ನವಜಾತ ಶಿಶುವಿನೊಂದಿಗೆ ಅಧಿವೇಶನಕ್ಕೆ ಬಂದ ಶಾಸಕಿ

ಮುಂಬೈ, ಡಿಸೆಂಬರ್‌ 19: ನಾಸಿಕ್ ಜಿಲ್ಲೆಯ ಎನ್‌ಸಿಪಿ ಶಾಸಕಿ ಸರೋಜ್ ಅಹಿರ್ ಸೋಮವಾರ ತನ್ನ ನವಜಾತ ಶಿಶುವಿನೊಂದಿಗೆ ನಾಗಪುರದಲ್ಲಿ ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿದ್ದರು.

ನವಜಾತ ಶಿಶುವಿನೊಂದಿಗೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮಹತ್ವವನ್ನು ಸಾರಿದ ಎನ್‌ಸಿಪಿ ನಾಯಕಿ ಸರೋಜ್‌ ಅಹಿರ್‌, "ನಾನು ಮಗುವಿನ ತಾಯಿಯು ಹೌದು ಮತ್ತು ಜನಪ್ರತಿನಿಧಿಯು ಹೌದು. ಕಳೆದ ಎರಡೂವರೆ ವರ್ಷಗಳಿಂದ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ನಾಗಪುರದಲ್ಲಿ ಯಾವುದೇ ವಿಧಾನಸಭೆ ಅಧಿವೇಶನ ನಡೆದಿಲ್ಲ. ನಾನು ಈಗ ಮಗುವಿಗೆ ತಾಯಿಯಾಗಿದ್ದೇನೆ. ಆದರೆ ಸದನದಲ್ಲಿ ನನ್ನ ಕರ್ಯವ್ಯ ನಿಭಾಯಿಸಲು ಮತ್ತು ಪ್ರಶ್ನೆಗಳನ್ನು ಕೇಳಲು ಅಲ್ಲದೆ ನನ್ನ ಮತದಾರರಿಗೆ ಉತ್ತರಗಳನ್ನು ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

ಸರೋಜ್‌ ಅಹಿರ್ ಅವರ ಮಗುವಿಗೆ ಎರಡೂವರೆ ತಿಂಗಳಾಗಿದೆ. ಎನ್‌ಸಿಪಿ ಶಾಸಕಿಯಾಗಿರುವ ಅವರು ಸೆಪ್ಟೆಂಬರ್ 30 ರಂದು ಮಗುವಿಗೆ ಜನ್ಮ ನೀಡಿದ್ದು, ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನಾಗಪುರ ಚಳಿಗಾಲದ ಅಧಿವೇಶನವು ಇಂದು ಪ್ರಾರಂಭವಾಗಿದೆ. ಹೆಚ್ಚಿನ ಹೈಟೆಕ್ ಸದನಗಳು ಸಿದ್ದವಾಗಿದ್ದು ಜೊತೆಗೆ ಹೊಸ ಅಪ್ಲಿಕೇಶನ್ ಅನ್ನು ಸದಸ್ಯರಿಗಾಗಿ ವಿನ್ಯಾಸಗೊಳಿಸಲಾಗಿದೆ.

NCP MLA Saroj Ahir came to the assembly winter session with a newborn baby

ಇದಕ್ಕೂ ಮುನ್ನ ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕದ ಗಡಿ ಸಮಸ್ಯೆ ಕುರಿತು ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅದರಲ್ಲಿ ಈಗ ಯಾವುದೇ ರಾಜಕೀಯ ಬೇಡ. ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಅಂತರರಾಜ್ಯ ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವರು ಪ್ರಥಮ ಬಾರಿಗೆ ಮಧ್ಯಸ್ಥಿಕೆ ವಹಿಸಿದ್ದಾರೆ. ಈ ವಿಚಾರದಲ್ಲಿ ಈಗ ಯಾವುದೇ ರಾಜಕೀಯ ಬೇಡ, ಗಡಿ ನಿವಾಸಿಗಳ ಜತೆ ನಾವು ಒಟ್ಟಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+