National highway: ದೇಶದಲ್ಲಿ 92,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಎಷ್ಟು ವರ್ಷದಲ್ಲಿ? ಹಾಗೂ ವೆಚ್ಚದ ಮಾಹಿತಿ
ನವದೆಹಲಿ, ಫೆಬ್ರವರಿ, 29: ಇದೀಗ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಡೆಯುತ್ತಲೇ ಇದ್ದು, ಕಳೆದ ಒಂಬತ್ತು ವರ್ಷದಲ್ಲಿ ದೇಶದಲ್ಲಿ 92,000 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಇನ್ನು ಮುಂದಿನ ತಿಂಗಳ ಅಂತ್ಯಕ್ಕೆ ಅದು 95,000 ಕಿಲೋ ಮೀಟರ್‌ಗೆ ತಲುಪಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಹಾಗಾದರೆ ಇದಕ್ಕೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ ಅನುರಾಗ್ ಜೈನ್ ಗುರುವಾರ (ಫೆಬ್ರವರಿ 29) ಮಾಹಿತಿ ನೀಡಿದ್ದಾರೆ. ಇಂಟರ್‌ನ್ಯಾಷನಲ್ ರೋಡ್ ಫೆಡರೇಷನ್ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ಕೃತಕ ಬುದ್ಧಿಮತ್ತತೆಯಂತಹ ಆಧುನಿಕ ತಂತ್ರಜ್ಞಾನದ ಮೂಲಕ ಭವಿಷ್ಯದಲ್ಲಿ ಸಾರಿಗೆ ಅಭಿವೃದ್ಧಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಯೋಜಿಸಲಾಗಿದೆ ಎಂದು ಹೇಳಿದರು.

ಇನ್ನು ಮುಂದಿನ 50 ವರ್ಷದಲ್ಲಿ ನಿರೀಕ್ಷಿತ ದಟ್ಟಣೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೈಸ್ಪೀಡ್ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ನ್ಯೂನ್ಯತೆಗಳನ್ನು ಗುರುತಿಸಲಾಗಿದ್ದು, 2025ರ ಮಾರ್ಚ್ ಒಳಗೆ ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications