ಚಂಡಮಾರುತದಿಂದ ಪಿತೃಪಕ್ಷದವರೆಗೆ ಚಿತ್ತ ಹಿಡಿದಿಟ್ಟ ಚಿತ್ರಗಳು...

Posted By:
Subscribe to Oneindia Kannada

ಅಮೆರಿಕದಲ್ಲಿ ಇರ್ಮಾ ಚಂಡಮಾರುತ ಮಾಡಿರುವ ಅನಾಹುತ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲದಂಥದ್ದು. ಲಕ್ಷಾಂತರ ಮಂದಿಯ ಬದುಕು ಚಂಡಮಾರುತಕ್ಕೆ ಸಿಕ್ಕು ಅಸ್ತವ್ಯಸ್ತವಾಗಿದೆ. ತುರ್ತು ಪರಿಹಾರ ಕಾರ್ಯಗಳೇನೋ ಸರಕಾರದಿಂದ ನಡೆಯುತ್ತಿದೆ. ಆದರೆ ಬದುಕು ಒಂದು ಹಂತಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.

ಅಮೆರಿಕವನ್ನು ನಡುಗಿಸಿರುವ ಇರ್ಮಾ- ಅಲ್ಲಾಹ್ ನ ಸೈನಿಕ ಎಂದ ಉಗ್ರರು

ಅಲ್ಲಿನದೇ ಒಂದು ದೋಣಿಯ ಫೋಟೋ ಇಲ್ಲಿದೆ. ಜನರ ಬದುಕಿನ ಜತೆಗೆ ಸಮೀಕರಿಸುವಂಥ ಕರುಣಾಜನಕವಾದ ಫೋಟೋ ಇದು. ಇನ್ನು ಮುಂಬೈನಲ್ಲಿ ತಮ್ಮ ಚಿತ್ರ 'ಲಖನೌ ಸೆಂಟ್ರಲ್'ನ ವಿಶೇಷ ಪ್ರದರ್ಶನದಲ್ಲಿ ದಿಯಾ ಮಿರ್ಜಾ ಭಾಗವಹಿಸಿದ್ದಾರೆ. ಗುರುಗ್ರಾಮದಲ್ಲಿ ಶಾಲಾ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ.

ದುರ್ಗಾ ಪೂಜೆ ಅಂದರೆ ಕೋಲ್ಕತ್ತಾದಲ್ಲಿ ಸಂಭ್ರಮ ನೋಡಬೇಕು. ಇನ್ನೇನು ದುರ್ಗಾ ಪೂಜೆಗಾಗಿ ಸಿದ್ಧತೆ ನಡೆಯುತ್ತಿದೆ. ಅಲ್ಲಿನ ಕಲಾವಿದನೊಬ್ಬ ತಯಾರಿಯಲ್ಲಿ ತೊಡಗಿರುವ ಚಂದದ ಫೋಟೋ ಇದು. ಪಿತೃ ಪಕ್ಷ ಆರಂಭವಾಗಿದ್ದು, ಗಯಾದಲ್ಲಿ ತಮ್ಮ ಪೂರ್ವಿಕರಿಗೆ ಪಿಂಡ ಪ್ರದಾನ ಮಾಡುತ್ತಿರುವ ಗುಂಪೊಂದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಫ್ಲೋರಿಡಾದತ್ತ ಧಾವಿಸಿದ ಚಂಡಮಾರುತ, 63 ಲಕ್ಷ ಜನರ ಸ್ಥಳಾಂತರ

ಒಟ್ಟಾರೆ ದೇಶ-ವಿದೇಶದ ಪಿಟಿಐ ಸುದ್ದಿ ಸಂಸ್ಥೆಯ ಚಂದ ಹಾಗೂ ಮನ ಕರಗುವ ಫೋಟೋಗಳು ನಿಮ್ಮೆದುರು ಇವೆ.

ಹೊಸ ಸಿನಿಮಾದ ವಿಶೇಷ ಪ್ರದರ್ಶನ

ಹೊಸ ಸಿನಿಮಾದ ವಿಶೇಷ ಪ್ರದರ್ಶನ

ಬಾಲಿವುಡ್ ತಾರೆ ದಿಯಾ ಮಿರ್ಜಾ ಮುಂಬೈನಲ್ಲಿ ನಡೆದ ತಮ್ಮ ಸಿನಿಮಾ 'ಲಖನೌ ಸೆಂಟ್ರಲ್' ನ ವಿಶೇಷ ಪ್ರದರ್ಶನದ ವೇಳೆ ಕಾಣಿಸಿಕೊಂಡಿದ್ದು ಹೀಗೆ.

ಚಂಡಮಾರುತಕ್ಕೆ ಸಿಲುಕಿದ ದೋಣಿ

ಚಂಡಮಾರುತಕ್ಕೆ ಸಿಲುಕಿದ ದೋಣಿ

ಇರ್ಮಾ ಚಂಡಮಾರುತವು ಮಾಡಿದ ಅನಾಹುತವಿದು. ದೋಣಿಯೊಂದರ ಪರಿಸ್ಥಿತಿ ಹೀಗೆ ಕಂಡುಬಂದಿದ್ದು ಫ್ಲೋರಿಡಾದ ಪಾಮ್ ಶೋರ್ಸ್ ನಲ್ಲಿ.

ಕೋರ್ಟ್ ಗೆ ಕರೆದೊಯ್ದ ಪೊಲೀಸರು

ಕೋರ್ಟ್ ಗೆ ಕರೆದೊಯ್ದ ಪೊಲೀಸರು

ಗುರುಗ್ರಾಮದ ರಯಾನ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ನ ಪ್ರಾದೇಶಿಕ ಮುಖ್ಯಸ್ಥ ಫ್ರಾನ್ಸಿಸ್ ಥಾಮಸ್ (ಬಿಳಿ ಷರ್ಟ್ ಧರಿಸಿದ ವ್ಯಕ್ತಿ) ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜೇಯಸ್ ಥಾಮಸ್ (ಬೂದು ಬಣ್ಣದ ಷರ್ಟ್ ಧರಿಸಿದಾತ) ನನ್ನು ಸೋಮವಾರ ಸೋಹ್ನಾ ನಗರದ ಕೋರ್ಟ್ ಗೆ ಪೊಲೀಸರು ಕರೆದೊಯ್ದರು.

ದುರ್ಗಾ ಪೂಜೆ ತಯಾರಿ

ದುರ್ಗಾ ಪೂಜೆ ತಯಾರಿ

ಕೋಲ್ಕತ್ತಾ ನಗರದಲ್ಲಿ ದುರ್ಗಾ ಪೂಜೆ ಪೂರ್ವಭಾವಿಯಾಗಿ ಸಾರ್ವಜನಿಕ ಪೂಜಾ ಪೆಂಡಾಲ್ ನಲ್ಲಿ ಸಿದ್ಧತೆಯಲ್ಲಿ ತೊಡಗಿದ್ದ ಕಲಾವಿದ ಕ್ಯಾಮೆರಾ ಕಣ್ಣಿನಲ್ಲಿ ಕಂಡುಬಂದಿದ್ದು ಹೀಗೆ.

ಸುಮಿತ್ರಾ, ಹೇಮಾ ಪ್ರಭಾವಳಿ

ಸುಮಿತ್ರಾ, ಹೇಮಾ ಪ್ರಭಾವಳಿ

ನವದೆಹಲಿಯಲ್ಲಿ ನಡೆದ 'ಸಿನರ್ಜಿ' ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ನಟಿ-ಸಂಸದೆ ಹೇಮಾ ಮಾಲಿನಿ ಭಾಗವಹಿಸಿದ್ದರು.

ಗಯಾದಲ್ಲಿ ಪಿಂಡ ಪ್ರದಾನ

ಗಯಾದಲ್ಲಿ ಪಿಂಡ ಪ್ರದಾನ

ತೀರಿಕೊಂಡ ಹಿರಿಯರಿಗೆ ಪಿತೃಪಕ್ಷದ ಪ್ರಯುಕ್ತ ಗಯಾದ ಫಲ್ಗು ನದಿಯಲ್ಲಿ ಸೋಮವಾರ ಪಿಂಡ ಪ್ರದಾನ ಮಾಡಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Irma hurricane, Durga puja preparation in Kolkata and other events represent through PTI photos.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