• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಮನ್ ಕೀ ಬಾತ್ ಭಾಷಣ; ಮುಖ್ಯಾಂಶಗಳು

|

ನವದೆಹಲಿ, ನವೆಂಬರ್ 29 : ಭಾರತದ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 71ನೇ ಕಾರ್ಯಕ್ರಮ ಇದಾಗಿದೆ.

ಹೈದರಾಬಾದ್‌ನ ಭಾರತ್ ಬಯೋಟೆಕ್ ಕೊರೊನಾ ಲಸಿಕೆ ಕೇಂದ್ರಕ್ಕೆ ಮೋದಿ ಭೇಟಿ

ದೇಶದ ಎಲ್ಲಾ ಜನರಿಗೆ ನಮಸ್ಕಾರಗಳು, ದೇಶದ ಜನರಿಗೆ ಸಿಹಿಸುದ್ದಿಯನ್ನು ನೀಡುತ್ತೇನೆ, "ಕೆನಡಾದಿಂದ ಅನ್ನಪೂರ್ಣ ದೇವಿಯ ಪ್ರತಿಮೆ ದೇಶಕ್ಕೆ ವಾಪಸ್ ಆಗುತ್ತಿದೆ" ಎಂದು ಮೋದಿ ಭಾಷಣವನ್ನು ಆರಂಭಿಸಿದರು.

ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ

ಹಲವು ವರ್ಷಗಳಿಂದ ಭಾರತ ಪುರಾತನ ಪ್ರತಿಮೆಯನ್ನು ವಾಪಸ್ ತರುವ ಕೆಲಸವನ್ನು ಮಾಡುತ್ತಿದೆ. ವಾರಣಾಸಿಯಿಂದ ಕಾಣೆಯಾಗಿದ್ದ ಅನ್ನಪೂರ್ಣ ದೇವಿಯ ಪ್ರತಿಮೆಯನ್ನು ವಾಪಸ್ ತರಲಾಗುತ್ತಿದೆ. ಭಾರತದ ಕಡೆಯಿಂದ ಕೆನಡಾಕ್ಕೆ ಅಭಿನಂದನೆಗಳು ಎಂದರು.

ಭಾರತದ ಯಾವ ರಾಜ್ಯಗಳಲ್ಲಿ ಯಾವಾಗ ತೆರೆಯುತ್ತೆ ಶಾಲಾ-ಕಾಲೇಜು?

ಇಂದು ತಂತ್ರಜ್ಞಾನದ ಸಹಾಯದಿಂದಾಗಿ ನಾವು ದೆಹಲಿಯ ಮ್ಯೂಸಿಯಂ ಅನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ. ವರ್ಚುವಲ್ ಮ್ಯೂಸಿಯಂನಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು.

ಮೇಘಾಲಯ ರಾಜ್ಯದ ಶಿಲ್ಲಾಂಘ್‌ನ ಫೋಟೋವೊಂದನ್ನು ಮನ್ ಕೀ ಬಾತ್‌ನಲ್ಲಿ ತೋರಿಸಿದ ಮೋದಿ, ಇದು ಜಪಾನ್‌ ಪೋಟೋವಲ್ಲ ನಮ್ಮ ದೇಶದ ಚಿತ್ರ. ಕೋವಿಡ್ ಸಮಯದಲ್ಲಿ ಪ್ರಕೃತಿಯೊಂದಿಗೆ ಕಾಲ ಕಳೆಯಲು ನಮಗೆ ಅವಕಾಶ ಸಿಕ್ಕಿದೆ ಎಂದರು.

