ನಕ್ಸಲರಿಂದ ಸುಧಾರಿತ ಬಾಂಬ್ ಸ್ಫೋಟ, ಕೋಬ್ರಾ ಅಧಿಕಾರಿ ಹುತಾತ್ಮ

ರಾಯ್ ಪುರ್, ನ. 29: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಸುಧಾರಿತ ಬಾಂಬ್ ಸ್ಫೋಟ ಸಂಭವಿಸಿದೆ. ಮಾವೋವಾದಿಗಳು ಐಇಡಿ ಬಳಸಿ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಸಿಆರ್ ಪಿಎಫ್ ಕೋಬ್ರಾ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದರೆ, 10 ಮಂದಿ ಕಮಾಂಡೋಗಳಿಗೆ ಗಾಯಗಳಾಗಿವೆ.

ಸುಕ್ಮಾ ಜಿಲ್ಲೆಯ ಚಿಂತಲ್ನಾತ್ ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆದ ದಾಳಿಯಲ್ಲಿ ಮೃತರಾದ ಅಧಿಕಾರಿ ಹಾಗೂ ಗಾಯಗೊಂಡಿದ್ದ ಕಮೋಂಡೋಗಳನ್ನು ಮಧ್ಯರಾತ್ರಿ ಬಳಿಕ ಹೆಲಿಕಾಪ್ಟರ್ ಬಳಸಿ ಘಟನಾ ಸ್ಥಳದಿಂದ ಬೇರೆಡೆಗೆ ಕರೆತರಲಾಗಿದೆ.

ಮೃತ ಅಧಿಕಾರಿಯನ್ನು ಸಹಾಯಕ ಕಮಾಂಡಂಟ್ ನಿತಿನ್ ಭಾಳೆರಾವ್ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಸೆಕೆಂಡ್ ಇನ್ ಕಮಾಂಡ್ ಶ್ರೇಣಿ ಅಧಿಕಾರಿಗಳು ಇದ್ದಾರೆ. ಗಾಯಗೊಂಡ ಯೋಧರಿಗೆ ಸದ್ಯಕ್ಕೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿ ಆರ್ ಪಿಎಫ್ ವಕ್ತಾರರು ಹೇಳಿದ್ದಾರೆ.

Naxal attack in Chhattisgarh A CoBRA officer killed, 10 commandos injured in IED blast

Commando Battalion for Resolute Action (C0BRA) ಪಡೆಯ 206ನೇ ಬೆಟಾಲಿಯನ್ನ ಯೋಧರು ಎಂದು ತಿಳಿದು ಬಂದಿದೆ. ಕೋಬ್ರಾ ಪಡೆ ಹಾಗೂ ಸ್ಥಳೀಯ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+