಧಾನಿ

ರಾಷ್ಟ್ರ ರಾಜಧಾನಿಯಾಗಿದ್ದರೂ ದೆಹಲಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿಚಾರದಲ್ಲಿ ಸೇಫ್ ಅಲ್ಲ. ಎನ್ಸಿಆರ್ಬಿ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ದೆಹಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವಿದ್ದರೂ, ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯದ ಸುಪರ್ದಿಯಲ್ಲಿ ಕೆಲಸ ಮಾಡುತ್ತದೆ.

ಮಧ್ಯಪ್ರದೇಶ

ಮಧ್ಯಪ್ರದೇಶ

ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶದ ಗ್ವಾಲಿಯರ್ ನಗರ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿಚಾರದಲ್ಲಿ ಮೂರನೇ ಸ್ಥಾನದಲ್ಲಿದೆ.

ಕೇರಳದ ಕೊಲ್ಲಂ

ಕೇರಳದ ಕೊಲ್ಲಂ

ಹನ್ನೊಂದು ಲಕ್ಷ ಜನಸಂಖ್ಯೆಯ ದಕ್ಷಿಣ ಕೇರಳದ ಕೊಲ್ಲಂ ನಗರ, ದೇಶದಲ್ಲಿ ಅತಿಹೆಚ್ಚು ಕ್ರೈಂ ನಡೆಯುವ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ. 2012ರಲ್ಲಿ ದೇಶದ 20 ಅತಿಸುರಕ್ಷಿತ ನಗರಗಳ ಪೈಕಿ ಕೊಲ್ಲಂ ಮೊದಲ ಸ್ಥಾನದಲ್ಲಿತ್ತು. ಪ್ರಸ್ತುತ ಕೇರಳದಲ್ಲಿ ಎಡಪಕ್ಷಗಳ ಕಾರುಬಾರು.

ಭೋಪಾಲ್

ಭೋಪಾಲ್

ಬಿಜೆಪಿಯ ದಿಗ್ವಿಜಯ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಇಲ್ಲಿ ಸತತವಾಗಿ ಅಧಿಕಾರದಲ್ಲಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಇತರ ಎರಡು ನಗರಗಳು

ಇತರ ಎರಡು ನಗರಗಳು

ಮಹಾರಾಷ್ಟ್ರದ ನಾಗಪುರ ಮತ್ತು ಛತ್ತೀಸಗಢದ ದುರ್ಗ್-ಭಿಲಾಯಿನಗರ ಅತಿಹೆಚ್ಚು ಲೈಂಗಿಕ ದೌರ್ಜನ್ಯ ನಡೆಯುವ ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಐದನೇ ಮತ್ತು ಆರನೇ ಸ್ಥಾನದಲ್ಲಿದೆ. ಇವೆರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

English summary
National Crime Records Bureau (NCRB) released the data of highest crimes and crimes against women reported in the country during the year 2045. As per NCRB, the list of 6 cities includes Kollam in Kerala and Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X