ರಾಹುಲ್ ಗಾಂಧಿಯನ್ನು ದಿನಾ ಶಾಲೆಗೆ ಬಿಡಲು ಸಿಧು ಕಾಂಗ್ರೆಸ್ಸಿಗೆ ಸೇರಿದ್ದಾ?

Posted By:
Subscribe to Oneindia Kannada

ರಾಜಕೀಯ ನಿಂತ ನೀರಲ್ಲ ಎನ್ನುವುದಕ್ಕೆ ಮಾಜಿ ಬಿಜೆಪಿ ಮುಖಂಡ ನವಜ್ಯೋತ್ ಸಿಂಗ್ ಸಿಧು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬೆಳವಣಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಅಂದು ರಾಹುಲ್ ಗಾಂಧಿಯನ್ನು ಶಾಲೆಗೆ ಹೋಗು ಎಂದು ಅಣಕವಾಡಿದ್ದ ಸಿಧು, ಎರಡು ದಿನದ ಹಿಂದೆ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ವೇಳೆ ಅಮೃತಸರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡದಿದ್ದ ಹಿನ್ನಲೆಯಲ್ಲಿ, ಪಕ್ಷದಿಂದ ಹೊರಬರಲು ಒಂದು ಕಾಲು ಹೊರಗಿಟ್ಟಿದ್ದ ಸಿಧು, ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಅಬ್ಬರದ ಭಾಷಣ ಮಾಡಲು ಹೆಸರಾದ ಸಿಧು, ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ರಕ್ತ ಹರಿಯುತ್ತಿದೆ, ನಾನು ಮೂಲ ಕಾಂಗ್ರೆಸ್ಸಿಗ ಎಂದು ಮಾಧ್ಯಮದ ಮುಂದೆ ಡೈಲಾಗ್ ಹೊಡೆದಿದ್ದಾರೆ. (ಕಾಂಗ್ರೆಸ್ ಪಕ್ಷ ಸೇರಿದ ನವಜ್ಯೋತ್ ಸಿಂಗ್ ಸಿಧು)

ಬಿಜೆಪಿಯಿಂದ ಹೊರಬರಲು ನಿರ್ಧರಿಸಿದ್ದ ನವಜ್ಯೋತ್ ಸಿಂಗ್ ಸಿಧು ಮೊದಲು ಸೇರಲು ಬಯಸಿದ್ದು ಆಮ್ ಆದ್ಮಿ ಪಕ್ಷಕ್ಕೆ, ಆದರೆ ಅಲ್ಲಿ ಏನು ವರ್ಕೌಟ್ ಆಗಿಲ್ಲವೋ ಒಟ್ಟಿನಲ್ಲಿ ತಾನು ಬಯಸಿದ್ದು ನಿರೀಕ್ಷಿತ ರೀತಿಯಲ್ಲಿ ನಡೆಯದ ಹಿನ್ನಲೆಯಲ್ಲಿ ಸಿಧು ಮೊನ್ನೆ ಮೊನ್ನೆ ಕಾಂಗ್ರೆಸ್ ಸೇರಿದ್ದಾರೆ.

ಇದೇ ಸಿಧು ಕೆಲವು ವರ್ಷಗಳ ಹಿಂದೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಸ್ಕೂಲಿಗೆ ಹೋಗು.. ಸ್ಕೂಲಿಗೆ ಎಂದು ಲೇವಡಿ ಮಾಡಿದ್ದರು. ಅಂದು ನವಜ್ಯೋತ್ ಸಿಂಗ್ ಸಿಧು, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಬಗ್ಗೆ ಹೇಳಿದ್ದೇನು, ಮುಂದೆ ಓದಿ..

ರಾಹುಲ್ ವಿರುದ್ದ ಲೇವಡಿ

ರಾಹುಲ್ ವಿರುದ್ದ ಲೇವಡಿ

ಏ ರಾಹುಲ್ ಬಾಬಾ... ಶಾಲೆಗೆ ಹೋಗು.. ಶಾಲೆಗೆ.. ಶಾಲೆಗೆ ಹೋಗಿ ಮೊದಲು ಕಲಿಯುವುದನ್ನು ಅಭ್ಯಾಸ ಮಾಡಿಕೋ.. ರಾಷ್ಟ್ರವಾದ ಮತ್ತು ರಾಷ್ಟ್ರದ್ರೋಹದ ನಡುವೆ ವ್ಯತ್ಯಾಸವನ್ನು ಮೊದಲು ಅರಿತುಕೋ..

 ಸಿಮಿ ಮತ್ತು ಆರ್ ಎಸ್ ಎಸ್

ಸಿಮಿ ಮತ್ತು ಆರ್ ಎಸ್ ಎಸ್

ಸಿಮಿ ಮತ್ತು ಆರ್ ಎಸ್ ಎಸ್ ಸಂಘಟನೆ ಎರಡೂ ಒಂದೇ ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ದ ಸಿಧು ಆಕ್ರೋಶದ ಭಾಷಣ ಮಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದರು.

ಗುಜರಾತ್ ಸ್ಥಳೀಯ ಸಂಸ್ಥೆ

ಗುಜರಾತ್ ಸ್ಥಳೀಯ ಸಂಸ್ಥೆ

ಅಂದು ಗುಜರಾತ್ ಸ್ಥಳೀಯ ಸಂಸ್ಥೆಯ ಚುನಾವಣೆಯ ವೇಳೆ ಸಿಧು ಮಾಡಿದ್ದ ಭಾಷಣಕ್ಕೂ, ಈಗ ಸಿಧು ತೆಗೆದುಕೊಂಡ ರಾಜಕೀಯ ನಿರ್ಧಾರವನ್ನು ಹೋಲಿಸಿ ಸಾಮಾಜಿಕ ತಾಣದಲ್ಲಿ ಲೇವಡಿ ಮಾಡಲಾಗುತ್ತಿದೆ.

ರಾಹುಲ್ ಗಾಂಧಿಯನ್ನು ಶಾಲೆಗೆ ಕರೆದುಕೊಂಡು ಹೋಗಲು

ಸಿಧು ಕಾಂಗ್ರೆಸ್ ಸೇರಿದ್ದು ರಾಹುಲ್ ಗಾಂಧಿಯನ್ನು ಶಾಲೆಗೆ ಕರೆದುಕೊಂಡು ಹೋಗಲಾ ಎಂದು ವ್ಯಂಗ್ಯವಾಡಲಾಗುತ್ತಿದೆ. ರಾಹುಲ್ ಗಾಂಧಿಯವರನ್ನು ಪ್ರತೀ ದಿನ ಶಾಲೆಗೆ ಕರೆದುಕೊಂಡು ಹೋಗಲು ಸಿಧು ಕಾಂಗ್ರೆಸ್ ಪಕ್ಷ ಸೇರಿದ್ದಾರೆಂದು ಲೇವಡಿ ಮಾಡಲಾಗುತ್ತಿದೆ.

ರಾಜಕೀಯ

ನವಜ್ಯೋತ್ ಸಿಂಗ್ ಸಿಧು ಕಾಂಗ್ರೆಸ್ ಸೇರಿದ್ದಾರೆ. ಅವರು ಈ ಹಿಂದೆ ರಾಹುಲ್ ಗಾಂಧಿಯ ಬಗ್ಗೆ ಆಡಿದ ಮಾತನ್ನೊಮ್ಮೆ ಕೇಳಿರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former BJP MP Navjot Singh Sidhu joins Congress. Recalling Sidhu statement couple of year back on AICC VP Rahul Gandhi, where Sidhu mocking Rahul 'Go to school and learn'.
Please Wait while comments are loading...