ಭಾರತಕ್ಕೆ ಭೇಟಿ ನೀಡಿದ ಹಲವಾರು ವಿದೇಶಿಗರು ತಮ್ಮ ದೇಶಕ್ಕೆ ವಾಪಸ್ ಆದ ಬಳಿಕ ಇಲ್ಲಿಯ ಪಾಕೃತಿಕ ಸೌಂದರ್ಯವನ್ನು ಅಲ್ಲಿಯ ಜನರಿಗೆ ತಿಳಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಬ್ರೆಜಿಲ್‌ನಲ್ಲಿ ಜೋಸಮ್ ಇಂತಹ ಕೆಲಸ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಕಲಿಯಲು ದೇಶಕ್ಕೆ ಬಂದಿದ್ದ ಅವರು ಅಲ್ಲಿ ಈಗ ವೇದಾಂತದ ತರಗತಿಗಳನ್ನು ನಡೆಸುತ್ತಿದ್ದಾರೆ. ವೇದಾಂತದ ಪ್ರಚಾರಕ್ಕೆ ಅವರು ತಂತ್ರಜ್ಞಾನದ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ನ್ಯೂಜಿಲೆಂಡ್‌ನಲ್ಲಿ ನೂತನ ಸಂಸದರು ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿ ಪ್ರಮಾಣ ವಚವನ್ನು ಸ್ವೀಕರಿಸಿದರು. ನಾನು ಭಾರತದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಿಗೆ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂದು ಹಾರೈಸಿದರು.

ಭಾರತೀಯ ಸಂಸ್ಕೃತಿ ಅನೇಕ ರಾಷ್ಟ್ರಗಳಿಗೆ ಮಾದರಿಯಾಗಿದೆ. ಹಲವು ದೇಶಗಳು ನಮ್ಮ ಸಂಸ್ಕೃತಿ ಅರಿಯುವ ಪ್ರಯತ್ನ ಮಾಡುತ್ತಿವೆ. ನಮ್ಮ ದೇಶದ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಸಿಖ್ ಸಮಯದಾಯದ ಬಗ್ಗೆ ಮಾತನಾಡಬೇಕು.

ಗುರುನಾನಾಕ್ ಜಯಂತಿಯ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಕೋರಿದರು. ಸಲೀಂ ಅಲಿ ಅವರ ಜನ್ಮದಿನವನ್ನು ಮೋದಿ ನೆನಪು ಮಾಡಿಕೊಂಡರು.

ದೇಶದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಐಐಟಿ ದೆಹಲಿ, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕ್ಕಿದೆ.

ಇಂತಹ ಕಾರ್ಯಕ್ರಮಗಳಿಗೆ ಅಕ್ಕ-ಪಕ್ಕದ ಶಾಲೆಗಳ ವಿದ್ಯಾರ್ಥಿಗಳನ್ನು ಅತಿಥಿಗಳಾಗಿ ಕರೆಸಬೇಕು ಎಂದು ಹೇಳಿದ್ದೇನೆ. ವಿದ್ಯಾರ್ಥಿಗಳು ಪದಕ ಪಡೆಯುವುದು ಬೇರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಿದೆ. ನಾನು ಸಹ ಡಾಕ್ಟರ್, ಇಂಜಿನಿಯರ್ ಆಗಬೇಕು ಎಂಬ ಕನಸನ್ನು ಅವರಲ್ಲಿ ಬಿತ್ತಲಿದೆ ಎಂದು ಮೋದಿ ಹೇಳಿದರು.

ಇಂದು ನಾವು ಆತ್ಮ ನಿರ್ಭರ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಅರಬಿಂದೊ ಘೋಷ್ ನೆನಪು ಮಾಡಿಕೊಳ್ಳಬೇಕು. ಬಂಗಾಳದಲ್ಲಿ ಅವರು ಮಾಡಿ ವೋಕಲ್ ಫಾರ್ ಲೋಕಲ್ ಕಾರ್ಯಗಳನ್ನು ತಿಳಿಯಬೇಕು, ಅವರ ಬಗ್ಗೆ ನಾವು ಓದಿ ತಿಳಿದುಕೊಳ್ಳಬೇಕು ಎಂದರು.

