ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛ ಭಾರತ ಅಭಿಯಾನಕ್ಕೆ 9 ಗಣ್ಯರನ್ನು ಆಹ್ವಾನಿಸಿದ ಮೋದಿ

|
Google Oneindia Kannada News

ನವದೆಹಲಿ, ಡಿ. 25 : ತಮ್ಮ ಸ್ವ ಕ್ಷೇತ್ರ ವಾರಣಾಸಿಗೆ ಗುರುವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ 9 ಮಂದಿ ಗಣ್ಯರನ್ನು ನಾಮನಿರ್ದೇಶನ ಮಾಡಿದ್ದಾರೆ. ಸೌರವ್ ಗಂಗೂಲಿ, ಕಪಿಲ್ ಶರ್ಮಾ, ಕಿರಣ್ ಬೇಡಿ ನಾಮ ನಿರ್ದೇಶನಗೊಂಡ ಪ್ರಮುಖರು.

ತಮ್ಮ ಸ್ವ ಕ್ಷೇತ್ರ ಅಸ್ಸಿಘಾಟ್‌ನಲ್ಲಿ ಪ್ರಧಾನಿ ಮೋದಿ ಗುರುವಾರ ಸ್ಚಚ್ಛತಾ ಭಾರತ ಅಭಿಯಾನದ ಪರಿಶೀಲನೆ ನಡೆಸಿದರು. ನ.8ರಂದು ಮೋದಿ ಇಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ 9 ಜನರ ಹೆಸರನ್ನು ನಾಮನಿರ್ದೇಶನ ಮಾಡಿದರು.

swachh bharat

ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ, ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ, ಒಡಿಸ್ಸಿ ನೃತ್ಯ ಕಲಾವಿದೆ ಸೋನಾಲ್ ಮನ್‌ಸಿಂಗ್, ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ಕಪಿಲ್ ಶರ್ಮಾ, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ರಾಮೋಜಿ ರಾವ್ ಮತ್ತು ಡಬ್ಬಾವಾಲಾಗಳ ಸಂಘ ಮತ್ತು ಈ ನಾಡು ಸಮೂಹ ಸಂಸ್ಥೆಗಳನ್ನು ಮೋದಿ ನಾಮ ನಿರ್ದೇಶನ ಮಾಡಿದ್ದಾರೆ. [ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]

ಅ.2ರಂದು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿದ ಮೋದಿ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು. ಮದನ್ ಮೋಹನ್ ಮಾಳವೀಯ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. [ಸ್ವಚ್ಛ ಭಾರತಕ್ಕೆ 9 ಜನರನ್ನು ಆಹ್ವಾನಿಸಿದ ಮೋದಿ]

modi

ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕ್ರಿಕೆಟಿಗರಾದ ಮಹಮದ್ ಕೈಫ್, ಸುರೇಶ್ ರೈನಾ, ಗಾಯಕ ಕೈಲಾಶ್ ಕೇರ್, ಸಾಹಿತಿ ಮನು ಶರ್ಮಾ ಮುಂತಾದವರ ಹೆಸರನ್ನು ಸ್ವಚ್ಭ ಭಾರತ ಅಭಿಯಾನಕ್ಕೆ ನಾಮನಿರ್ದೇಶನ ಮಾಡಿದ್ದರು. [ಪಿಟಿಐ ಚಿತ್ರ]

English summary
Prime Minister Narendra Modi named popular stand-up comedian and host Kapil Sharma among nine people and organizations to take forward the Swachh Bharat Abhiyaan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X