ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150ನೇ ಗಾಂಧಿ ಜಯಂತಿ, ರಾಷ್ಟ್ರ ನಾಯಕರಿಂದ 'ಸತ್ಯಮೂರ್ತಿ'ಗೆ ಗೌರವ

|
Google Oneindia Kannada News

ನವದೆಹಲಿ, ಅಕ್ಟೋಬರ್ 02: ಜಗತ್ತಿಗೆ ಶಾಂತಿ, ಸತ್ಯ ಅಹಿಂಸೆಯ ಮಂತ್ರ ಹೇಳಿಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನವಾದ ಇಂದು ದೇಶದ ಗಣ್ಯರು ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಮುಂಜಾನೆಯೇ ಗಾಂಧಿ ಅವರ ಸ್ಮಾರಕ ಸ್ಥಳವಾದ ರಾಜ್‌ಘಾಟ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಹೂಗುಚ್ಛ ಇರಿಸಿ ಗಾಂಧಿ ಅವರಿಗೆ ಶಿರಬಾಗಿ ನಮಿಸಿದರು. ರಾಷ್ಟ್ರಪತಿ ರಮಾನಾಥ ಕೋವಿಂದ್ ಸಹ ಗಾಂಧಿ ಅವರ ಸ್ಮಾರಕಕ್ಕೆ ನಮಿಸಿದರು.

National leaders pay tributes to Mahatma Gandhi

ಗಾಂಧೀಜಿ ಬಗ್ಗೆ ಓದಲು ಪುರುಸೊತ್ತಿದೆಯಾ?ಗಾಂಧೀಜಿ ಬಗ್ಗೆ ಓದಲು ಪುರುಸೊತ್ತಿದೆಯಾ?

ಎಐಸಿಸಿ ಮಾಜಿ ಅಧ್ಯಕ್ಷೆ ಸೊನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ರಾಜ್‌ಘಾಟ್‌ಗೆ ಭೇಟಿ ನೀಡಿ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

National leaders pay tributes to Mahatma Gandhi

ಹಲವು ರಾಜ್ಯಗಳಲ್ಲಿ ರಾಜ್ಯಗಳ ಪ್ರಮುಖ ಮಹಾತ್ಮಾ ಗಾಂಧಿ ಅವರ 150ನೇ ಜಯಂತ್ಯುತ್ಸವವನ್ನು ಆಚರಿಸಿದರು. ಉತ್ತರ ಪ್ರದೇಶದ ಸಿಎಂ ಯೋಗಿ ಅವರು ಭಜನೆಯಲ್ಲಿ ಪಾಲ್ಗೊಂಡು ಗಾಂಧಿ ಅವರನ್ನು ಸ್ಮರಿಸಿಕೊಂಡರು. ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ಣವೀಸ್ ಅವರು ಸಹ ಭಜನೆ ಮಾಡಿ ರಾಷ್ಟ್ರಪಿತರನ್ನು ಸ್ಮರಿಸಿದರು.

National leaders pay tributes to Mahatma Gandhi

ಗಾಂಧಿ ಮತ್ತು ಕಿಂಗ್ ಅಹಿಂಸಾ ಪ್ರಿಯರಿಗೆ ಪ್ರಾತ:ಸ್ಮರಣೀಯರು ಗಾಂಧಿ ಮತ್ತು ಕಿಂಗ್ ಅಹಿಂಸಾ ಪ್ರಿಯರಿಗೆ ಪ್ರಾತ:ಸ್ಮರಣೀಯರು

ಕುಮಾರಸ್ವಾಮಿ ಅವರು ಕೂಡ ರಾಷ್ಟ್ರಪಿತರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಗಾಂಧಿ ಅವರ ನೆನಪಲ್ಲಿ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಆಯೋಜಿಸಿರುವ ಹಲವು ಕಾರ್ಯಕ್ರಮಗಳಲ್ಲಿ ಕುಮಾರಸ್ವಾಮಿ ಅವರು ಇಂದು ಭಾಗವಹಿಸಲಿದ್ದಾರೆ.

National leaders pay tributes to Mahatma Gandhi

ಮಹಾತ್ಮಾ ಗಾಂಧಿ ಅವರ ಜೊತೆಗೆ ದೇಶದ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯೂ ಇಂದು ಹೌದು. ಅವರಿಗೂ ರಾಷ್ಟ್ರದ ನಾಯಕರು ಗೌರವ ಸಮರ್ಪಿಸಿದರು.

English summary
National leaders pay tributes across the country to Mahatma Gandhi on his 150 birth anniversary. Modi, President Ramanat Kovind, Sonia Gandhi, AICC president Rahul Gandhi visited Rajghat and pay respect
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X