ಅರಬಿಂದೊ ಘೋಷ್ ನಮ್ಮ ಶಿಕ್ಷಣ ವ್ಯವಸ್ಥೆ ಪುಸ್ತಕ, ಪರೀಕ್ಷೆಗಳಿಗೆ ಸೀಮಿತವಾರಬಾರದು ಎಂದು ಹೇಳಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ಯುವಕರ ಭವಿಷ್ಯದ ತರಬೇತಿಯ ಮಾರ್ಗವಾಗಬೇಕು ಎಂದು ಹೇಳಿದ್ದರು. ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದನ್ನು ಸಾಕಾರಗೊಳಿಸಿದ್ದೇವೆ ಎಂದು ಮೋದಿ ಹೇಳಿದರು.

ಹೊಸ ಕೃಷಿ ಮಸೂದೆ ಜೀತೇಂದ್ರ ಎಂಬ ರೈತನಿಗೆ ಹೇಗೆ ಸಹಾಯಕವಾಗಿದೆ ಎಂದು ಮೋದಿ ಮನ್ ಕೀ ಬಾತ್‌ನಲ್ಲಿ ವಿವರಣೆ ನೀಡಿದರು. ಮೊದಲು ಫಲಸು ಮಾರಿ ತಿಂಗಳು ಕಳೆದರೂ ರೈತ ಜೀತೇಂದ್ರಗೆ ಹಣ ಸಿಗುತ್ತಿರಲಿಲ್ಲ. ಈಗ ಮೂರು ದಿನದಲ್ಲಿ ಹಣ ಸಿಗುತ್ತಿದೆ ಎಂದು ಮೋದಿ ವಿವರಣೆಯನ್ನು ನೀಡಿದರು. ಈಗ ಜೀತೇಂದ್ರ ಅವರು ಆನ್‌ಲೈನ್ ಮೂಲಕ ಬೆಳೆಗಳನ್ನು ಮಾರಾಟ ಮಾಡಲು ಉಳಿದ ರೈತರಿಗೆ ಸಹ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ಇಡೀ ವಿಶ್ವಕ್ಕೆ ಕೋವಿಡ್ ಮೊದಲ ಪ್ರಕರಣ ಪತ್ತೆಯಾಗಿ ಒಂದು ವರ್ಷವಾಗಿದೆ. ಇದನ್ನು ನಾವು ಸಂತಸದಿಂದ ನೆನಪು ಮಾಡಿಕೊಳ್ಳಬೇಕಿಲ್ಲ. ಆದರೆ, ಕೋವಿಡ್ ಇನ್ನೂ ನಮ್ಮ ನಡುವೆಯೇ ಇದೆ ಎಂಬುದನ್ನು ಮರೆಯಬಾರದು.

ಲಾಕ್ ಡೌನ್‌ನಿಂದ ಆರಂಭವಾದ ಮಾತು ಇಂದು ವ್ಯಾಕ್ಸಿನ್ ತನಕ ಬಂದು ನಿಂತಿದೆ. ಮಕ್ಕಳು, ಹಿರಿಯರ ಬಗ್ಗೆ ನಾವು ಸದಾ ಕಾಳಜಿ ವಹಿಸಬೇಕು. ಕೋವಿಡ್ ಪತ್ತೆಯಾದ ಬಳಿಕ ಹಲವಾರು ಬದಲಾವಣೆಗಳು ಆಗಿವೆ.

ಮುಂದಿನ ಮನ್ ಕೀ ಬಾತ್‌ನಲ್ಲಿ ನಾವು ಭೇಟಿಯಾದಾಗ ವರ್ಷದ ಅಂತ್ಯದಲ್ಲಿ ನಾವು ಇರುತ್ತೇವೆ. ಎಲ್ಲರೂ ಆರೋಗ್ಯವಾಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತನ್ನು ಮುಗಿಸಿದರು.

English summary
Prime minister of India Narendra Modi Mann ki baat radio program November 29, 2020. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X