ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊತ್ತಿಲ್ಲದ ಮೂಲದಿಂದಲೇ ರಾಜಕೀಯ ಪಕ್ಷಗಳಿಗೆ 15,077 ಕೋಟಿ ರೂ. ಆದಾಯ!

|
Google Oneindia Kannada News

ನವದೆಹಲಿ, ಆಗಸ್ಟ್ 26: ಭಾರತದ ರಾಷ್ಟ್ರೀಯ ಪಕ್ಷಗಳು 2004-05 ಮತ್ತು 2020-21ರ ನಡುವೆ ಅಜ್ಞಾತ ಮೂಲಗಳಿಂದ 15,077.97 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಆಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತಿಳಿಸಿದೆ.

2020-21ರಲ್ಲಿ ಅಜ್ಞಾತ ಮೂಲಗಳಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಬಂದ ಒಟ್ಟು ಆದಾಯ ಮೊತ್ತ 690.67 ಕೋಟಿ ರೂಪಾಯಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಈ ವಿಶ್ಲೇಷಣೆಗಾಗಿ ಎಡಿಆರ್ ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು 27 ಪ್ರಾದೇಶಿಕ ಪಕ್ಷಗಳನ್ನು ಪರಿಗಣಿಸಿತ್ತು. ಹಾಗಾದರೆ ಯಾವ ಪಕ್ಷಕ್ಕೆ ಗೊತ್ತಿಲ್ಲದ ಮೂಲಗಳಿಂದ ಹರಿದುಬಂದ ಹಣದ ಮೊತ್ತವೆಷ್ಟು?, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ದೊಡ್ಡ ಪಕ್ಷಗಳು ಕಲೆಕ್ಷನ್ ಮಾಡಿರುವ ಹಣವೆಷ್ಟು?, ಪ್ರಾದೇಶಿಕ ಪಕ್ಷಗಳಿಗೆ ಆ ಮೂಲಗಳಿಂದ ಬಂದ ಕಾಸಿನ ಪ್ರಮಾಣವೆಷ್ಟು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. ನವದೆಹಲಿ, ಆಗಸ್ಟ್ 26: ಭಾರತದ ರಾಷ್ಟ್ರೀಯ ಪಕ್ಷಗಳು 2004-05 ಮತ್ತು 2020-21ರ ನಡುವೆ ಅಜ್ಞಾತ ಮೂಲಗಳಿಂದ 15,077.97 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಆಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತಿಳಿಸಿದೆ.

2020-21ರಲ್ಲಿ ಅಜ್ಞಾತ ಮೂಲಗಳಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಬಂದ ಒಟ್ಟು ಆದಾಯ ಮೊತ್ತ 690.67 ಕೋಟಿ ರೂಪಾಯಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಶ್ಲೇಷಣೆಗಾಗಿ ಎಡಿಆರ್ ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು 27 ಪ್ರಾದೇಶಿಕ ಪಕ್ಷಗಳನ್ನು ಪರಿಗಣಿಸಿತ್ತು. ಹಾಗಾದರೆ ಯಾವ ಪಕ್ಷಕ್ಕೆ ಗೊತ್ತಿಲ್ಲದ ಮೂಲಗಳಿಂದ ಹರಿದುಬಂದ ಹಣದ ಮೊತ್ತವೆಷ್ಟು?, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ದೊಡ್ಡ ಪಕ್ಷಗಳು ಕಲೆಕ್ಷನ್ ಮಾಡಿರುವ ಹಣವೆಷ್ಟು?, ಪ್ರಾದೇಶಿಕ ಪಕ್ಷಗಳಿಗೆ ಆ ಮೂಲಗಳಿಂದ ಬಂದ ಕಾಸಿನ ಪ್ರಮಾಣವೆಷ್ಟು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಈ ಪಕ್ಷಗಳ ಮೇಲೆ ಎಡಿಆರ್ ವಿಶ್ಲೇಷಣೆ

ಈ ಪಕ್ಷಗಳ ಮೇಲೆ ಎಡಿಆರ್ ವಿಶ್ಲೇಷಣೆ

ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ (ಬಿಜೆಪಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ), ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ), ಕಮ್ಯುನಿಟಿ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಎಂ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜೊತೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (NPEP)ಗಳನ್ನು ಒಳಗೊಂಡಿವೆ.

ಅದೇ ರೀತಿ ಪ್ರಾದೇಶಿಕ ಪಕ್ಷಗಳನ್ನು ಕೂಡ ವಿಶ್ಲೇಷಣೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರಾದೇಶಿಕ ಪಕ್ಷಗಳಾದ AAP, AGP, AIADMK, AIFB, AIMIM, AIUDF, BJD, CPI(ML)(L), DMDK, DMK, GFP, JDS, JDU, JMM, KC-M, MNS, NDPP, NPF, PMK, RLD, SAD, SDF, ಶಿವಸೇನೆ, SKM, TDP, TRS ಮತ್ತು YSR-ಕಾಂಗ್ರೆಸ್ ಪಕ್ಷಗಳ ಆದಾಯವನ್ನೂ ಇಲ್ಲಿ ಲೆಕ್ಕ ಹಾಕಲಾಯಿತು.

15,077.97 ಕೋಟಿ ಸಂಗ್ರಹಕ್ಕೆ ಮೂಲವೇ ಅಪರಿಚಿತ!

15,077.97 ಕೋಟಿ ಸಂಗ್ರಹಕ್ಕೆ ಮೂಲವೇ ಅಪರಿಚಿತ!

ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ (ITR) ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸಲ್ಲಿಸಿದ ದೇಣಿಗೆ ದಾಖಲೆಗಳ ಆಧಾರದ ಮೇಲೆ ಈ ವಿಶ್ಲೇಷಣೆಯನ್ನು ನಡೆಸಲಾಗಿದೆ. ಆ ಮೂಲಕ 2004-05 ಮತ್ತು 2020-21ರ ನಡುವೆ ರಾಷ್ಟ್ರೀಯ ಪಕ್ಷಗಳು 15,077.97 ಕೋಟಿ ರೂಪಾಯಿ ಹಣವನ್ನು ಅಪರಿಚಿತ ಮೂಲಗಳಿಂದ ಸಂಗ್ರಹಿಸಿರುವುದು ಗೊತ್ತಾಗಿದೆ.

2020-21 ಹಣಕಾಸು ವರ್ಷದಲ್ಲಿ ಎಂಟು ರಾಷ್ಟ್ರೀಯ ರಾಜಕೀಯ ಪಕ್ಷಗಳು ಅಪರಿಚಿತ ಮೂಲಗಳಿಂದ 426.74 ಕೋಟಿ ರೂಪಾಯಿ ಆದಾಯವನ್ನು ಪಡೆದಿರುವ ಬಗ್ಗೆ ಘೋಷಿಸಿಕೊಂಡಿವೆ. 27 ಪ್ರಾದೇಶಿಕ ಪಕ್ಷಗಳು ಅದೇ ರೀತಿ ಅಪರಿಚಿತ ಮೂಲಗಳಿಂದ 263.928 ಕೋಟಿ ರೂಪಾಯಿ ಆದಾಯವನ್ನು ಪಡೆದಿವೆ ಎಂದು ವರದಿಯು ತಿಳಿಸಿದೆ.

ಅಪರಿಚಿತ ಮೂಲದಿಂದ ಕಾಂಗ್ರೆಸ್ ಸಂಗ್ರಹಿಸಿದ ಆದಾಯ

ಅಪರಿಚಿತ ಮೂಲದಿಂದ ಕಾಂಗ್ರೆಸ್ ಸಂಗ್ರಹಿಸಿದ ಆದಾಯ

2020-21 ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು 178.782 ಕೋಟಿಯನ್ನು ಅಪರಿಚಿತ ಮೂಲಗಳಿಂದ ಬಂದಿರುವುದಾಗಿ ಘೋಷಿಸಿತು. ಇದೇ ಅವಧಿಯಲ್ಲಿ ಅಜ್ಞಾತ ಮೂಲಗಳಿಂದ ಸಂಗ್ರಹಿಸಿದಿ ಒಟ್ಟು 426.742 ಕೋಟಿ ರೂಪಾಯಿ ಮೊತ್ತದಲ್ಲಿ ಕಾಂಗ್ರೆಸ್ ಪಕ್ಷದ ಒಟ್ಟು ಆದಾಯದ ಪಾಲು ಶೇ.41.89ರಷ್ಟಿದೆ," ಎಂದು ವಿಶ್ಲೇಷಣೆ ಹೇಳಿದೆ.

ಅಪರಿಚಿತ ಮೂಲಗಳಿಂದ ಬಿಜೆಪಿ ಸಂಗ್ರಹಿಸಿದ್ದೆಷ್ಟು?

ಅಪರಿಚಿತ ಮೂಲಗಳಿಂದ ಬಿಜೆಪಿ ಸಂಗ್ರಹಿಸಿದ್ದೆಷ್ಟು?

ಬಿಜೆಪಿಯು 100.50 ಕೋಟಿ ರೂಪಾಯಿ ಹಣವನ್ನು ಅಜ್ಞಾತ ಮೂಲಗಳಿಂದ ಪಡೆದಿರುವ ಆದಾಯವೆಂದು ಘೋಷಿಸಿದೆ. ಇದು ಅಜ್ಞಾತ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಶೇ.23.55ರಷ್ಟಾಗಿದೆ.

ಅಜ್ಞಾತ ಆದಾಯದ ವಿಷಯದಲ್ಲಿ ಪ್ರಮುಖ ಐದು ಪ್ರಾದೇಶಿಕ ಪಕ್ಷಗಳೆಂದರೆ ವೈಎಸ್‌ಆರ್-ಕಾಂಗ್ರೆಸ್ 96.2507 ಕೋಟಿ ರೂಪಾಯಿ, ಡಿಎಂಕೆ 80.02 ಕೋಟಿ ರೂಪಾಯಿ, ಬಿಜೆಡಿ 67 ಕೋಟಿ ರೂಪಾಯಿ, ಎಂಎನ್‌ಎಸ್ 5.773 ಕೋಟಿ ರೂಪಾಯಿ ಮತ್ತು ಎಎಪಿ 5.4 ಕೋಟಿ ರೂಪಾಯಿ ಆಗಿದೆ. ಒಟ್ಟು 690.67 ಕೋಟಿ ರೂಪಾಯಿಯಲ್ಲಿ ಶೇ.47.06ರಷ್ಟು ಹಣವು ಚುನಾವಣಾ ಬಾಂಡ್‌ಗಳಿಂದ ಬಂದಿರುವ ಆದಾಯವಾಗಿದೆ.

2004-05 ಮತ್ತು 2020-21ರ ನಡುವಿನ ಆರ್ಥಿಕ ಸಾಲಿನಲ್ಲಿ ಕೂಪನ್‌ಗಳ ಮಾರಾಟದಿಂದ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಒಟ್ಟು ಆದಾಯವು 4,261.83 ಕೋಟಿ ರೂಪಾಯಿಗಳಷ್ಟಿದೆ ಎಂದು ಎಡಿಆರ್ ಹೇಳಿದೆ.

English summary
ADR report Shows National parties are collected 15,077 crore rupees from unknown sources between 2004 to 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X