ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 22ರಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರ

|
Google Oneindia Kannada News

ಚೆನ್ನೈ, ಆಗಸ್ಟ್ 7: ಈ ಸುದ್ದಿಯ ಬಗ್ಗೆ ಗಮನ ಇರಲಿ. ಏಕೆಂದರೆ ಆಗಸ್ಟ್ ಇಪ್ಪತ್ತೆರಡರಂದು ದೇಶದಾದ್ಯಂತ ಇರುವ ಬ್ಯಾಂಕ್ ಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ಹೀಗಾದಲ್ಲಿ ಅಂದು ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ.

ಒಂದು ದಿನದ ಬ್ಯಾಂಕ್ ಮುಷ್ಕರದಿಂದಾದ ನಷ್ಟವೆಷ್ಟು?ಒಂದು ದಿನದ ಬ್ಯಾಂಕ್ ಮುಷ್ಕರದಿಂದಾದ ನಷ್ಟವೆಷ್ಟು?

ಬ್ಯಾಂಕಿಂಗ್ ವಲಯದಲ್ಲಿನ ಸುಧಾರಣೆಯೂ ಸೇರಿದ ಹಾಗೆ ವಿವಿಧ ವಿಚಾರಗಳನ್ನು ಆದ್ಯತೆ ಮೇರೆಗೆ ನೆರವೇರಿಸಬೇಕು ಎಂಬುದು ಮುಷ್ಕರದ ಹಿಂದಿನ ಉದ್ದೇಶ. ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್ ಬಿಯು) ಮುಷ್ಕರದ ಬಗ್ಗೆ ಪ್ರಕಟಣೆ ನೀಡಿದೆ.

Cash

ಮುಷ್ಕರ ನಡೆಸುವ ಬಗ್ಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಅಂದು ಇಡೀ ಬ್ಯಾಂಕಿಂಗ್ ವಲಯ ಮುಷ್ಕರದಲ್ಲಿ ಭಾಗವಹಿಸಲಿದೆ ಎಂದು ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್.ವೆಂಕಟಾಚಲಂ ಅವರು ಮಾಹಿತಿ ನೀಡಿದ್ದಾರೆ.

ಸಂಬಳವನ್ನು ಹೆಚ್ಚಳ ಮಾಡುವುದು, ಸುಧಾರಣೆ ಕ್ರಮಗಳನ್ನು ಜಾರಿಗೆ ತರುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಯುಎಫ್ ಬಿಯು ಮುಷ್ಕರ ನಡೆಸಲು ನಿರ್ಧರಿಸಿದೆ. ಅಂದಹಾಗೆ ಯುಎಫ್ ಬಿಯು ಬ್ಯಾಂಕಿಂಗ್ ವಲಯದ ಒಂಬತ್ತು ಒಕ್ಕೂಟವನ್ನು ಒಳಗೊಂಡಿದೆ.

English summary
Nationwide strike by banks on August 22nd to fulfill various demands including pay revision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X