ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ನೆಲದಲ್ಲಿ ನಿತೀಶ್ ಗೆ ಕುಟುಕಿದ ಮೋದಿ!

|
Google Oneindia Kannada News

ಪಾಟ್ನಾ, ಮಾ.3 : "ಮಾನವೀಯತೆಗೆ ಭಯೋತ್ಪಾದನೆ ಮುಳುವಾಗಿದೆ. ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ನಿತೀಶ್ ಕುಮಾರ್ ಸರ್ಕಾರದ ನಿರ್ಣಯಗಳಿಂದಾಗಿ ಭಯೋತ್ಪಾದಕರಿಗೆ ಬಿಹಾರ ಸ್ವರ್ಗವಾಗಿದೆ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮ ರಾಜಕೀಯ ಕಡು ವಿರೋಧಿಯನ್ನು ಅವರ ನೆಲದಲ್ಲಿಯೇ ಕುಟುಕಿದ್ದಾರೆ.

ಸೋಮವಾರ ನರೇಂದ್ರ ಮೋದಿ ಬಿಹಾರದ ಮುಜಫರ್ ಪುರ್ ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಎನ್ ಡಿಎ ಮೈತ್ರಿಕೂಟ ಸೇರಿದ ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಮೊದಲ ಬಾರಿಗೆ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

Modi address rally in bihar

ತಮ್ಮ ಭಾಷಣದಲ್ಲಿ ಅ.27ರಂದು ಪಾಟ್ನಾದ ಹೂಂಕಾರ್ ಸಮಾವೇಶದ ಸಂದರ್ಭದಲ್ಲಿ ನಡೆದ ಬಾಂಬ್ ಸ್ಫೋಟವನ್ನು ನೆನಪು ಮಾಡಿಕೊಂಡ ಮೋದಿ, ಮಾನವೀಯತೆ ಭಯೋತ್ಪಾದನೆ ಬೆದರಿಕೆ ಒಡ್ಡುತ್ತಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ, ಬಿಹಾರ ಭಯೋತ್ಪಾದಕರಿಗೆ ಸ್ವರ್ಗವಾಗಿದೆ ಎಂದು ಆರೋಪಿಸಿದರು. [ಮೋದಿ ಹುಬ್ಬಳ್ಳಿಯಲ್ಲಿ ಹೇಳಿದ್ದೇನು?]

ಮೋದಿ ಭಾಷಣದ ಮುಖ್ಯಾಂಶಗಳು
* ನನ್ನ ಗುರಿ ದೇಶದ ವಿಕಾಸ, ಕಾಂಗ್ರೆಸ್ ಗುರಿ ಮೋದಿ ವಿನಾಶ. ಇವರಲ್ಲಿ ಯಾರು ಗೆಲುವು ಸಾಧಿಸಬೇಕು ಎಂದು ಜನರು ತೀರ್ಮಾನಿಸುತ್ತಾರೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಗುಡುಗಿದರು.

* ನಾವು ಭ್ರಷ್ಟಾಚಾರ ತಡೆಯಿರಿ ಎಂದರೆ, ಕಾಂಗ್ರೆಸ್ ಮೋದಿಯನ್ನು ತಡೆಯಿರಿ ಎನ್ನುತ್ತದೆ. ಭ್ರಷ್ಟಾಚಾರವನ್ನು ನಿಲ್ಲಿಸಿ ಎಂದರೆ ಮೋದಿ ನಿಲ್ಲಿಸಿ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ವಿಚಾರವನ್ನು ಬಿಟ್ಟು ಉಳಿದ ವಿಷಯವನ್ನು ಮಾತನಾಡುತ್ತದೆ ಎಂದು ನರೇಂದ್ರ ಮೋದಿ ಆರೋಪಿಸಿದರು. [ಮೋದಿ ಗುಲ್ಬರ್ಗದಲ್ಲಿ ಹೇಳಿದ್ದೇನು?]

* ಭಯೋತ್ಪಾದನೆ ಮಾನವೀಯತೆ ಬೆದರಿಕೆ ಒಡ್ಡುತ್ತಿದೆ. ಬಿಹಾರ ಸರ್ಕಾರದ ವೋಟ್ ಬ್ಯಾಂಕ್ ರಾಜಕೀಯದ ಪರಿಣಾಮದಿಂದಾಗಿ ಬಿಹಾರ ಇಂದು ಭಯೋತ್ಪಾದಕರಿಗೆ ಸ್ವರ್ಗವಾಗುತ್ತಿದೆ ಎಂದು ತಮ್ಮ ರಾಜಕೀಯ ಕಡುವಿರೋಧಿ ನಿತೀಶ್ ಕುಮಾರ್ ಅವರಿಗೆ ಮೋದಿ ಅವರ ನೆಲದಲ್ಲಿಯೇ ಕುಟುಕಿದರು.

* ಬಿಹಾರ ರಾಜ್ಯದ ಜನರಿಗೆ 24 ಗಂಟೆಯೂ ವಿದ್ಯುತ್ ಸೌಲಭ್ಯ ಬೇಕು, ರಾಜ್ಯದ ಬಹುತೇಕ ಮನೆಗಳಲ್ಲಿ ಶೌಚಾಲಯದ ಸೌಲಭ್ಯವಿಲ್ಲ. ದೇಶದ ಪ್ರತಿಯೊಂದು ಮನೆಗೂ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ನಾವು ಪ್ರಯತ್ನಿಸುತ್ತೇವೆ. ನಮ್ಮನ್ನು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿ ಎಂದರು.

* ದೇಶದಲ್ಲಿ ಯುವಶಕ್ತಿ ಹೆಚ್ಚಿದೆ. ಯುವಕರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಎಂದು ಹೇಳಿದರೆ, ಕೇಂದ್ರ ಯುಪಿಎ ಸರ್ಕಾರ ಜಾತ್ಯಾತೀತತೆ ಅವನತಿಯಾಗುತ್ತಿದೆ ಎಂದು ಮಾತನಾಡುತ್ತದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

* ಸಿಬಿಐ ಭಯದಿಂದಾಗಿ ಹಲವು ಪಕ್ಷಗಳು ಸೇರಿಕೊಂಡು ತೃತೀಯ ರಂಗವನ್ನು ರಚಿಸಿಕೊಂಡಿವೆ. ಚುನಾವಣೆ ಸಮಯದಲ್ಲಿ ಮಾತ್ರ ತೃತೀಯ ರಂಗ ಹುಟ್ಟಿಕೊಳ್ಳುತ್ತದೆ. ತೃತೀಯ ರಂಗ ಕಾಂಗ್ರೆಸ್ ರಕ್ಷಿಸಲು ಕೆಲಸಮ ಮಾಡುತ್ತದೆ. ಇದರ ಬೂಟಾಟಿಕೆ ಬಗ್ಗೆ ಜನರಿಗೆ ತಿಳಿದಿದೆ ಎಂದು ಮೋದಿ ತೃತೀಯ ರಂಗವನ್ನು ತರಾಟೆಗೆ ತೆಗೆದುಕೊಂಡರು.

English summary
BJP's prime ministerial candidate Narendra Modi addressed a rally in Muzaffarpur Bihar on Monday, March 3. Former Deputy CM Sushilkumar Modi, LJP leader Ram Vilas Paswan, Rajiv Pratap Rudy share stage with Modi. In his speech Modi said, terrorism was a threat to humanity. Sadly Bihar has become a haven for terrorist activity due to government's votebank politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X