ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ-ಭಾರತ ಸಂಬಂಧ ವೃದ್ಧಿಗೆ 8 ಮಹತ್ವದ ಒಪ್ಪಂದಗಳ ವಿನಿಮಯ

|
Google Oneindia Kannada News

ನವದೆಹಲಿ, ಅಕ್ಟೋಬರ್ 05: ರಷ್ಯಾ ಮತ್ತು ಭಾರತ ದೇಶಗಳು ರಕ್ಷಣಾ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಸಂಬಂಧ ಎಂಟು ಒಪ್ಪಂದಗಳಿಗೆ ಇಂದು ಸಹಿ ಮಾಡಿದವು.

ನವದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇದೇ ಸಮಯದಲ್ಲಿ ಎರಡೂ ರಾಷ್ಟ್ರಗಳು 8 ಒಪ್ಪಂದಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಷ್ಯಾ ದೊಂದಿಗೆ ಭಾರತದ ಸಂಬಂಧವು ಮುಂಚೆಯಿಂದಲೂ ಉತ್ತಮವಾಗಿಯೇ ಇದೆ. ಸಂಬಂಧ ಗಟ್ಟಿಗೊಳ್ಳಲು ಪುಟೀನ್ ಅವರ ಶ್ರಮ ಹೆಚ್ಚಿದೆ ಎಂದು ಮೋದಿ ಅವರು ಪುಟೀನ್ ಅವರನ್ನು ಹೊಗಳಿದರು.

ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್

ಇಂದಿನ ಪರಸ್ಪರ ಸಹಕಾರ ಒಪ್ಪಂದಗಳು ಎರಡೂ ದೇಶಗಳ ನಡುವಿನ ದೂರಗಾಮಿ ಸಂಬಂಧ ವೃದ್ಧಿಗೆ ಸಹಕಾರ ಮಾಡುವುದಲ್ಲದೆ. ಎರಡೂ ದೇಶಗಳ ಅಂತರರಾಷ್ಟ್ರೀಯ ಹಾಗೂ ಆಂತರಿಕ ಅಭಿವೃದ್ಧಿಗೆ ಭಾರಿ ಬಲ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಲವು ಕ್ಷೇತ್ರದಲ್ಲಿ ಪರಸ್ಪರ ಸಹಕಾರ

ಹಲವು ಕ್ಷೇತ್ರದಲ್ಲಿ ಪರಸ್ಪರ ಸಹಕಾರ

ಬಂಡವಾಳ ಹೂಡಿಕೆ, ಅರಣ್ಯಾಭಿವೃದ್ಧಿ, ಬಾಹ್ಯಾಕಾಶ, ಕೃಷಿ, ಭದ್ರತೆ, ವಿದೇಶಾಂಗ ನೀತಿ, ರಾಸಾಯನಿಕ ಇನ್ನೂ ಹಲವು ಕ್ಷೇತ್ರಗಳಲ್ಲಿ ರಷ್ಯಾ ಮತ್ತು ಭಾರತ ಪರಸ್ಪರ ಸಹಕಾರ ನೀಡಲಿವೆ. ವಿಶೇಷವಾಗಿ ಭಾರತವು 2022 ರವೇಳೆಗೆ ಚಂದ್ರನ ಮೇಲೆ ಮನುಷ್ಯನನ್ನು ಇಳಿಸಲು ಸಜ್ಜಾಗುತ್ತಿದ್ದು, ಇದಕ್ಕೆ ರಷ್ಯಾ ಭಾರಿ ಸಹಾಯ ಮಾಡುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಭಾರತೀಯ ಸೇನೆ ಸೇರುತ್ತಿದೆ ಭೀಕರ ಅಸ್ತ್ರ ಎಸ್‌-400, ಏನಿದರ ಸಾಮರ್ಥ್ಯ?ಭಾರತೀಯ ಸೇನೆ ಸೇರುತ್ತಿದೆ ಭೀಕರ ಅಸ್ತ್ರ ಎಸ್‌-400, ಏನಿದರ ಸಾಮರ್ಥ್ಯ?

ಹಲವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜೊತೆಗಿದೆ

ಹಲವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜೊತೆಗಿದೆ

ಭಾರತವು ರಷ್ಯಾದೊಂದಿಗೆ ಬ್ರಿಕ್ಸ್‌, ಜಿ-2೦, ಆಸಿಯಾನ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಂಡಳಿಗಳಲ್ಲಿ ಜೊತೆಯಾಗಿದೆ ಎಂದು ನೆನಪಿಸಿಕೊಂಡ ಅವರು, ಇದೇ ದಿನ ಸಂಜೆ ರಷ್ಯಾ ಹಾಗೂ ಭಾರತೀಯ ಉದ್ಯಮಿಗಳ ಸಮಿಟ್ ನಡೆಯಲಿದ್ದು ಇದು ಎರಡೂ ದೇಶಗಳಿಗೆ ಭಾರಿ ಸಹಾಯ ಮಾಡಲಿದೆ ಎಂದರು.

ಎರಡೂ ದೇಶಗಳಿಗೆ ಮಹತ್ವವಾದ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿಎರಡೂ ದೇಶಗಳಿಗೆ ಮಹತ್ವವಾದ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ

ಎರಡೂ ದೇಶಗಳ ಅಂತರರಾಷ್ಟ್ರೀಯ ಧ್ಯೇಯ ಒಂದೇ

ಎರಡೂ ದೇಶಗಳ ಅಂತರರಾಷ್ಟ್ರೀಯ ಧ್ಯೇಯ ಒಂದೇ

ರಷ್ಯನ್ ಭಾಷೆಯಲ್ಲಿ ಮಾತನಾಡಿದ ವ್ಯಾಡಿಮಿರ್ ಪುಟಿನ್ ಅವರು, ಭಾರತಕ್ಕೆ ಆಗಮಿಸುವುದು ಸದಾ ಸಂತೋಶದಾಯಕವೇ, ಭಾರತೀಯರು ನೀಡಿರುವ ನಿಷ್ಕಲ್ಮಶ ಸ್ನೇಹಕ್ಕೆ ರಷ್ಯಾ ಆಭಾರಿಯಾಗಿದೆ, ಎರಡೂ ದೇಶಗಳ ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಾರ್ಯಸೂಚಿ ಮತ್ತು ಧ್ಯೇಯ ಒಂದೇ ಆಗಿವೆ ಎಂದು ಅವರು ಹೇಳಿದರು.

2 ದಿನದ ಭಾರತ ಪ್ರವಾಸ : ದೆಹಲಿಗೆ ಆಗಮಿಸಿದ ವಾಡ್ಲಿಮಿರ್ ಪುಟಿನ್2 ದಿನದ ಭಾರತ ಪ್ರವಾಸ : ದೆಹಲಿಗೆ ಆಗಮಿಸಿದ ವಾಡ್ಲಿಮಿರ್ ಪುಟಿನ್

ಮೋದಿಯನ್ನು ರಷ್ಯಾಕ್ಕೆ ಆಹ್ವಾನಿಸಿದ ಪುಟಿನ್

ಮೋದಿಯನ್ನು ರಷ್ಯಾಕ್ಕೆ ಆಹ್ವಾನಿಸಿದ ಪುಟಿನ್

ರಷ್ಯಾದಲ್ಲಿ ಮುಂದಿನ ವರ್ಷ 2019ರಲ್ಲಿ ನಡೆಯಲಿರುವ ಸ್ಟಾಕ್‌ ಫೋರಮ್‌ಗೆ ಮುಖ್ಯ ಅತಿಥಿಯಾಗಿ ಮೋದಿ ಅವರನ್ನು ವ್ಲಾಡಿಮಿರ್ ಅವರು ಆಹ್ವಾನಿಸಿದರು. ಈಗಿ ಉಭಯ ದೇಶಗಳು ಮಾಡಿಕೊಂಡಿರುವ ಒಪ್ಪಂದದಿಂದ 2025 ರ ವೇಳೆಗೆ 30 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ. ಅಲ್ಲದೆ 16 ಬಿಲಿಯನ್ ಡಾಲರ್‌ ಪರಸ್ಪರ ಬಂಡವಾಳ ಹೂಡಿಕೆ ಮಾಡುವ ಗುರಿ ಇದೆ ಎಂದು ಪುಟಿನ್ ಹೇಳಿದರು.

ಯಾವ ಯಾವ ಒಪ್ಪಂದಗಳಿಗೆ ಸಹಿ ಹಾಕಲಾಯಿತು?

