Godhra Riot: ಸಬರಮತಿ ರಿಪೋರ್ಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್, ವೈರಲ್!
ಪ್ರಧಾನಿ ನರೇಂದ್ರ ಮೋದಿ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಒಂದು ಟ್ವೀಟ್ ಮಾಡಿದ್ದು. ಈ ಟ್ವೀಟ್ ಅತ್ಯಂತ ಮಾರ್ಮಿಕವಾಗಿದೆ. ಸಬರಮತಿ ರಿಪೋರ್ಟ್ (#SabarmatiReport ) ಸಿನಿಮಾವನ್ನು ನಾನು ಯಾಕೆ ನೋಡಲೇಬೇಕು ಎಂದು ನಾನು ಏಕೆ ಭಾವಿಸುತ್ತೇನೆ. ನನ್ನ ಅಭಿಪ್ರಾಯಗಳು ಈ ರೀತಿ ಇವೆ ಎಂದು ಅಲೋಕ್ ಭಟ್ ಎನ್ನುವವರು ಟ್ವೀಟ್ ಮಾಡಿದ್ದು. ಆ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ರೀ ಟ್ವೀಟ್ ಮಾಡಿ ಮಾರ್ಮಿಕ ಸಂದೇಶ ಹಂಚಿಕೊಂಡಿದ್ದಾರೆ.
ಹಿಂದಿಯ (ಬಾಲಿವುಡ್)ಲ್ಲಿ (The Sabarmati Report) ದಿ ಸಬರಮತಿ ರಿಪೋರ್ಟ್ ಎನ್ನುವ ಸಿನಿಮಾ ಬಿಡುಗಡೆಯಾಗಿದೆ. ಇದು ಗುಜರಾತ್‌ನಲ್ಲಿ 2002 ನಡೆದ ಗೋಧ್ರಾ ರೈಲು ದುರಂತವನ್ನು ಆಧರಿಸಿ ನಿರ್ಮಿಸಲಾಗಿರುವ ಚಿತ್ರವಾಗಿದೆ. ಇದೀಗ ಅಲೋಕ್ ಭಟ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುರುವ ಪ್ರಧಾನಿ ನರೇಂದ್ರ ಮೋದಿ ಅವರು, ಚೆನ್ನಾಗಿ ಹೇಳಿದ್ದೀರಿ.

ಈ ಸತ್ಯ ಹೊರಬರುತ್ತಿರುವುದು ಒಳ್ಳೆಯದೇ, ಜನ ಸಾಮಾನ್ಯರು ಇದನ್ನು ನೋಡುವಂತಾಗಿದೆ. ನಕಲಿ (ಗೋಧ್ರಾ ದುರಂತರದ ಬಗ್ಗೆ ಸುಳ್ಳು) ನಿರೂಪಣೆಯು ಯಾವಾಗಲೂ ಇರಲ್ಲ. ಒಂದು ಹಂತದ ವರೆಗೆ ಮಾತ್ರ ಅದು ಇರಬಹುದು. ಕೊನೆಯದಾಗಿ ಸತ್ಯಗಳು ಯಾವಾಗಲೂ ಹೊರಬರುತ್ತವೆ! ಎಂದಿದ್ದಾರೆ.
ಗೋಧ್ರಾ ರೈಲು ಹತ್ಯಾಕಾಂಡ ಅಥವಾ ಗೋಧ್ರಾ ರೈಲು ದುರಂತವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ವಿವಿಧ ಘಟನೆಗಳ ಆಧಾರದ ಮೇಲೆ ಬಾಲಿವುಡ್ ಚಿತ್ರರಂಗವು ಸಿನಿಮಾಗಳನ್ನು ಮಾಡುತ್ತಿದೆ. ಅದರ ಹಿಂದೆ ವಿವಿಧ ರಾಜಕೀಯ ಪಕ್ಷಗಳ ಕೈವಾಡವಿದೆ ಎನ್ನುವ ಆರೋಪವೂ ಇದೆ. ಈ ನಡುವೆ ಇದೀಗ ಬಿಡುಗಡೆಯಾಗಿರುವ ದಿ ಸಬರಮತಿ ರಿಪೋರ್ಟ್ ಸಹ ಇಂತಹದ್ದೇ ವಿರ್ಮಶೆಗೆ ಒಳಗಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ.
Well said. It is good that this truth is coming out, and that too in a way common people can see it.
— Narendra Modi (@narendramodi) November 17, 2024
A fake narrative can persist only for a limited period of time. Eventually, the facts will always come out! https://t.co/8XXo5hQe2y
ಅಲೋಕ್ ಭಟ್ ಎನ್ನುವವರು ಟ್ವಿಟ್ಟರ್ (ಎಕ್ಸ್)ನಲ್ಲಿ ಟ್ವೀಟ್ ಮಾಡಿದ್ದು. ನರೇಂದ್ರ ಮೋದಿ ಅವರನ್ನು ಮೆನ್ಷನ್ (ಹೆಸರು ಟ್ಯಾಗ್) ಮಾಡಿದ್ದಾರೆ.
ಅಲೋಕ್ ಭಟ್ ಎನ್ನುವವರು ಮಾಡಿರುವ ಟ್ವೀಟ್‌ನಲ್ಲಿ ಏನಿದೆ ?
ಸಬರಮತಿ ರಿಪೋರ್ಟ್ ಎನ್ನುವ ಸಿನಿಮಾದ ಬಗ್ಗೆ ಅವರು ನಾಲ್ಕು ಪಾಯಿಂಟ್ಸ್‌ಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
1. ಈ ಸಿನಿಮಾದ ಪ್ರಯತ್ನವು ವಿಶೇಷವಾಗಿದೆ ಅಲ್ಲದೇ ಶ್ಲಾಘನೀಯ. ಏಕೆಂದರೆ ಇದು ಇತಿಹಾಸದಲ್ಲಿ ಅತ್ಯಂತ ನಾಚಿಕೆಗೇಡಿನ ಘಟನೆಗಳ ಪ್ರಮುಖ ಸತ್ಯವನ್ನು ಹೊರತರುತ್ತದೆ ಎಂದಿದ್ದಾರೆ.
2. ಈ ಚಿತ್ರವನ್ನು ನಿರ್ದೇಶಕರು ಈ ಸಮಸ್ಯೆಯನ್ನು ಬಹಳ ಸೂಕ್ಷ್ಮತೆ ಮತ್ತು ಘನತೆಯಿಂದ ನಿಭಾಯಿಸಿದ್ದಾರೆ.
3. ಸಾಬರಮತಿ ಎಕ್ಸ್‌ಪ್ರೆಸ್‌ನ ಪ್ರಯಾಣಿಕರನ್ನು ಕ್ರೂರವಾಗಿ ಸುಟ್ಟುಹಾಕುವುದನ್ನು ಪಟ್ಟಭದ್ರ ಹಿತಾಸಕ್ತಿ ಗುಂಪು ಹೇಗೆ ರಾಜಕೀಯಗೊಳಿಸಲಾಯಿತು ಎನ್ನುವುದು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಲು ಯೋಗ್ಯವಾಗಿದೆ. ಒಂದರ ಹಿಂದೆ ಒಂದು ಸುಳ್ಳು ಹೇಗೆ ಎಣೆಯಲಾಗಿತ್ತು ಎನ್ನುವುದು ಇದರಲ್ಲಿ ಇದೆ.
4. ಅಂತಿಮವಾಗಿ 59 ಅಮಾಯಕ ಜನ ಅವರ ಪರವಾಗಿ ಮಾತನಾಡುತ್ತಿದ್ದಾರೆ (ಸಿನಿಮಾದ ಮೂಲಕ ಆ ಸತ್ಯ ಅಥವಾ ವಾಸ್ತವಾಂಶ ಬಂದಿದೆ ಎಂಬರ್ಥದಲ್ಲಿ). ಹೌದು, ಅವರು ಹೇಳಿದಂತೆ, ಸತ್ಯ ಮಾತ್ರ ಗೆಲ್ಲುತ್ತದೆ. ಈ ಚಲನಚಿತ್ರವು ಫೆಬ್ರವರಿಯ ಬೆಳಿಗ್ಗೆ ನಾವು ಕಳೆದುಕೊಂಡ 59 ಜನ ಮುಗ್ಧ ಜನರಿಗೆ ನೀಡುವ ಸೂಕ್ತವಾದ ಗೌರವವಾಗಿದೆ ಎಂದು ಅವರು ಹೇಳಿದ್ದಾರೆ. ಇದೀಗ ಈ ಟ್ವೀಟ್ ಭಾರೀ ವೈರಲ್ ಆಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications