ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಭಾರತ

Subscribe to Oneindia Kannada

ಇಂಫಾಲ್, ಏಪ್ರಿಲ್, 15: ದೇಶಕ್ಕಾಗಿ ಮಣಿದ ಮಗನ ಪಾರ್ಥಿವ ಶರೀರ ಮನೆಗೆ ಬಂದ ವೇಳೆ ತಂದೆಯೊಬ್ಬನ ಪರಿಸ್ಥಿತಿ ಹೇಗಿರಬಹುದು? ಯೋಚನೆ ಮಾಡಲು ಸಾಧ್ಯವಿಲ್ಲ ಅಲ್ಲವೇ?

ಮಣಿಪುರದ ತಮೆಂಗ್ಲಾಂಗ್‌ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ವಿಶೇಷ ಭದ್ರತಾ ಪಡೆಯ ಮೇಜರ್‌ ಅಮಿತ್‌ ದೆಸ್ವಾಲ್‌ ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇಂದು ಸ್ವಗ್ರಾಮಕ್ಕೆ ಬಂದಿದ್ದು ಸಕಲ ಸರ್ಕಾರಿ ಗೌರವಗಳ ಮೂಲಕ ಅಂತಿಮ ನಮನ ಸಲ್ಲಿಕೆ ಮಾಡಲಾಗಿದೆ.[ಅಪ್ಪಾ ನಂಗೆ ನೀನು ಬೇಕಪ್ಪಾ ಅನಲು ತಂದೆಯೇ ಇಲ್ಲ]

india

ಮಗನ ಪಾರ್ಥಿವ ಶರೀರವನ್ನು ಕಾಣುತ್ತಲೇ ವೀರ ಸೈನಿಕನ ತಂದೆ ರಾಮ್ ರಿಶಿ ನೋವನ್ನು ಹೊರಹಾಕಿದ ಪರಿ ಎಂಥವರ ಕಕಣ್ಣಲ್ಲೂ ನೀರು ಹರಿಸುವಂತೆ ಇತ್ತು. ಸೇನೆಯಲ್ಲಿ ಹಿಂದೆ ಸೇವೆ ಸಲ್ಲಿಕೆ ಮಾಡಿದ್ದ ರಾಮ್ ರಿಶಿ ದೇಶದ ಭದ್ರತೆ ಕಾಪಾಡಲು ಮಗನನ್ನು ಸೇನೆ ಸೇರಿಸಿದದ್ದರು. ಮಗನ ಜತೆ ಕೆಲಸ ಮಾಡುತ್ತಿದ್ದ ಇತರ ಸೈನಿಕರನ್ನು ಅಪ್ಪಿಕೊಂಡು ತಮ್ಮ ನೋವನ್ನು ಹೊರಹಾಕಿದರು.[ಸಿಯಾಚಿನ್ ಹಿಮಪಾತದಡಿ ಸಿಕ್ಕರೂ ಬದುಕಿ ಬಂದಿದ್ದ ಹನುಮಂತಪ್ಪ]

ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ದೆಸ್ವಾಲ್ ಅವರಿಗೆ ಗುಂಡೇಟು ತಾಗಿದ್ದರಿಂದ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲಿಲ್ಲ. ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅಗಲಿದ ವೀರ ಸೈನಿಕನಿಗೆ ಅಂತಿಮ ನಮನ ಸಲ್ಲಿಕೆ ಮಾಡಿದರು.

ರಾಷ್ಟ್ರೀಯ ರೈಫಲ್ ಹಾಗೂ ಪ್ಯಾರಾ ವಿಶೇಷ ಭದ್ರತಾ ಪಡೆ ಜಂಟಿಯಾಗಿ ಶೋಧಕಾರ್ಯ ಮುಂದುವರಿಸಿದ್ದ ವೇಳೆ ಉಗ್ರರು ಹಾರಿಸಿದ ಗುಂಡು ದೆಸ್ವಾಲ್ ಅವರ ಹೊಟ್ಟೆಗೆ ತಾಗಿತ್ತು. ಮೇಜರ್‌ ಅಮಿತ್‌ ದೆಸ್ವಾಲ್‌ ಹರಿಯಾಣದ ಝಾಜ್ಜರ್‌ ಜಿಲ್ಲೆಯವರು. ಇನ್ನೊಂದೆಡೆ ಉಗ್ರರ ಧಮನಕ್ಕೆ ಸೇನೆ ಕಾರ್ಯಾಚರಣೆ ಮುಂದುವರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The nation on Friday, April 15, paid a tearful adieu to Major Amit Deswal from Para 21, who was martyred in an encounter with the Zeliangrong United Front (ZUF) insurgents in Manipur's Tamenglong distrcit on Wednesday, April 13. One of the official on the condition of anonymity informed OneIndia that one militant was also killed during the combing operation undertaken by Rashtriya Rifles and Special Forces personnel.
Please Wait while comments are loading...