ಯಾವ ಯಾವ ಒಪ್ಪಂದಗಳಿಗೆ ಸಹಿ ಹಾಕಲಾಯಿತು?

ವಿದೇಶಾಂಗ ನೀತಿಯ ಬಗ್ಗೆ ಸಮಾಲೋಚನೆಯ ಒಪ್ಪಂದನ್ನು ಎರಡೂ ದೇಶದ ವಿದೇಶಾಗ ಸಚಿವರು ವಿನಿಮಯ ಮಾಡಿಕೊಂಡರು. ಆರ್ಥಿಕತೆಗೆ ಅಭಿವೃದ್ಧಿಗೆ ಪರಸ್ಪರ ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಯಿತು, ಇಸ್ರೋ ಮತ್ತು ರಷ್ಯಾ ಬಾಹ್ಯಾಕಾಶ ಸಂಸ್ಥೆಗಳು ಪರಸ್ಪರ ತಂತ್ರಜ್ಞಾನ ಸಹಕಾರ ನೀಡುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದವು, ಎರಡೂ ದೇಶಗಳ ರೈಲ್ವೆ ಇಲಾಖೆಗಳು ಪರಸ್ಪರ ಸಹಕಾರ ಮತ್ತು ಕಾರ್ಯಯೋಜನೆ ಹಂಚಿಕೆ ಕುರಿತ ಒಪ್ಪಂದ ವಿನಿಮಯ ಮಾಡಿಕೊಂಡವು. ಭದ್ರತೆ ಹಾಗೂ ನ್ಯೂಕ್ಲಿಯರ್ ಕ್ಷೇತ್ರದಲ್ಲಿ ತಂತ್ರಜ್ಞಾನ ಸಹಕಾರ ಒಪ್ಪಂದ ವಿನಿಮಯ ಸಹ ಇದೇ ಸಂದರ್ಭದಲ್ಲಿ ಆಯಿತು, ಸಂಚಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ, ಸಣ್ಣ ಉದ್ದಿಮೆ ಕ್ಷೇತ್ರದಲ್ಲಿ, ಮೈಕ್ರೋ ಮತ್ತು ಸಣ್ಣ ಉದ್ಯಮ ಕ್ಷೇತ್ರದಲ್ಲಿ ಪರಸ್ಪರ ಹೂಡಿಕೆಗೆ ಒಪ್ಪಂದ, ರಾಸಾಯನಿಕ ಗೊಬ್ಬರ, ಕೃಷಿ ಕ್ಷೇತ್ರದಲ್ಲಿ ರಷ್ಯಾದಿಂದ ಬಂಡವಾಳ ಹೂಡಿಕೆ ಒಪ್ಪಂದಗಳಿಗೆ ಸಹಿ ಮತ್ತು ವಿನಿಮಯ ಮಾಡಿಕೊಳ್ಳಲಾಯಿತು.

ಅಮೆರಿಕ, ಚೀನಾ, ಪಾಕ್‌ಗೆ ಕಿರಿಕಿರಿ

ಅಮೆರಿಕ, ಚೀನಾ, ಪಾಕ್‌ಗೆ ಕಿರಿಕಿರಿ

ಭಾರತಕ್ಕೆ ರಷ್ಯಾ ಭೇಟಿ ನೀಡಿರುವುದು ಅಮೆರಿಕ, ಪಾಕಿಸ್ತಾನ ಮತ್ತು ಚೀನಾ ದೇಶಕ್ಕೆ ಭಾರಿ ಕಿರಿ-ಕಿರಿ ಉಂಟು ಮಾಡಿದೆ. ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸದಂತೆ ಅಮೆರಿಕವು ನೇರವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದೆ. ಪುಟಿನ್‌ನ ಈ ಭಾರತ ಭೇಟಿಯನ್ನು ಮೂರು ದೇಶಗಳು ಬಿಟ್ಟ ಕಣ್ಣು ಬಿಟ್ಟಂತೆ ಗಮನಿಸುತ್ತಿದೆ. ಈ ಭೇಟಿ ನಂತರ ಭಾರತದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆ ಇದೆ.

English summary
Indian Prime minister Narendra Modi and Russia president Vladimir Putin holds joint press conference in New Delhi today. Both nations exchanges 8 memorandum of understand about different sectors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X