Sunita Williams: ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರುವ ಬಗ್ಗೆ ಬಿಗ್ ಅಪ್‌ಡೇಟ್!
ನಾಸಾ ಬಾಹ್ಯಾಕಾಶ ವಿಜ್ಞಾನಿ ಸುನಿತಾ ವಿಲಿಯಮ್ಸ್ ಅವರು ಆಕಾಶದಲ್ಲಿ ಸಿಲುಕಿ ಒದ್ದಾಡಿ ಹೋಗಿದ್ದಾರೆ. ಅತಿಹೆಚ್ಚು ಸಮಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ ಮಾಡಿರುವ ಸಾಧನೆ ಸೇರಿ ಹತ್ತಾರು ದಾಖಲೆಗಳು ಭಾರತ ಮೂಲದ ನಂಟು ಇರುವ ಸುನಿತಾ ವಿಲಿಯಮ್ಸ್ ಹೆಸರಲ್ಲಿ ಇದೆ. ಈ ಮೂಲಕ ಇದೀಗ ಬದುಕಿರುವ ವಿಜ್ಞಾನಿಗಳ ಪೈಕಿ ಅತಿಹೆಚ್ಚು ಅನುಭವ ಹೊಂದಿದ ಕಾರಣಕ್ಕೆ ಪದೇ ಪದೇ ನಾಸಾ ಸಂಸ್ಥೆ ಸುನಿತಾ ವಿಲಿಯಮ್ಸ್ ಅವರನ್ನೇ ಬಾಹ್ಯಾಕಾಶ ಅಧ್ಯಯನ ನಡೆಸಲು ಕಳುಹಿಸುತ್ತಿದೆ. ಆದರೆ ಇದೇ ಸಾಧನೆ ಸುನಿತಾ ವಿಲಿಯಮ್ಸ್‌ಗೆ ಸಂಕಷ್ಟ ತಂದಿದೆ!
ಹೌದು, ಸುನಿತಾ ವಿಲಿಯಮ್ಸ್ ನಾಸಾ ಸಂಸ್ಥೆಯ ಅತ್ಯಂತ ಹೆಚ್ಚು ಅನುಭವ ಹೊಂದಿರುವ ವಿಜ್ಞಾನಿಗಳ ಪೈಕಿ ಒಬ್ಬರು. ನಾಸಾ ಸಂಸ್ಥೆ ಕೂಡ ಅದೆಷ್ಟೋ ಯೋಜನೆಗಳಲ್ಲಿ ಗೆಲುವನ್ನು ಕಾಣಲು ಇದೇ ಸುನಿತಾ ವಿಲಿಯಮ್ಸ್ ಅವರ ಶ್ರಮ ಕಾರಣವಾಗಿತ್ತು. ಹೀಗಿದ್ದಾಗ ಮತ್ತೊಮ್ಮೆ ಮಹತ್ವದ ಯೋಜನೆಗೆ ಅಂತಾ ಸುನಿತಾ ವಿಲಿಯಮ್ಸ್ ಅವರು ತಮ್ಮ ಸಹೋದ್ಯೋಗಿ ಜೊತೆ ಬಾಹ್ಯಾಕಾಶಕ್ಕೆ ಹಾರಿದ್ದರು. ಕೆಲವೇ ದಿನಗಳಲ್ಲಿ ವಾಪಸ್ ಬರಬೇಕಿದ್ದ ಸುನಿತಾ ವಿಲಿಯಮ್ಸ್ ಅವರಿಗೆ ಇಲ್ಲೇ ನೋಡಿ ಸಂಕಷ್ಟ ಎದುರಾಗಿದ್ದು.

8 ದಿನಕ್ಕೆ ಅಂತಾ ಹೋಗಿದ್ದರು!
ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದ್ದರು. ಕೇವಲ 8 ದಿನಗಳ ಕಾಲ ಅಲ್ಲಿ ಉಳಿದು, ಕಾರ್ಯಾಚರೆಣೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ದಿಢಿರ್ ಅಂತಾ ತಾಂತ್ರಿಕ ಸಮಸ್ಯೆ ಎದುರಾಗಿ ಗಗನಯಾತ್ರಿಗಳನ್ನ ಬಾಹ್ಯಾಕಾಶದಲ್ಲಿಯೇ ಬಿಟ್ಟು ಸ್ಟಾರ್‌ಲೈನರ್ ಭೂಮಿಗೆ ಮರಳಿ ಬಂದಿತ್ತು. ಹೀಗಾಗಿ ಕಳೆದ 9 ತಿಂಗಳಿಂದ ಅಲ್ಲಿಯೇ ಸಿಲುಕಿ ಒದ್ದಾಡಿದ್ದರು ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಅವರು. ಇದೀಗ ಅವರನ್ನು ವಾಪಸ್ ಭೂಮಿಗೆ ಕರೆತರಲು ಅಂತಿಮ ಹಂತದ ಸಿದ್ಧತೆ ಸಾಗಿದೆ.
ಮಾರ್ಚ್ 19ಕ್ಕೆ ಭೂಮಿಗೆ ವಾಪಸ್
'ನಾಸಾ' ಸೇರಿ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ಸಮಸ್ಯೆ ಸರಿ ಮಾಡಲು ಪ್ರಯತ್ನಿಸಿದ್ದರು. ಇದೆಲ್ಲಾ ವರ್ಕೌಟ್ ಆಗದೇ ಕೊನೆಗೆ 'ಸ್ಪೇಸ್ ಎಕ್ಸ್' ನೌಕೆ ಇದೀಗ ಆಕಾಶಕ್ಕೆ ಹಾರಿದೆ. ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆಯ ಡ್ಯ್ರಾಗನ್ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಶಸ್ವಿಯಾಗಿ ತಲುಪಿದ್ದು, ಹಲವು ತಿಂಗಳಿಂದ ಕಾರ್ಯಾಚರಣೆಯನ್ನ ನಡೆಸಿದೆ. ಇದರ ಫಲವಾಗಿ ಮಾರ್ಚ್ 19 ರಂದು ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ ಭೂಮಿಗೆ ಬಂದು ಇಳಿಯಲಿದ್ದಾರೆ. ಈ ಮೂಲಕ ಬಾಹ್ಯಾಕಾಶ ಲೋಕದ ಹೊಸ ಕಗ್ಗಂಟು ಕೊನೆಯಾಗುವ ನಿರೀಕ್ಷೆ ಮೂಡಿದೆ.












Click it and Unblock the Notifications