ಬೆಳ್ಳಿತೆರೆ ಮೇಲೆ ಭಾರತದ ರತ್ನ ಸಚಿನ್, ಪ್ರೀಮಿಯರ್ ಷೋನಲ್ಲಿ ತಾರಾ ಬಳಗ

ಸಚಿನ್ ಜೀವನಾಧಾರಿತ ಸಿನಿಮಾ ಮೇ ಇಪ್ಪತ್ತಾರಕ್ಕೆ ತೆರೆ ಮೇಲೆ ಬರುತ್ತಿದೆ. ಅದರ ಪ್ರೀಮಿಯರ್ ಷೋ ಸೇರಿದಂತೆ ಕುತೂಹಲ ಕೆರಳಿಸುವ ಸುದ್ದಿ-ಚಿತ್ರಗಳು ಇಲ್ಲಿವೆ

ಆತ ನೂರಾರು ಕೋಟಿ ಜನರ ಪಾಲಿನ ಕನಸು, ಭರವಸೆ, ನಂಬಿಕೆ ಎಲ್ಲವೂ ಆಗಿದ್ದ ದಿನಗಳಿದ್ದವು. ಅಂದರೆ ವರ್ಷಗಟ್ಟಲೆ ಆತ ಭಾರತ ಕ್ರಿಕೆಟ್ ತಂಡದ ಆಧಾರವಾಗಿದ್ದದ್ದು ಹೌದು. ಆತ ಔಟ್ ಆಗುತ್ತಿದ್ದ ಹಾಗೆ ಟಿವಿಗಳೇ ಆಫ್ ಆಗಿಬಿಡುತ್ತಿದ್ದವು. ಕ್ರೀಡಾಂಗಣ ಖಾಲಿಯಾಗುತ್ತಿತ್ತು. ಯಾರು ಆತ ಎಂದು ಕೇಳುವ ಅಗತ್ಯ ಇಲ್ಲ.

ಏಕೆಂದರೆ ನಿಮಗೀಗಾಗಲೇ ಗೊತ್ತಿರುತ್ತದೆ, ಅದು ಸಚಿನ್ ತೆಂಡೂಲ್ಕರ್ ಬಗ್ಗೆಯೇ. ಸಚಿನ್ ಜೀವನಾಧಾರಿತ ಚಿತ್ರ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಪ್ರೀಮಿಯರ್ ಷೋ ನಡೆದಿದೆ. ಅದಕ್ಕೆ ಅತಿರಥ-ಮಹಾರಥರೇ ಬಂದಿದ್ದಾರೆ. ಮೇ ಇಪ್ಪತ್ತಾರಕ್ಕೆ ಬಿಡುಗಡೆಯಾಗುತ್ತಿದೆ. ಪ್ರೀಮಿಯರ್ ಷೋನ ಎರಡು ಫೋಟೋಗಳು ಇಲ್ಲಿವೆ.[ಸಚಿನ್ ಜೀವನಗಾಥೆ ನೋಡಿ ಸ್ಪೂರ್ತಿ ಪಡೆದ ಕೊಹ್ಲಿ ಅಂಡ್ ಟೀಂ]

ಇನ್ನು ಹಾಲಿವುಡ್ ನ ಬ್ರಾಡ್ ಪಿಟ್ ಹಾಗೂ ಶಾರೂಕ್ ಖಾನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ನಲ್ಲಿ ನಡೆದ ಬಾಂಬ್ ಸ್ಫೋಟದ ಶಂಕಿತನ ಚಿತ್ರ ಬಿಡುಗಡೆಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಜತೆಗೆ ಪತ್ರಕರ್ತರ ಕಡೆಗೆ ಕೈ ಬೀಸುತ್ತಿರುವ ಚಿತ್ರಗಳು ಸೇರಿದ ಹಾಗೆ ವಿವಿಧ ಚಿತ್ರಗಳು-ಸುದ್ದಿ ಇಲ್ಲಿವೆ.

