NCERT: ಎನ್‌ಸಿಇಆರ್‌ಟಿಯ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಪಠ್ಯ ವಿವಾದ: ಪುಸ್ತಕ ಮಾರಾಟ ಸ್ಥಗಿತ, ಸುಪ್ರೀಂ ಚಾಟಿ
NCERT: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದ ನಂತರ ಎನ್‌ಸಿಇಆರ್‌ಟಿ (National Council of Educational Research and Training - NCERT) 8ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಪ್ರಕಟಿಸಿದ್ದ "ನ್ಯಾಯಾಂಗದಲ್ಲಿ ಭ್ರಷ್ಟಾಚಾರ" ಎನ್ನುವ ವಿವಾದಾತ್ಮಕ ಬರಹವನ್ನು ಕೈಬಿಟ್ಟಿದೆ. ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ್ದ 8ನೇ ತರಗತಿಯ ಸಾಮಾಜ - ವಿಜ್ಞಾನ ಪಠ್ಯಪುಸ್ತಕದಲ್ಲಿನ ನಿರ್ದಿಷ್ಟ ಪಠ್ಯವು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಮಾರಾಟದಿಂದ ಹಿಂಪಡೆಯಲಾಗಿದೆ.
"ನ್ಯಾಯಾಂಗದಲ್ಲಿ ಭ್ರಷ್ಟಾಚಾರ" ಎಂಬ ಪಠ್ಯವನ್ನು ಹೊಂದಿದ್ದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಮಾರಾಟದಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಮೂಲಗಳು ಬುಧವಾರ ದೃಢಪಡಿಸಿವೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪಠ್ಯ ಪುಸ್ತಕದಲ್ಲಿನ ವಿವಾದಾತ್ಮಕ ಅಂಶಗಳಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ಅಧ್ಯಾಯನವು ವಿವಾದಕ್ಕೆ ಕಾರಣವಾಗಿತ್ತು. ಶಿಕ್ಷಣ ಸಚಿವಾಲಯದ ಮೂಲಗಳ ಪ್ರಕಾರ, ಮಂಗಳವಾರದಿಂದಲೇ ಈ ಪುಸ್ತಕವನ್ನು ಮಾರಾಟವನ್ನು ತಡೆಹಿಡಿಯಲಾಗಿದೆ.
'Exploring Society: India and Beyond - Part 2' ಎಂಬ ಈ ಪುಸ್ತಕವನ್ನು ಸೋಮವಾರ ಬಿಡುಗಡೆ ಮಾಡಲಾಗಿತ್ತು. ಆದರೆ ಬುಧವಾರದಂದು ದೆಹಲಿಯ NCERT ಕ್ಯಾಂಪಸ್‌ನ ಪುಸ್ತಕ ಕೌಂಟರ್‌ನಲ್ಲಿ ಈ ಪುಸ್ತಕ ಲಭ್ಯವಿರಲಿಲ್ಲ. ಈ ವಿಷಯದ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (Surya Kant) ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ಸಂಸ್ಥೆಯನ್ನು ಯಾರೂ ಕೆಟ್ಟ ರೀತಿಯಲ್ಲಿ ಚಿತ್ರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪುಸ್ತಕದಲ್ಲಿ ನ್ಯಾಯಾಧೀಶರು ನ್ಯಾಯಾಲಯದೊಳಗೆ ಮಾತ್ರವಲ್ಲದೆ ಹೊರಗೂ ಹೇಗೆ ವರ್ತಿಸಬೇಕು ಎಂಬುದಕ್ಕೆ ನಿಯಮಾವಳಿ ಇದೆ ಎಂದು ವಿವರಿಸಲಾಗಿತ್ತು. ಅಲ್ಲದೆ 2017 ರಿಂದ 2021ರವರೆಗೆ ನ್ಯಾಯಾಂಗದ ವಿರುದ್ಧ 1,600ಕ್ಕೂ ಹೆಚ್ಚು ದೂರುಗಳು ಬಂದಿದ್ದವು ಎನ್ನುವ ಅಂಶಗಳನ್ನೂ ಸಹ ಪಠ್ಯದಲ್ಲಿ ಮುದ್ರಿಸಲಾಗಿತ್ತು. ಈ ವಿಷಯದ ಹಿನ್ನೆಲೆ ಈಗ NCERT ಆ ಪುಸ್ತಕವನ್ನು ಮಾರಾಟದಿಂದ ಹಿಂಪಡೆದಿದೆ.
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ವಿವಾದಾತ್ಮಕ ಅಧ್ಯಾಯನಕ್ಕೆ ಆಕ್ಷೇಪ ಹಾಗೂ ವಿರೋಧ ವ್ಯಕ್ತವಾದ ನಂತರ NCERT 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಹೊರತಂದಿದೆ. ಹಳೆಯ ಪುಸ್ತಕವನ್ನು ಮಂಗಳವಾರ ಮಾರಾಟದಿಂದ ಹಿಂತೆಗೆದುಕೊಳ್ಳಲಾಗಿದೆ. ಬುಧವಾರ, ದೆಹಲಿಯ NCERT ಕ್ಯಾಂಪಸ್‌ನಲ್ಲಿರುವ ಪ್ರಕಟಣೆ ವಿಭಾಗದ ಪುಸ್ತಕ ಕೌಂಟರ್‌ನ ಸಿಬ್ಬಂದಿ ಸೋಮವಾರ ಕೌಂಟರ್‌ನಲ್ಲಿ ಮಾರಾಟಕ್ಕೆ ಲಭ್ಯವಿದ್ದ ಪುಸ್ತಕ ಇನ್ನು ಮುಂದೆ ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಬುಧವಾರ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ವಿಭಾಗಕ್ಕೆ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಮತ್ತು "ಯಾರೂ ಸಂಸ್ಥೆಯನ್ನು ದೂಷಿಸಲು ಬಿಡುವುದಿಲ್ಲ" ಎಂದು ಹೇಳಿದ್ದರು.












Click it and Unblock the Notifications