Parliament Attack: 24ನೇ ವರ್ಷಾಚರಣೆ ವೇಳೆ ಕಮಲೇಶ್ ಕುಮಾರಿ ಸ್ಮರಿಸಿದ ಭಾರತ, 2001ರಲ್ಲಿ ಆಗಿದ್ದೇನು?
2001 Parliament attack: ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ (2001 Parliament attack) ನಡೆದು ಇಂದಿಗೆ ಇಂದಿಗೆ ಸರಿಯಾಗಿ 24 ವರ್ಷಗಳು ತುಂಬಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಕರ್ನಾಟಕ ಗಣ್ಯರು ಸಹ ಅಂದು ಉಗ್ರರ ವಿರುದ್ಧ ಹೋರಾಡಿದ ಹುತಾತ್ಮರನ್ನು ಸ್ಮರಿಸಿದ್ದಾರೆ. ವೀರ ಮರಣ ಹೊಂದಿದ್ದಕ್ಕಾಗಿ ವಿಶೇಷವಾಗಿ ಮರಣೋತ್ತರ ಅಶೋಕ ಚಕ್ರ ಪಡೆದ ಮೊದಲ ಮಹಿಳಾ ಕಾನ್‌ಸ್ಟೇಬಲ್ ಕಮಲೇಶ್ ಕುಮಾರ್ ಅವರನ್ನು ದೇಶವೇ ಸಂದರ್ಭದಲ್ಲಿ ಸ್ಮರಿಸಲಾಗಿದೆ.
ಅಂದಿನ ಸಂಸತ್ ದಾಳಿಯಲ್ಲಿ ಸಿಆರ್‌ಪಿಎಪ್ ಸಿಬ್ಬಂದಿ ಜೊತೆಗೆ ಕೆಲಸ ಮಾಡಿದ್ದ ಕಮಲೇಶ್ ಕುಮಾರಿ ಅವರ ಅಪ್ರತಿಮ ಧೈರ್ಯ ಮತ್ತು ತ್ಯಾಗಕ್ಕಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ್ ಚಕ್ರವನ್ನು ನೀಡಲಾಯಿತು. ಅವರ ಶೌರ್ಯವನ್ನು ಗೌರವಿಸೋಣ ಮತ್ತು ನಮ್ಮ ರಾಷ್ಟ್ರವನ್ನು ರಕ್ಷಿಸುವ ವೀರರನ್ನು ನೆನಪಿಸಿಕೊಳ್ಳೋಣ ಎಂದು ಕರ್ನಾಟಕ ಸೇರಿದಂತೆ ದೆಹಲಿ ಹಾಗೂ ಇತರ ರಾಜ್ಯಗಳ ರಾಜಕಾರಣಿಗಳು, ಗಣ್ಯರು ಸ್ಮರಿಸಿದ್ದಾರೆ.

ಈಗಾಗಲೇ ಸಂಸತ್ ಚಳಿಗಾಲ ಅಧಿವೇಶನ ಆರಂಭವಾಗಿದೆ. ಪಾರ್ಲಿಮೆಂಟ್ ದಾಳಿಗೆ 24ನೇ ವರ್ಷಾಚರಣೆ ಪ್ರಯುಕ್ತ ಸಂಸತ್‌ನ ಸದಸ್ಯರು ಸೋಮವಾರ ಶ್ರದ್ಧಾಂಜಲಿ ಸಲ್ಲಿಸಬಹುದು. ಆನ್‌ಲೈನ್ ಪೋಸ್ಟ್‌ಗಳ ಮೂಲಕ ಹುತಾತ್ಮರ ಶೌರ್ಯ, ತ್ಯಾಗ, ದೇಶ ಪ್ರೇಮ ಸ್ಮರಿಸಲಾಗಿದೆ.
ಕಮಲೇಶ್ ಕುಮಾರಿಗೆ ಮರಣೋತ್ತರ ಅಶೋಕ್ ಚಕ್ರ
24 ವರ್ಷಗಳ ಹಿಂದೆ 2001ರ ಡಿಸೆಂಬರ್ 13ರದು ಉಗ್ರರಿಂದ ಸಂಸತ್ತಿನ ಮೇಲೆ ದಾಳಿ ನಡೆಸಿತ್ತು. ಸಂಸತ್ ಒಳಗೆ ನುಗ್ಗಿದ್ದರು. ದಾಳಿಕೋರರ ಉಪರಾಷ್ಟ್ರಪತಿಗಳತ್ತ ನುಗಿದ್ದು ಐರನ್ ಗೇಟ್ ಸಂಖ್ಯೆ 1ರಲ್ಲಿ ನಿಂತಿದ್ದ ಕಮಲೇಶ್ ಕುಮಾರಿ ಅವರಿಗೆ ವಾಕಿ ಟಾಕಿ ಮೂಲಕ ತಿಳಿಯಿತು. ಕೂಡಲೇ ಕಾರ್ಯ ಪ್ರವೃತ್ತರಾದ ಅವರು ಶಸ್ತ್ರಸಜ್ಜಿತರಾಗಿ ಉಪರಾಷ್ಟ್ರಪತಿ ಕೊಠಡಿಯತ್ತ ತೆರಳಿದರು.
ಕಾನ್‌ಸ್ಟೇಬಲ್ ಕಮಲೇಶ್ ಅವರು ವಾಕಿ ಟಾಕಿ ಮೂಲಕ ಪೊಲೀಸ್ ಸಿಬ್ಬಂದಿ, ಭದ್ರತಾ ಪಡೆಗೆ ಮಾಹಿತಿ ನೀಡಿ ಎಚ್ಚರಿಸಿದರು. ಕ್ಷಣಮಾತ್ರದಲ್ಲಿ ದಾಳಿಕೋರರನ್ನು ಬೆನ್ನಟ್ಟಿದರು. ಭಯೋತ್ಪಾದಕರ ದಾಳಿ ತಡೆಯುವ ನಿಟ್ಟಿನಲ್ಲಿ ದಿಟ್ಟತನವನ್ನೇನೋ ಪ್ರದರ್ಶಿಸಿದರು, ಆದರೆ ಗುಂಡಿನ ದಾಳಿಯಲ್ಲಿ ಕಮಲೇಶ್, ಸಿಎಆರ್‌ಪಿಎಫ್ ಸಿಬ್ಬಂದಿ ಸೇರಿದಂತೆ ಹಲವರು ಪ್ರಾಣಬಿಟ್ಟರು. ಈ ಘಟನೆ ಇತಿಹಾಸ ಪುಟ ಸೇರಿತು.
ಕಮಲೇಶ್ ಕುಮಾರಿ ಆವತ್ತು ತೋರಿದ ಶೌರ್ಯ ಪ್ರದರ್ಶನ ಕಂಡು ಅವರ ಮರಣಾಂತರ ಅಶೋಕ ಚಕ್ರ ನೀಡಲಾಯಿತು. ಮರಣೋತ್ತರ ಅಶೋಕ ಚಕ್ರ ಪಡೆದ ಏಕೈಕ ಮಹಿಳೆಯಾದರು. ಅವರ ತ್ಯಾಗ, ಬಲಿದಾನ ಚರಿತ್ರೆಯಲ್ಲಿ ಅಜರಾಮರವಾಯಿತು. ಇಂದಿಗೆ ಸುಮಾರು ಎರಡೂವರೆ ದಶಕ ಕಳೆದರು ಸಹಿತ ಅವರ ದಿಟ್ಟತನ, ತ್ವರಿತ ಸ್ಪಂದನೆ ಮಾದರಿಯಾಗಿದ್ದು, ಸ್ಮರಿಸಲಾಗುತ್ತಿದೆ.
We pay solemn tribute to the martyrs of the Parliament Attack 2001 who stood firm against terror. Their courage protected the very heart of our democracy at a moment of grave danger. The nation remembers their sacrifice with deep respect. Their legacy strengthens our resolve to… pic.twitter.com/ya9BlIKlsz
— DK Suresh (@DKSureshINC) December 13, 2025
ಕರ್ನಾಟಕ ಗಣ್ಯರಿಂದಲೂ ಸ್ಮರಣೆ..
ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಂಸತ್ ದಾಳಿಯು ಭಾರತದ ಕಲ್ಪನೆಯ ಮೇಲೆಯೇ ಭಯೋತ್ಪಾದನೆಯ ನೇರ ದಾಳಿಯಾಗಿತ್ತು. ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿ ಅಸಾಧಾರಣ ಧೈರ್ಯದಿಂದ ಆ ಬೆದರಿಕೆಯನ್ನು ಎದುರಿಸಿ ರಾಷ್ಟ್ರವನ್ನು ರಕ್ಷಿಸಿದರು. ಅವರ ಸ್ಮರಣೆಗೆ ಮತ್ತು ಈ ಅಪಾರ ನಷ್ಟವನ್ನು ಅನುಭವಿಸಿದ ಕುಟುಂಬಗಳಿಗೆ ನಾವು ನಮನಗಳು ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹುತಾತ್ಮರನ್ನು ನೆನೆದಿದ್ದಾರೆ. ಇಂದು 2001 ರ ಸಂಸತ್ತಿನ ದಾಳಿಯ ವೇಳೆ ಕೆಚ್ಚೆದೆ ಸಾಹಸ ತೋರಿ ಹುತಾತ್ಮರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಧೈರ್ಯ ಮತ್ತು ಸರ್ವೋಚ್ಚ ತ್ಯಾಗವು ನಮ್ಮ ಪ್ರಜಾಪ್ರಭುತ್ವದ ಆತ್ಮ ಮತ್ತು ನಮ್ಮ ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸುತ್ತದೆ. ದೇಶ ಅವರಿಗೆ ಕೃತಜ್ಞತೆಯಿಂದ ತಲೆಬಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, 2001ರ ಸಂಸತ್ ಭವನದ ಮೇಲಿನ ಉಗ್ರರ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳಿಗೆ ನಮ್ಮ ಆದರಪೂರ್ವಕ ಪ್ರಣಾಮಗಳು. ಪ್ರತಿಕೂಲ ಸಂದರ್ಭದಲ್ಲಿ ಕೂಡ ಕರ್ತವ್ಯ ವಿಮುಖರಾಗದೆ ಧೈರ್ಯದಿಂದ ಕಾರ್ಯನಿರ್ವಹಿಸಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ನಿಮ್ಮ ಶೌರ್ಯ, ತ್ಯಾಗಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications