ಕೇದಾರನಾಥ, ಬದರಿನಾಥ ದರ್ಶನದಲ್ಲಿ ನರೇಂದ್ರ ಮೋದಿ

ಕೇದರ್‌ನಾಥ, ಮೇ 18: ಲೋಕಸಭಾ ಚುನಾವಣೆ 2019ರ ಸುಧೀರ್ಘ ಪ್ರಚಾರ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಎರಡು ದಿನಗಳ ಕಾಲ ದೇವರ ದರ್ಶನದಲ್ಲಿ ನಿರತರಾಗಲಿದ್ದಾರೆ.

ಎರಡು ದಿನಗಳ ಕಾಲ ಪ್ರಧಾನಿ ಮೋದಿ ಅವರು ಕೇದರ್‌ನಾಥ ಹಾಗೂ ಬದರಿನಾಥ್ ಕ್ಷೇತ್ರಗಳಿಗೆ ಅಧಿಕೃತ ಪ್ರವಾಸ ಹಮ್ಮಿಕೊಂಡಿದ್ದು, ಶನಿವಾರ ಅವರು ಕೇದರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಇದೊಂದು ಅಧಿಕೃತ ಭೇಟಿ ಆದ್ದರಿಂದ ಚುನಾವಣಾ ಆಯೋಗವು ಪ್ರಧಾನಿ ಕಚೇರಿಗೆ ಚುನಾವಣಾ ನೀತಿ ಸಂಹಿತೆ ಬಗ್ಗೆ ಎಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದೆ.

Narendra Modi two days visit to Kedarnath and Badarinath

ಮೋದಿ ಅವರು ಎರಡು ದಿನಗಳ ಕಾಲ ಕೇದಾರನಾಥ್ ಮತ್ತು ಬದರಿನಾಥ ಯಾತ್ರಾ ಸ್ಥಳಗಳ ಪ್ರವಾಸ ನಡೆಸಿ, ಭಾನುವಾರ ಸಂಜೆ ವೇಳೆಗೆ ನವದೆಹಲಿ ನಿವಾಸ ತಲುಪಲಿದ್ದಾರೆ.

ಮಾರ್ಚ್‌ 10ರಂದು ಪ್ರಾರಂಭವಾಗಿರುವ ನೀತಿಸಂಹಿತೆಯು ಇನ್ನೂ ಜಾರಿಯಲ್ಲಿದ್ದು, ಫಲಿತಾಂಶ ಬಂದು ಹೊಸ ಲೋಕಸಭೆ ರಚನೆ ಆಗುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಚುನಾವಣಾ ಆಯೋಗವು ಪ್ರಧಾನಿ ಕಾರ್ಯಾಲಯಕ್ಕೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+