ದಲಿತರ ಮನೇಲಿ ಬಿಎಸ್ ವೈ ಉಪಾಹಾರ

ದಲಿತರ ಮನೇಲಿ ಬಿಎಸ್ ವೈ ಉಪಾಹಾರ

ಹುಬ್ಬಳ್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ದಲಿತರ ಮನೆಯಲ್ಲಿ ಗುರುವಾರ ಉಪಾಹಾರ ಸೇವಿಸಿದರು

ಚೆಲುವಾಂತ ಚೆನ್ನಿಗರು

ಚೆಲುವಾಂತ ಚೆನ್ನಿಗರು

ಇಬ್ಬರೂ ಅದ್ಭುತ ನಟರು. ಚೆಲುವಾಂತ ಚೆನ್ನಿಗರು. ಒಬ್ಬ ಶಾರೂಕ್ ಖಾನ್, ಮತ್ತೊಬ್ಬ ಹಾಲಿವುಡ್ ನ ಬ್ರಾಡ್ ಪಿಟ್. ಮುಂಬೈನ ಒಬೆರಾಯ್ ಟ್ರೈಡೆಂಟ್ ಟವರ್ ನಲ್ಲಿ ಬ್ರಾಡ್ ಪಿಟ್ ನ 'ವಾರ್ ಮಷೀನ್' ಬಿಡುಗಡೆಯಾಗುತ್ತಿದೆ ಎಂಬ ಬಗ್ಗೆ ಪ್ರಚಾರದಲ್ಲಿ ತೊಡಗಿದ್ದಾಗ ಎರಡು ತಾರೆಗಳ ಸಂಗಮ ಕ್ಯಾಮೆರಾದಲ್ಲಿ ಫಳಕ್ಕನೆ ಸೆರೆಯಾಗಿದ್ದು ಹೀಗೆ.

ಹತ್ತಾರು ಮಂದಿಯ ಕೊಂದ ಶಂಕಿತ ಕೊಲೆಗಡುಕ

ಹತ್ತಾರು ಮಂದಿಯ ಕೊಂದ ಶಂಕಿತ ಕೊಲೆಗಡುಕ

ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಅಮಾನವೀಯ ಕೃತ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಆ ಘಟನೆಯಲ್ಲಿ ಶಂಕಿತ ಬಾಂಬರ್ ಈತ, ಸಲ್ಮಾನ್ ಅಬೇದಿ. ಬ್ರಿಟಿಷ್ ಅಧಿಕಾರಿಗಳು ಶಂಕಿಸಿರುವ ಈ ವ್ಯಕ್ತಿಯ ಫೋಟೋ ಯಾವ ಮೂಲದಿಂದ ಸಿಕ್ಕಿದೆ ಎಂಬುದು ಗೊತಿಲ್ಲ.

ಸಿನಿಮಾ ಪ್ರೀಮಿಯರ್ ಷೋನಲ್ಲಿ ಸಚಿನ್ ಕುಟುಂಬ

ಸಿನಿಮಾ ಪ್ರೀಮಿಯರ್ ಷೋನಲ್ಲಿ ಸಚಿನ್ ಕುಟುಂಬ

ಇದು ಕಣ್ರೀ ಸಚಿನ್ ಕುಟುಂಬ. ತಾಯಿಯನ್ನೇ ಹೋಲುವಂತಿರುವ ಮಗಳು ಸಾರಾ, ತಂದೆಗಿಂತ ತುಂಬ ಎತ್ತರ (ಸಾಧನೆಯಲ್ಲಲ್ಲ) ಇರುವ ಅರ್ಜುನ್, ಪತ್ನಿ ಅಂಜಲಿ ಜತೆಗೆ ಸಚಿನ್ ತೆಂಡೂಲ್ಕರ್ ಮುಂಬೈನಲ್ಲಿ ಫೋಟೋಗೆ ಪೋಸ್ ಕೊಟ್ಟರು. ಸಚಿನ್ ಜೀವನ ಆಧಾರಿತ ಹಿಂದಿ ಚಿತ್ರ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಪ್ರೀಮಿಯರ್ ಷೋನಲ್ಲಿ ತೆಗೆದ ಫೋಟೋ ಇದು.

ಟ್ರಂಪ್ ದಂಪತಿ ರೋಮ್ ನಲ್ಲಿ

ಟ್ರಂಪ್ ದಂಪತಿ ರೋಮ್ ನಲ್ಲಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಏರ್ ಫೋರ್ಸ್ ಒನ್ ವಿಮಾನದಲ್ಲಿ ಹೊರಡುವ ಮೊದಲು ವರದಿಗಾರರ ಕಡೆಗೆ ಕೈ ಬೀಸಿದ ಕ್ಷಣವಿದು. ಎರಡು ದಿನಗಳ ಕಾಲ ವ್ಯಾಟಿಕನ್ ಸಿಟಿಯ ಪ್ರವಾಸದಲ್ಲಿದ್ದ ಅಧ್ಯಕ್ಷ ದಂಪತಿ ರೋಮ್ ನ ಫಿಯುಮಿಸಿನೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋವಿದು.

