ರಾಷ್ಟ್ರಗೀತೆ ಕಡ್ಡಾಯ: ಸುಪ್ರಿಂ ಆದೇಶ ಬದಲಾವಣೆಗೆ ಕೇಂದ್ರ ಮನವಿ

ನವದೆಹಲಿ, ಜನವರಿ 9: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸುವಂತೆ ಸುಪ್ರಿಂ ಕೋರ್ಟ್ ಗೆ ಕೇಂದ್ರ ಸರಕಾರ ಮನವಿ ಮಾಡಿಕೊಂಡಿದೆ.

ಈ ಹಿಂದೆ 2016ರ ನವೆಂಬರ್ 30ರಂದು ಚಿತ್ರ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು. ಈ ವೇಳೆ ಎಲ್ಲರೂ ಎದ್ದು ನಿಲ್ಲಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು.

ನಂತರ ವಿಚಾರಣೆಯೊಂದರ ವೇಳೆ ದೇಶಪ್ರೇಮದ ಹೆಸರಿನಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವುದು ನೈತಿಕ ಪೊಲೀಸ್ ಗಿರಿ ಆಗುತ್ತದೆ. ಹಾಗಾಗಿ ತನ್ನ ಆದೇಶ ಮಾರ್ಪಾಡಿಗೆ ಸಿದ್ದವೆಂಬ ಸುಳಿವನ್ನು ಸುಪ್ರಿಂ ಕೋರ್ಟ್ ನೀಡಿತ್ತು. ಈ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸುವಂತೆಯೂ ಅದು ಕೇಂದ್ರಕ್ಕೆ ಸಲಹೆ ನೀಡಿತ್ತು.

National anthem in movie theaters: Centre urge SC to modify order

ಇದೀಗ ಕೇಂದ್ರ ಸರಕಾರ ರಾಷ್ಡ್ರಗೀತೆ ಕಡ್ಡಾಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ಜು ರೂಪಿಸಲು ಸಮಿತಿಯನ್ನು ರಚಿಸಿದೆ. ಹೀಗಾಗಿ ಸಮಿತಿ ವರದಿ ನೀಡುವವರೆಗೆ ಆದೇಶದಲ್ಲಿ ಬದಲಾವಣೆ ಮಾಡುವಂತೆ ಸುಪ್ರಿಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+