ಹೈದರಾಬಾದ್: ಡ್ರಗ್ಸ್ ಜಾಲದಲ್ಲಿ ಸಿಲುಕಿದ NASA ಮಾಜಿ ವಿಜ್ಞಾನಿ
ನಾನಾದಲ್ಲಿ ಈ ಹಿಂದೆ ವಿಜ್ಞಾನಿಯಾಗಿದ್ದ ವ್ಯಕ್ತಿಯೊಬ್ಬನಿಂದ ಡ್ರಗ್ಸ್ ಮಾರಾಟ. ಹೈದರಾಬಾದ್ ನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಾಜಿ ವಿಜ್ಞಾನಿ. ಹೈದರಾಬಾದ್ ಪೊಲೀಸ ಕಾರ್ಯಾಚರಣೆಯಲ್ಲಿ ಬಂಧಿಯಾದ ಅನೀಶ್ ದುಂಡೂ ಎಂಬ ವಿಜ್ಞಾನಿ.
ಹೈದರಾಬಾದ್, ಜುಲೈ 13: ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಾದ ನಾಸಾದ (NASA) ಮಾಜಿ ವಿಜ್ಞಾನಿಯೊಬ್ಬ ಹೈದರಾಬಾದ್ ನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದ ಪ್ರಕರಣವೊಂದರಲ್ಲಿ ಪೊಲೀಸರಿಂದ ಬಂಧಿತರಾಗಿದ್ದಾನೆ.
29 ವರ್ಷದ ಅನೀಶ್ ದುಂಡೂ ಎಂಬಾತ ಬಂಧಿತ ಆರೋಪಿ. ಈತ ಈ ಹಿಂದೆ ನಾಸಾದಲ್ಲಿ ಸೇವೆ ಸಲ್ಲಿಸಿದ್ದನೆಂದು ಹೇಳಲಾಗಿದೆ.

ಹೈದರಾಬಾದ್ ನಲ್ಲಿ ಇತ್ತೀಚೆಗೆ ಮಾದಕ ವಸ್ತುಗಳು ವ್ಯಾಪಕವಾಗಿ ಮಾರಾಟವಾಗುತ್ತಿರುವ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.
ಬಂಧಿತರಿಂದ ಲಕ್ಷಾಂತರ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications