ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ: ಅತ್ತ ಪುರುಷರ ಹಾಕಿ ವಿಶ್ವಕಪ್‌, ಇತ್ತ ರಾಜಕೀಯ ಆಟವಾಡುವತ್ತ ಮುಖ್ಯಮಂತ್ರಿ ನವೀನ್ ಪಟ್ನಾಯಕ್ !

|
Google Oneindia Kannada News

ಭುವನೇಶ್ವರ, ಡಿ. 27: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಅಂತರವು ಜನವರಿಯಲ್ಲಿ ನಡೆಯಲಿರುವ ಪುರುಷರ ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ತಾತ್ಕಾಲಿಕವಾಗಿ ಕುಗ್ಗುವ ಸಾಧ್ಯತೆಯಿದೆ.

ಹೌದು, ಬಿಜು ಜನತಾ ದಳದ ಅಧ್ಯಕ್ಷ, ಸಿಎಂ ನವೀನ್ ಪಟ್ನಾಯಕ್, ರೂರ್ಕೆಲಾದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲಾ ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಅಖಿಲೇಶ್ ಯಾದವ್, ಮಾಯಾವತಿಗೆ ಕಾಂಗ್ರೆಸ್ ಆಹ್ವಾನಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಅಖಿಲೇಶ್ ಯಾದವ್, ಮಾಯಾವತಿಗೆ ಕಾಂಗ್ರೆಸ್ ಆಹ್ವಾನ

ಮೂರು ಕಾಂಗ್ರೆಸ್ ಮುಖ್ಯಮಂತ್ರಿಗಳಾದ ರಾಜಸ್ಥಾನದ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಭೂಪೇಶ್ ಬಾಘೇಲ್ ಮತ್ತು ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು ಅವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Naveen Patnaik invites non-BJP CMs for Men’s FIH Hockey World Cup in Odisha

"ಮೂವರು ಮುಖ್ಯಮಂತ್ರಿಗಳು ನವೀನ್ ಪಟ್ನಾಯಕ್ ಅವರಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಮೂವರು ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಖಚಿತಪಡಿಸಿದ್ದಾರೆ" ಎಂದು ಕಾಂಗ್ರೆಸ್ ಕಾರ್ಯಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸತತವಾಗಿ ಎರಡನೇ ಬಾರಿಗೆ 2023 ರ ಹಾಕಿ ಪುರುಷರ ವಿಶ್ವಕಪ್ ಅನ್ನು ಆಯೋಜಿಸುವ ಈ ಅವಕಾಶ ರಾಜ್ಯಕ್ಕೆ ಹೆಮ್ಮೆಯ ಕ್ಷಣ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.

ಮೂವರು ಬಿಜೆಪಿಯೇತರ ಮುಖ್ಯಮಂತ್ರಿಗಳನ್ನು ಕಾರ್ಯಕರಮಕ್ಕೆ ಕರೆದಿರುವ ಈ ಸಂದರ್ಭ ಪುರುಷರ ಹಾಕಿ ವಿಶ್ವಕಪ್ ಆಗಿದ್ದರೂ, ಕಾಂಗ್ರೆಸ್ ಮುಖ್ಯಮಂತ್ರಿಗಳು ಪಟ್ನಾಯಕ್ ಅವರ ಆಹ್ವಾನವನ್ನು ಸ್ವೀಕರಿಸುತ್ತಿರುವುದು ಅದರ ಮೂಲ ರಾಜಕೀಯ ಆಟ ಎಂಬುದನ್ನು ತೋರಿಸುತ್ತದೆ.

Naveen Patnaik invites non-BJP CMs for Men’s FIH Hockey World Cup in Odisha

ನವೀನ್ ಪಟ್ನಾಯಕ್ ಅವರ ಬಿಜೆಡಿ ಕಾಂಗ್ರೆಸ್ ವಿರೋಧಿ ಸಂಘಟನೆಯಾಗಿದೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಮಿತ್ರ ಪಕ್ಷವಾಗಿದೆ. ಪಕ್ಷವು ಆಗಾಗ್ಗೆ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸುತ್ತದೆ. ಪ್ರಮುಖ ಸರ್ಕಾರದ ಮಸೂದೆಗಳನ್ನು ಬೆಂಬಲಿಸಿದೆ. ಇತ್ತಿಚೀನ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬಿಜು ಜನತಾ ದಳ ಬೆಂಬಲಿಸಿದೆ.

"ನಾವು ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಸಾಧ್ಯವಿರುವ ಎಲ್ಲ ಬಿಜೆಪಿಯೇತರ ಶಕ್ತಿಗಳನ್ನು ಒಗ್ಗೂಡಿಸುವ ಪ್ರಯತ್ನ ನಮ್ಮದಾಗಿದೆ" ಎಂದು ಕಾಂಗ್ರೆಸ್ ಕಾರ್ಯಕಾರಿ ಹೇಳಿದ್ದಾರೆ.

ಒಂದು ಕಾಲದಲ್ಲಿ ಬಿಜೆಪಿಯ ಅತ್ಯಂತ ಹಳೆಯ ಮಿತ್ರ ಪಕ್ಷವಾಗಿದ್ದ ಶಿವಸೇನೆಯು 2019 ರಲ್ಲಿ ಕಾಂಗ್ರೆಸ್‌ನೊಂದಿಗೆ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿತ್ತು. ಹೀಗಾಗಿ, ಬಿಜೆಡಿಯೊಂದಿಗೆ ರಾಜಕೀಯವಾಗಿಯೂ ಕಾಂಗ್ರೆಸ್ ಈ ಬೇಟಿಯನ್ನು ನೋಡುತ್ತಿದೆ.

ಇನ್ನು, ಉದ್ಘಾಟನಾ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಒಡಿಶಾದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ತುಷಾರಕಾಂತಿ ಬೆಹೆರಾ ಮತ್ತು ಹಾಕಿ ಇಂಡಿಯಾ ಅಧ್ಯಕ್ಷ, ಬಿಜೆಡಿ ಮಾಜಿ ಸಂಸದ ದಿಲೀಪ್ ಟಿರ್ಕೆ ಅವರು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಅಶ್ವಿನ್ ವೈಷ್ಣವ್, ಕಿರಣ್ ರಿಜಿಜು ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

English summary
Odisha chief minister Naveen Patnaik invited All three Congress chief ministers Ashok Gehlot , Bhupesh Baghel and Sukhvinder Singh Sukhu for the inaugural event of Men’s FIH Hockey World Cup. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X