ಮೆಸ್ಸಿ ಮಾಡಿಕೊಂಡ ಘಾಸಿ

ಮೆಸ್ಸಿ ಮಾಡಿಕೊಂಡ ಘಾಸಿ

ಆತ ಲಯೋನಲ್ ಮೆಸ್ಸಿ. ಫುಟ್ಬಾಲ್ ನ ಜೀವಂತ ದಂತಕಥೆ. ತೆರಿಗೆ ವಂಚಿಸಿದ ಆರೋಪದಲ್ಲಿ ಅತನಿಗೆ ಸ್ಪೇನ್ ನಲ್ಲಿ ಇಪ್ಪತ್ತೊಂದು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯನ್ನು ಮೊದಲ ತಪ್ಪು ಎಂದು ಮನ್ನಿಸಲಾಗುತ್ತದಂತೆ ಸ್ಪೇನ್ ನಲ್ಲಿ. ಆದ್ದರಿಂದ ಜೈಲು ಶಿಕ್ಷೆ ಏನೂ ಆಗಲ್ಲ. ಆದರೆ ತೆರಿಗೆ ವಂಚಿಸಿದ ತಪ್ಪು ಸಾಬೀತಾಗಿದೆ. ಮರ್ಯಾದೆ ಹೋಗಿದೆ.

ಘರ್ಷಣೆಯಲ್ಲಿ ಗಾಯ

ಘರ್ಷಣೆಯಲ್ಲಿ ಗಾಯ

ಉತ್ತರಪ್ರದೇಶದ ಸಹರಾನ್ ಪುರ್ ನಲ್ಲಿ ಘರ್ಷಣೆ ನಡೆದಿದ್ದು, ಅದರಲ್ಲಿ ಗಾಯವಾದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಜಾತಿ ವಿಚಾರಕ್ಕೆ ನಡೆದ ಘರ್ಷಣೆ ಎಂಬುದು ಮೂಲಗಳು ನೀಡಿರುವ ಮಾಹಿತಿ.

ಹುತಾತ್ಮ ಯೋಧರ ದೇಹ ಹೊತ್ತಿರುವ ಸೈನಿಕರು

ಹುತಾತ್ಮ ಯೋಧರ ದೇಹ ಹೊತ್ತಿರುವ ಸೈನಿಕರು

ಈ ಫೋಟೋಗೆ ವಿವರಣೆ ಬೇಡ ಎನಿಸಿದರೂ ಹುತಾತ್ಮರಾದ ಯೋಧರ ಹೆಸರು ಗೊತ್ತಾಗಬೇಕು ಎಂದು ಈ ಮಾಹಿತಿ. ಹವಾಲ್ದಾರ್ ಗಿರೀಶ್ ಗುರಂಗ್, ರೈಫಾಲ್ ಮನ್ ರಾಬಿನ್ ಶರ್ಮಾ, ಹವಾಲ್ದಾರ್ ದಾಮನ್ ಬಹದ್ದೂರ್ ಕಾಶ್ಮೀರದ ಕುಪ್ವಾರದಲ್ಲಿ ಹುತಾತ್ಮರಾಗಿದ್ದರು. ಅವರ ದೇಹಗಳನ್ನು ಹೊತ್ತೊಯ್ಯುತ್ತಿರುವ ಭಾರತೀಯ ಯೋಧರು.

ಉಸಿರಾಡುವ ಕನಸಿನ ಜತೆಗೆ ಕೊಹ್ಲಿ-ಅನುಷ್ಕಾ

ಉಸಿರಾಡುವ ಕನಸಿನ ಜತೆಗೆ ಕೊಹ್ಲಿ-ಅನುಷ್ಕಾ

'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಪ್ರೀಮಿಯರ್ ಷೋನಲ್ಲಿ ಸಚಿನ್ ದಂಪತಿಯ ಜತೆಗೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ.

ನೈರುತ್ಯ ಮುಂಗಾರಿನ ಪಯಣ

ನೈರುತ್ಯ ಮುಂಗಾರಿನ ಪಯಣ

ನೈರುತ್ಯ ಮುಂಗಾರು ಈ ಬಾರಿ ಯಾವಾಗ, ಎಲ್ಲಿ ಪ್ರವೇಶ ಮಾಡಲಿದೆ ಎಂಬುದನ್ನು ಪಿಟಿಐ ಸುದ್ದಿ ಸಂಸ್ಥೆಯು ಗ್ರಾಫಿಕ್ಸ್ ಮೂಲಕ ತೋರಿಸಿರುವುದು ಇಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+